ಮೆಹಂದಿ ಕಲಾವಿದರ ಬದುಕಿನ ಬಣ್ಣ ಅಳಿಸಿದ ಕೋವಿಡ್!

ಬೆಂಗಳೂರು, ಅಕ್ಟೋಬರ್ 11: "ಆಗ ಚೆನ್ನಾಗಿತ್ತು, ಪ್ರತಿದಿನ 800 ರೂ. ತನಕ ಸಂಪಾದನೆ ಆಗುತ್ತಿತ್ತು. ಈಗ ಐದು ದಿನ ಯಾವುದೇ ಸಂಪಾದನೆ ಇಲ್ಲದೆ ಖಾಲಿ ಕೈಯಲ್ಲಿ ವಾಪಸ್ ಹೋಗಿದ್ದು ಇದೆ. ಮುಂದೇನು ತಿಳಿದಿಲ್ಲ" ಎಂದು ಮೆಹಂದಿ ಕಲಾವಿದ ದುರ್ಗೇಶ್ ಕುಮಾರ್ ಹೇಳಿದರು.

ದುರ್ಗೇಶ್ ಕುಮಾರ್ ಉತ್ತರ ಪ್ರದೇಶದ ಬಸ್ತಿಯಿಂದ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಅವರು ಮಹಿಳೆಯರ ಕೈಗೆ ಮೆಹಂದಿಯಿಂದ ಬಣ್ಣ ಬಣ್ಣದ ಅಲಂಕಾರ ಮಾಡುತ್ತಿದ್ದರು.

ಲಾಕ್ ಡೌನ್ ತನಕ ಎಲ್ಲವೂ ಸರಿ ಇತ್ತು. ದುರ್ಗೇಶ್ ಕುಮಾರ್ ಪ್ರತಿದಿನ ಸುಮಾರು 800 ರೂ. ದುಡಿಯುತ್ತಿದ್ದರು. ಆದರೆ, ಲಾಕ್ ಡೌನ್ ಘೋಷಣೆ ಬಳಿಕ ಅವರ ಬದುಕು ಪೂರ್ತಿ ಬದಲಾಗಿದೆ. ಸುಮಾರು 5 ದಿನ ವ್ಯಾಪಾರವೇ ಇಲ್ಲದೆ ವಾಪಸ್ ಹೋಗಿದ್ದೂ ಇದೆ.

Henna Artists Facing Crisis After Lockdown

ಕೋವಿಡ್ ಹರಡದಂತೆ ತಡೆಯುವ ಉದ್ದೇಶದಿಂದ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಆಗ ಮದುವೆಗಳೆಲ್ಲಾ ನಿಂತು ಹೋದವು, ಇಲ್ಲವೇ ಸರಳವಾಗಿ ನಡೆಯಲು ಪ್ರಾರಂಭವಾಯಿತು. ಇದರಿಂದಾಗಿ ಮೆಹಂದಿಗೆ ಬೇಡಿಕೆ ತಗ್ಗಿತು.

"ಹಿಂದಿನಂತೆ ಮದುವೆಗಳು ನಡೆಯುತ್ತಿಲ್ಲ. ಮೆಹಂದಿ ಹಾಕಿಸಿಕೊಳ್ಳಲು ಬರುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ನಮಗೆ ಪ್ರತಿದಿನದ ಆದಾಯವೂ ಸಿಗುತ್ತಿಲ್ಲ. ಕೋವಿಡ್ ಕಾರಣದಿಂದಲೇ ಹೀಗಾಗಿದೆ" ಎಂದು ದುರ್ಗೇಶ್ ಕುಮಾರ್ ಹೇಳುತ್ತಾರೆ.

Henna Artists Facing Crisis After Lockdown

"ನನ್ನಂತೆ ಹಲವಾರ ಜನರು ಸಹ ಪ್ರತಿದಿನದ ಸಂಪಾದನೆಗೆ ಕಷ್ಟ ಪಡುತ್ತಿದ್ದಾರೆ. ಹೀಗೆ ಆದರೆ ಮುಂದೇನು ಎಂಬುದು ತಿಳಿದಿಲ್ಲ ಜೀವನ ನಿರ್ವಹಣೆಗಾಗಿ ಬೇರೆ ಕೆಲಸ ಹುಡುಕಿಕೊಳ್ಳಬೇಕು" ಎನ್ನುತ್ತಾರೆ ದುರ್ಗೇಶ್ ಕುಮಾರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+