Bengaluru: ಹೆಬ್ಬಾಳ ಜಂಕ್ಷನ್ ಕಡೆ 4 ತಿಂಗಳು ಟ್ರಾಫಿಕ್ ಸಮಸ್ಯೆ
ಬೆಂಗಳೂರು, ಮಾರ್ಚ್ 26: ಬೆಂಗಳೂರು ನಗರದ ವಾಹನ ಸವಾರರು, ಏರ್‌ಪೋರ್ಟ್ ಕಡೆ ಸಾಗುವ ವಾಹನ ಸವಾರರಿಗೆ ಮಾಹಿತಿ. ಇನ್ನು ಸುಮಾರು 4 ತಿಂಗಳ ಕಾಲ ಹೆಬ್ಬಾಳ ಜಂಕ್ಷನ್‌ನಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸವಾರರು ಮಾಹಿತಿ ತಿಳಿದು ಸಂಚಾರ ನಡೆಸುವುದು ಸೂಕ್ತ.
ಈ ಕುರಿತು ಮಂಗಳವಾರ ಹೆಬ್ಬಾಳ ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ. ಹೆಬ್ಬಾಳ ಫ್ಲೈ ಓವರ್‌ಗೆ ಎರಡು ಹೊಸ ಟ್ರ್ಯಾಕ್‌ಗಳನ್ನು ಸೇರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಉದ್ದೇಶಿಸಿದೆ.

ಕೆ. ಆರ್. ಪುರ ಲೂಪ್ ಮುಖ್ಯ ಟ್ರ್ಯಾಕ್ ಬಳಿ ಸೇರುವ ಎರಡು ಸ್ಕ್ಯಾನ್‌ಗಳನ್ನು ಕಿತ್ತು ಹಾಕಲಾಗುತ್ತದೆ. ಇದರಿಂದ ಕೆ. ಆರ್. ಪುರ ಲೂಪ್‌ನಲ್ಲಿ ಮುಂದಿನ 4 ತಿಂಗಳವರೆಗೆ ನಗರದ ಕಡೆಗೆ ಸಂಚಾರ ನಿಧಾನವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಆದ್ದರಿಂದ ಕೆ. ಆರ್. ಪುರ ಕಡೆಯಿಂದ ನಗರದ ಕಡೆಗೆ ಬರುವ ವಾಹನ ಸವಾರರು ಪರ್ಯಾಯ ಮಾರ್ಗಗಳಾದ ಐಒಸಿ-ಮುಕುಂದ ಥಿಯೇಟರ್ ರಸ್ತೆ, ಲಿಂಗರಾಜಪುರಂ ಮೇಲ್ಸೇತುವೆ ಮಾರ್ಗ, ನಾಗವಾರ-ಟ್ಯಾನರಿ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಲು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
Advisory for commuters coming from KRpuram to hebbal flyover pic.twitter.com/lOzi9r3nKk
— ACP Traffic Northeast Bangalore (@acpnortheasttr) March 26, 2024
ಅದೇ ರೀತಿ ಹೆಗಡೆ ನಗರ-ಥಣಿಸಂದ್ರ ಕಡೆಯಿಂದ ಬರುವ ಜನರು ಜಿ.ಕೆ.ವಿ.ಕೆ-ಜಕ್ಕೂರು ರಸ್ತೆ ಮೂಲಕ ನಗರ ಪ್ರವೇಶಿಸುತ್ತಾರೆ. ವಾಹನ ಸವಾರರು ಸಂಚಾರಿ ಪೊಲೀಸರ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಏನಿದು ಯೋಜನೆ?; ಹೆಬ್ಬಾಳ ಮೇಲ್ಸೇತುವೆ ಮೇಲೆ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರು, ಬಿಡಿಎ ಅಧಿಕಾರಿಗಳು ಹ ತಜ್ಞರ ಜೊತೆ ಹಲವು ಬಾರಿ ಚರ್ಚೆ ನಡೆಸಿದ್ದರು. ಆಗ ಫ್ಲೈ ಓವರ್ ವಿಸ್ತರಣೆಯ ಯೋಜನೆ ರೂಪಿಸಲಾಗಿತ್ತು.
ಮೇಲ್ಸೇತುವೆ ಮೇಲೆ ವಾಹನ ಸಂಚಾರ ನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದಾಗ ಕೆ. ಆರ್. ಪುರ ಲೂಪ್ ಮತ್ತು ಕ್ಯಾರೇಜ್ ಮಾರ್ಗದ ವಿಭಜಕದಲ್ಲಿ ಸಮಸ್ಯೆ ಇದೆ ಎಂದು ತಿಳಿದುಬಂದಿತ್ತು. ಮೇಲ್ಸೇತುವೆ ರಸ್ತೆಯನ್ನು ಮತ್ತೆ ತೆರೆಯಲು ಸಾಧ್ಯವಾದರೆ ಕೆ. ಆರ್. ಪುರ ಮಾರ್ಗದ (ಬೆಂಗಳೂರು ನಗರದ ಕಡೆ) ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು ಎಂದು ಅಂದಾಜಿಸಲಾಗಿತ್ತು.
ಆಗ ತಜ್ಞರು ಸಹ ಇದರಿಂದಾಗಿ ಫ್ಲೈ ಓವರ್ ಮೇಲೆ ವಾಹನ ದಟ್ಟಣೆಯ ಒತ್ತಡ ಕಡಿಮೆಯಾಗಲಿದೆ ಎಂದು ಪೊಲೀಸರು ತಿಳಿಸಿದ್ದರು. ಈ ಪ್ರಸ್ತಾವನೆಗೆ ಬಿಡಿಎ ಅಧಿಕಾರಿಗಳು ಸಹ ಒಪ್ಪಿಗೆ ನೀಡಿದ್ದರು.












Click it and Unblock the Notifications