Namma Metro: ಜ್ಯೋತಿಪುರ ಮೆಟ್ರೋ ನಿಲ್ದಾಣ ರಸ್ತೆ ವಿಸ್ತರಣೆಗೆ ಭೂಮಿ ವಶಪಡಿಸಿಕೊಳ್ಳಲು ಹೈಕೋರ್ಟ್ ಹಸಿರು ನಿಶಾನೆ

ಬೆಂಗಳೂರು, ಜುಲೈ 26: ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ ದೊಡ್ಡ ತಡೆಯೊಂದು ತೆರವಾಗಿದೆ, ಜ್ಯೋತಿಪುರ ಮೆಟ್ರೊ ನಿಲ್ದಾಣದ ಬಳಿಯ ರಸ್ತೆಯ ವಿಸ್ತರಣೆಯನ್ನು ಪೂರ್ಣಗೊಳಿಸಲು ಮತ್ತು ನಿಲ್ದಾಣಕ್ಕೆ ಫುಟ್‌ಪಾತ್‌ಗಳನ್ನು ನಿರ್ಮಿಸಲು ಅಪಾರ್ಟ್ಮೆಂಟ್ ಸಂಕೀರ್ಣದಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ.

ಕಳೆದ ವಾರ ನ್ಯಾಯಾಲಯವು 119 ಚದರ ಮೀಟರ್ ಸ್ವಾಧೀನಕ್ಕೆ ಮುಂದುವರಿಯಲು ಮತ್ತು 2.58 ಕೋಟಿ ರೂಪಾಯಿಗಳ ಪರಿಹಾರವನ್ನು ಸಿವಿಲ್ ನ್ಯಾಯಾಲಯಕ್ಕೆ ಠೇವಣಿ ಮಾಡಲು ಬಿಎಂಆರ್‌ಸಿಎಲ್‌ ಗೆ ಸೂಚನೆ ನೀಡಿದೆ.

 High Court Green Signal Land Acquisition For Bengaluru Metros Road Widening Project

"ಬಿಎಂಆರ್‌ಸಿಎಲ್‌ ಗೆ ಈ ಸಂಕೀರ್ಣದಲ್ಲಿ 261 ಚದರ ಮೀಟರ್ ಭೂಮಿ ಅಗತ್ಯವಿತ್ತು ಆದರೆ ಅಪಾರ್ಟ್ಮೆಂಟ್ ನಿವಾಸಿಗಳೊಂದಿಗೆ ಮಾತುಕತೆಯ ನಂತರ, 119 ಚದರ ಮೀಟರ್ ಅನ್ನು ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಇದರಿಂದ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಹೆಚ್ಚು ತೊಂದರೆಯಾಗುವುದಿಲ್ಲ ಎಂದು ಹೇಳಲಾಗಿದೆ. ಅವರಿಗೆ ಸುತ್ತಮುತ್ತಲಿನ ಅದೇ ಪ್ರಮಾಣದ ಭೂಮಿಯನ್ನು ನೀಡುತ್ತಿದ್ದೇವೆ" ಎಂದು ಬಿಎಂಆರ್‌ಸಿಎಲ್ ಪ್ರಧಾನ ವ್ಯವಸ್ಥಾಪಕ (ಭೂಸ್ವಾಧೀನ) ಎಂಎಸ್ ಚನ್ನಪ್ಪ ಗೌಡರ್ ಹೇಳಿದ್ದಾರೆ.

ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ಭೂಸ್ವಾಧೀನ ಪ್ರಕ್ರಿಯೆ

ವಸತಿ ಸಮುಚ್ಚಯದಲ್ಲಿರುವ 105 ಫ್ಲ್ಯಾಟ್‌ಗಳನ್ನು ನೋಡಿಕೊಳ್ಳುವ ರಾಯಲ್ ಹೆರಿಟೇಜ್ ಅಪಾರ್ಟ್‌ಮೆಂಟ್ ಮಾಲೀಕರ ಸಂಘ ಮತ್ತು ಮೂಲ ಜಮೀನು ಮಾಲೀಕ ಶ್ರೀನಿವಾಸ್ ಕುಟುಂಬವು ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ಎರಡು ವರ್ಷಗಳಿಂದ ತಡೆ ತಂದಿದ್ದರು. ಹೆಚ್ಚಿನ ಪರಿಹಾರದ ಮೊತ್ತಕ್ಕೆ ಜಮೀನು ಮಾಲಿಕ ಮತ್ತು ಅಪಾರ್ಟ್‌ಮೆಂಟ್ ಮಾಲಿಕರ ಸಂಘ ಬೇಡಿಕೆ ಇಟ್ಟಿದ್ದರು.

ಈ ವಿಚಾರವಾಗಿ ಅಪಾರ್ಟ್‌ಮೆಂಟ್‌ ಕೋರ್ಟ್‌ ಮೆಟ್ಟಿಲೇರಿದ್ದು, ಸ್ವಾಧೀನಕ್ಕೆ ತಡೆ ನೀಡಿತ್ತು.
"ಆಗಸ್ಟ್ ಅಂತ್ಯದ ವೇಳೆಗೆ ಲೈನ್ ಅನ್ನು ಪ್ರಾರಂಭಿಸಲು ನಿಗದಿಪಡಿಸಲಾಗಿರುವುದರಿಂದ ಅದನ್ನು ತ್ವರಿತಗೊಳಿಸಬೇಕು ಎಂದು ನಾವು ನ್ಯಾಯಾಲಯಕ್ಕೆ ಮನವಿ ಮಾಡಿದ್ದೆವು. ಪರಿಹಾರವನ್ನು ಯಾರು ಪಡೆಯುತ್ತಾರೆ ಎಂಬ ವಿಷಯವನ್ನು ನಂತರ ನಿರ್ಧರಿಸಬಹುದು ಆದರೆ ಸ್ವಾಧೀನವನ್ನು ಮೊದಲು ಪೂರ್ಣಗೊಳಿಸಬಹುದು ಎಂದು ನ್ಯಾಯಾಲಯ ನಿರ್ಧರಿಸಿದೆ," ಎಂದು ಅವರು ಹೇಳಿದರು.

ಕೆಆರ್ ಪುರ- ಬೈಯಪ್ಪನಹಳ್ಳಿ ಮಾರ್ಗ ಪ್ರಾಯೋಗಿಕ ಸಂಚಾರ

ಕೆಆರ್ ಪುರಂ-ಬೈಯಪ್ಪನಹಳ್ಳಿ ಮಾರ್ಗದ ಪ್ರಾಯೋಗಿಕ ಚಾಲನೆಯು ಜ್ಯೋತಿಪುರ ಮೆಟ್ರೋ ನಿಲ್ದಾಣದಿಂದ ಬುಧವಾರ ಸಂಜೆ 4 ಗಂಟೆಗೆ ಪ್ರಾರಂಭವಾಗಲಿದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ. "ಮಧ್ಯಾಹ್ನದ ವೇಳೆಗೆ ರೈಲಿಗೆ ಜ್ಯೋತಿಪುರದಲ್ಲಿ ಚಾರ್ಜ್ ಮಾಡಲಾಗುವುದು, 4 ಗಂಟೆಗೆ ಪ್ರಾಯೋಗಿಕ ಪ್ರಕ್ರಿಯೆಯನ್ನು ಪ್ರಾರಂಭಿಸಲು ಯೋಜಿಸಿದ್ದೇವೆ. ಬುಧವಾರದಂದು ಸಿವಿಲ್ ಇಂಟರ್‌ಫೇಸ್ ಪರೀಕ್ಷೆಯನ್ನು ನಡೆಸಲಾಗುವುದು" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+