ಮಚ್ಚಿನಿಂದ ಬೀಳುತ್ತಿದ್ದ ಏಟು ತಡೆದು ಪ್ರಾಣ ಉಳಿಸಿದ ಹೆಲ್ಮೆಟ್
ಬೆಂಗಳೂರು, ಫೆಬ್ರವರಿ 1: ವ್ಯಕ್ತಿಯ ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ 4.50 ರೂ ಹಾಗೂ ಲ್ಯಾಪ್‌ಟಾಪ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಸಾದಹಳ್ಳಿ ಸಮೀಪದ ಜಡೆ ಗಾರ್ಡನ್ ಮುಂಭಾಗ ಈ ಘಟನೆ ನಡೆದಿದ್ದು, ಆನ್‌ಲೈನ್ ಮೂಲಕ ಹಣ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ದಾಳಿ ವೇಳೆ ದುಷ್ಕರ್ಮಿಯೊಬ್ಬ ಬೀಸಿದ ಲಾಂಗ್ ಏಟು ವ್ಯಕ್ತಿಯ ಹೆಲ್ಮೆಟ್‌ಗೆ ತಗುಲಿ ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಕುರಿತು ಜಯರಾಮ ಎಂಬುವವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ವಿಮಾನ ನಿಲ್ದಾಣ ಠಾಣೆ ಪೊಲೀಸರು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಶ್ರೀನಿವಾಸಪುರದ ನಿವಾಸಿ ಜಯರಾಮ, ಸಾದಹಳ್ಳಿಯಲ್ಲಿ 'ಸ್ಮಾರ್ಟ್ ಬ್ಯಾಂಕ್' ಹೆಸರಿನ ಮಳಿಗೆಯಲ್ಲಿ ಆನ್‌ಲೈನ್ ಹಣ ವರ್ಗಾವಣೆ ವ್ಯವಹಾರ ನಡೆಸುತ್ತಿದ್ದಾರೆ. ವ್ಯವಹಾರದಲ್ಲಿ ಸಂಗ್ರಹವಾದ 4.50 ಲಕ್ಷ ರೂ.ಗಳನ್ನು ಬ್ಯಾಗ್‌ನಲ್ಲಿ ಇರಿಸಿಕೊಂಡು ರಾತ್ರಿ 8.20ರ ಸುಮಾರಿಗೆ ಮಳಿಗೆಯಲ್ಲಿ ಕೆಲಸ ಮಾಡುವ ನರಸಿಂಹಮೂರ್ತಿ ಜತೆ ಬೈಕ್‌ನಲ್ಲಿ ಊರಿಗೆ ತೆರಳುತ್ತಿದ್ದರು.

ಮಾರ್ಗ ಮಧ್ಯೆ ಜಡೆ ಗಾರ್ಡ್‌ನ್ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಸ್ವಿಫ್ಟ್ ಕಾರೊಂದು ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಜಯರಾಮ ಹಾಗೂ ನರಸಿಂಹಮೂರ್ತಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಕಾರಿನಿಂದ ಇಳಿದ ಒಬ್ಟಾತ, ಲಾಂಗ್ ತೆಗೆದು ಇಬ್ಬರ ಮೇಲೂ ಬೀಸಲು ಮುಂದಾಗಿದ್ದಾನೆ.
ಇದನ್ನು ನೋಡಿದ ನರಸಿಂಹಮೂರ್ತಿ ಪ್ರಾಣಭಯದಿಂದ ಓಡಿಹೋಗಿದ್ದಾರೆ. ಆದರೆ ಏಟು ಹೆಲ್ಮೆಟ್ ಮೇಲೆ ಬಿದ್ದಿದ್ದರಿಂದ ಯಾವುದೇ ಪ್ರಾಣಾಪಾಯ ಆಗಿಲ್ಲ.












Click it and Unblock the Notifications