ಕಸ ವಿಲೇವಾರಿ ಅಸಡ್ಡೆ: ಬಿಬಿಎಂಪಿಗೆ ಹೈಕೋರ್ಟ್ ತಪರಾಕಿ
ಬೆಂಗಳೂರು, ಜೂನ್ 29: ಕಸ ವಿಲೇವಾರಿಯಲ್ಲಿ ಬಿಬಿಎಂಪಿಯ ಅಸಡ್ಡೆಯನ್ನು ಗಮನಿಸಿದ ಹೈಕೋರ್ಟ್ ಬಿಬಿಎಂಪಿ ಮಂಗಳಾರತಿ ಎತ್ತಿದೆ. 'ಬಿಬಿಎಂಪಿ ಕೆಲಸ ಮಾಡುತ್ತಿದೆಯಾ ಇಲ್ಲವಾ' ಎಂದು ಗರಂ ಆಗಿದೆ.
ಕಸ ವಿಲೇವಾರಿ ಟೆಂಡರ್ ಅನ್ನು ಬಿಬಿಎಂಪಿ ರದ್ದು ಮಾಡಿದ್ದನ್ನು ಪ್ರಶ್ನಿಸಿಮಾತಾ ಓವರ್‌ಸೀಸ್ ಸಂಸ್ಥೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಧೀಶರು ಬಿಬಿಎಂಪಿ ಪರ ವಕೀಲರ ಮುಖಾಂತರ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಲಿಕೆಯ ಪ್ರಮುಖ ಆದ್ಯತೆ ಸ್ವಚ್ಛತೆ ಆಗಿರಬೇಕು, ಕಸ ವಿಲೇವಾರಿ ಮತ್ತು ನಿರ್ವಹಣೆ ಬಿಬಿಎಂಪಿಯ ಆದ್ಯ ಕರ್ತವ್ಯವಾಗಬೇಕು, ಆದರೆ ಬಿಬಿಎಂಪಿ ನಡವಳಿಕೆಗಳು ಕಸ ವಿಲೇವಾರಿ ಬಗ್ಗೆ ಅದರ ಅಸಡ್ಡೆಯನ್ನು ಎತ್ತಿ ತೋರುತ್ತಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

ಟೆಂಡರ್‌ಗೆ ಬ್ಯಾಂಕ್ ಭದ್ರತೆ ನೀಡಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿಯು ಕಸ ವಿಲೇವಾರಿ ಟೆಂಡರ್ ಅನ್ನು ರದ್ದು ಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಾತಾ ಓವರ್‌ಸೀಸ್ ಸಂಸ್ಥೆಯು ಕೋರ್ಟ್ ಮೆಟ್ಟಿರಿತ್ತು.












Click it and Unblock the Notifications