ಬೆಂಗಳೂರು : ಅವಳ ಬೆಂಬಲಕ್ಕಾಗಿ ಸೈಕಲ್ ಏರಿ!

ಬೆಂಗಳೂರು, ಆ.28: ಬೆಂಗಳೂರು ಸೇರಿದಂತೆ ಹಲವೆಡೆ ನಡೆದಿರುವ ಮಹಿಳಾ ದೌರ್ಜನ್ಯವನ್ನು ಖಂಡಿಸಿ ಅನೇಕ ರೀತಿಯ ಪ್ರತಿಭಟನಾ ಮೆರವಣಿಗೆಗಳು ಆಯೋಜನೆಗೊಂಡಿವೆ. ಆದರೆ, ವೈಲ್ಡ್ ವಾಂಡರರ್ಸ್ ತಂಡ ಅವಳ(ಹೆಣ್ಣು ಎಂದು ಓದಿಕೊಳ್ಳಿ) ಬೆಂಬಲಕ್ಕಾಗಿ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದೆ.

ಯುವತಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ 'Her Breakfree Moment' ಹೆಸರಿನ ಈ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳಬೇಕು ಎಂದು ವೈಲ್ಡ್ ವಾಂಡರರ್ಸ್ ತಂಡದ ಸುಧೀಂದ್ರ ಹಾಗೂ ಹರೀಶ್ ಅವರು ಕೋರಿದ್ದಾರೆ.

ಆ.30ರಂದು ಕಬ್ಬನ್ ಪಾರ್ಕ್ ಬಾಲಭವನದ ಬಳಿ ಸಂಜೆ 5.30ರ ನಂತರ ಈ ಸೈಕಲ್ ಜಾಥಾ ಆರಂಭಗೊಳ್ಳಲಿದೆ. ಸುಮಾರು 4.7 ಕಿ.ಮೀ ದೂರದ ಜಾಥಾ ನಡೆಯಲಿದೆ. ಗೂಗಲ್ ಮ್ಯಾಪ್ ನೋಡಿ

Her Breakfree momen A cycle rally In Bangalore
ಸೈಕಲ್ ಇಲ್ಲದ ಯುವತಿಯರು ಕೂಡಾ ಈ ಜಾಥಾದಲ್ಲಿ ಪಾಲ್ಗೊಳ್ಳಬಹುದಾಗಿದೆ. ಸೈಕಲ್ ಪ್ರಾಯೋಜಕತ್ವ ನೀಡುವವರು ಕೂಡಾ ಕೈ ಜೋಡಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 97409 85632, 97403 90777

ಸಂಜೆಯಾಗುತ್ತಿದ್ದಂತೆ ಯುವತಿಯರಿಗೆ ಮನೆ ಸೇರು ಎಂದು ಗದರಿಸುವ ಸಮಾಜದ ಮುಂದೆ ಧೈರ್ಯವಾಗಿ ಮುನ್ನುಗ್ಗುವ ಯುವತಿಯರನ್ನು ಪ್ರೋತ್ಸಾಹಿಸುವುದು ನಮ್ಮ ಸೈಕಲ್ ಜಾಥಾದ ಉದ್ದೇಶ ಎಂದು ಆಯೋಜಕರು ಹೇಳಿದ್ದಾರೆ. ಇನ್ನಷ್ಟು ವಿವರಗಳಿಗಾಗಿ ಫೇಸ್ ಬುಕ್ ಇವೆಂಟ್ ಪುಟ ನೋಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+