ಮೈಸೂರು, ಮಡಿಕೇರಿಗೂ ಹಾರಲಿದೆ ಹೆಲಿ ಟ್ಯಾಕ್ಸಿ!

ಬೆಂಗಳೂರು, ಜೂನ್ 22 : ಬೆಂಗಳೂರಿನಲ್ಲಿ ಆರಂಭಗೊಂಡ ಹೆಲಿ ಟ್ಯಾಕ್ಸಿ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ, ರಾಜ್ಯದ ಇತರ ನಗರಗಳಿಗೂ ಈ ಸೇವೆಯನ್ನು ವಿಸ್ತರಿಸಲು ಚಿಂತನೆ ನಡೆದಿದೆ. ಮೈಸೂರು, ಮಡಿಕೇರಿಗೂ ಈ ಸೇವೆ ಆರಂಭವಾಗುವ ನಿರೀಕ್ಷೆ ಇದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ಹೆಲಿ ಟ್ಯಾಕ್ಸಿ ಸೇವೆ ಆರಂಭಗೊಂಡಿದೆ. ಬೆಂಗಳೂರು ನಗರದ ಸಂಚಾರ ದಟ್ಟಣೆಯಲ್ಲಿ ಸಿಲುಕುವ ಬದಲು ಹೆಲಿಕಾಪ್ಟರ್ ಏರಿ ನೇರವಾಗಿ ವಿಮಾನ ನಿಲ್ದಾಣ ತಲುಪಬಹುದಾಗಿದೆ.

ಎಚ್‌ಎಎಲ್‌ ಏರ್‌ಪೋರ್ಟ್‌ನಿಂದ ಕೆಐಎಎಲ್‌ಗೆ ಹೆಲಿ ಟ್ಯಾಕ್ಸಿ ಸೇವೆ ಆರಂಭಿಸುವ ಪ್ರಸ್ತಾವನೆ Thumby Aviation Pvt Ltd ಮುಂದಿದೆ. ಮೈಸೂರು, ಮಡಿಕೇರಿ, ಚಿಕ್ಕಮಗಳೂರಿಗೂ ಸೇವೆ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ.

Helitaxi service may extend to Mysuru and Madikeri

ಸೇಲಂ, ಮೈಸೂರು, ಮಡಿಕೇರಿ, ಚಿಕ್ಕಮಗಳೂರಿನಿಂದ ಕೆಐಎಎಲ್‌ಗೆ ಹಲವು ಪ್ರಯಾಣಿಕರು ಆಗಮಿಸುತ್ತಾರೆ. ಇವರು ಹೆಚ್ಚಾಗಿ ಬಸ್ ಅಥವ ಕ್ಯಾಬ್ ಅವಲಂಬಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಲು ಭಾರೀ ಬೇಡಿಕೆ ಇದೆ. ಆದ್ದರಿಂದ ಸೇವೆ ವಿಸ್ತರಣೆಯ ಚಿಂತನೆ ನಡೆದಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಎಸ್ಆರ್‌ಟಿಸಿ ಮೈಸೂರು, ಮಂಗಳೂರು, ಮಡಿಕೇರಿ ಸೇರಿದಂತೆ ವಿವಿಧ ನಗರಗಳಿಗೆ ಫ್ಲೈ ಬಸ್ ಸೇವೆಯನ್ನು ಆರಂಭಿಸಿದೆ. ಹೆಲಿ ಟ್ಯಾಕ್ಸಿ ಸೇವೆ ಆರಂಭವಾದರೆ ಬಸ್‌ಗೆ ಪೈಪೋಟಿ ಆರಂಭವಾಗಲಿದೆ.

ಎಲೆಕ್ಟ್ರಾನಿಕ್ ಸಿಟಿ ಮತ್ತು ಕೆಐಎಎಲ್ ನಡುವೆ ಹೆಲಿ ಟ್ಯಾಕ್ಸಿಯಲ್ಲಿ ಸಂಚಾರ ನಡೆಸಲು ಎಲ್ಲಾ ತೆರಿಗೆ ಸೇರಿ 4 ಸಾವಿರ ರೂ. ಪಾವತಿ ಮಾಡಬೇಕು. ನಗರದ ಸಂಚಾರ ದಟ್ಟಣೆಯಲ್ಲಿ ಸಿಲುಕುವುದಕ್ಕಿಂತ ನಾಲ್ಕು ಸಾವಿರ ಕೊಟ್ಟು 15 ನಿಮಿಷದಲ್ಲಿ ಏರ್‌ಪೋರ್ಟ್ ತಲುಪಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+