Hebbal Junction: ಬೆಂಗಳೂರಿನ ಹೆಬ್ಬಾಳ ಜಂಕ್ಷನ್ ಮಾರ್ಗದಲ್ಲಿ ಮಹತ್ವದ ಬದಲಾವಣೆ: ವಾಹನ ಸವಾರರಿಗೆ ಜಿಬಿಎ ಗುಡ್‌ನ್ಯೂಸ್

Hebbal Junction: ನಗರದ ಹೆಬ್ಬಾಳ ಜಂಕ್ಷನ್‌ನಿಂದ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯವರೆಗಿನ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿನ ಮಳೆನೀರು ಚರಂಡಿ ವ್ಯವಸ್ಥೆ ಹಾಗೂ ಸರ್ವಿಸ್ ರಸ್ತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವಂತೆ ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ಉತ್ತರ ನಗರ ಪಾಲಿಕೆಯ ಮುಖ್ಯ ಎಂಜಿನಿಯರರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅಕ್ಟೋಬರ್ 5, 2026ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL), ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹಾಗೂ ಇತರ ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳೊಂದಿಗೆ ಜಂಟಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಮಳೆನೀರಿನ ಸರಾಗ ಹರಿವು ಮತ್ತು ವಿಲೇವಾರಿಗೆ ಅಡ್ಡಿಯಾಗುತ್ತಿರುವ ಹಲವು ಸಮಸ್ಯೆಗಳು ಗಮನಕ್ಕೆ ಬಂದಿವೆ ಎಂದು ಹೇಳಲಾಗಿದೆ.

Hebbal Junction Major Traffic Update in Bengaluru GBA Brings Good News for Motorists

ಮಳೆನೀರು ಚರಂಡಿ ವ್ಯವಸ್ಥೆ ಸುಧಾರಣೆಗೆ NHAIಗೆ ಸೂಚನೆ

ರಸ್ತೆಯ ಅಂಚಿನಲ್ಲಿ ಮೇಲ್ಮೈ ಮಳೆನೀರು ನೇರವಾಗಿ ಚರಂಡಿಗೆ ಹರಿದುಹೋಗಲು ಅಗತ್ಯವಾದ ತೆರೆಯುವಿಕೆಗಳು ಸಮರ್ಪಕವಾಗಿಲ್ಲದಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಸೂಕ್ತ ಗ್ರೇಟಿಂಗ್‌ಗಳಿಲ್ಲದ ಕಾರಣ ಮಳೆನೀರು ರಸ್ತೆ ಹಾಗೂ ಸರ್ವಿಸ್ ರಸ್ತೆಗಳ ಮೇಲೆ ಸಂಗ್ರಹವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಅಗತ್ಯವಿರುವ ಸ್ಥಳಗಳಲ್ಲಿ ಸುಮಾರು 50 ಮೀಟರ್ ಅಂತರದಲ್ಲಿ ಸೂಕ್ತ ಗ್ರೇಟಿಂಗ್‌ಗಳಿರುವ ಮಳೆನೀರು ಚರಂಡಿ ಒದಗಿಸುವುದು ಸೇರಿದಂತೆ, ಹೆದ್ದಾರಿಯುದ್ದಕ್ಕೂ ಇರುವ ಚರಂಡಿ ವ್ಯವಸ್ಥೆಯನ್ನು ಪರಿಶೀಲಿಸಿ ತಕ್ಷಣ ದುರಸ್ತಿಗೊಳಿಸುವಂತೆ NHAIಗೆ ಸೂಚಿಸಲಾಗಿದೆ.

ಮೆಟ್ರೋ ಕಾಮಗಾರಿಗಳಿಂದ ಮಳೆನೀರಿನ ಹರಿವಿಗೆ ಅಡ್ಡಿಯಾಗದಂತೆ ಕ್ರಮ

ಹೆದ್ದಾರಿ ಮಾರ್ಗದ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ BMRCL ಕಾಮಗಾರಿಗಳಿಂದ ಮಳೆನೀರಿನ ಹರಿವಿಗೆ ಅಡಚಣೆಯಾಗುತ್ತಿರುವುದನ್ನು ಪರಿಶೀಲನೆಯಲ್ಲಿ ಗುರುತಿಸಲಾಗಿದೆ. ಕಾಮಗಾರಿಗಳಿಂದ ಈಗಿರುವ ಚರಂಡಿ ಮಾರ್ಗಗಳು ಮುಚ್ಚಿಹೋಗದಂತೆ ಕ್ರಮ ಕೈಗೊಳ್ಳಬೇಕು.

ಶಾಶ್ವತ ಚರಂಡಿ ವ್ಯವಸ್ಥೆಗೆ ಅಡಚಣೆಯಾದ ಸ್ಥಳಗಳಲ್ಲಿ, ಮಳೆನೀರಿನ ನಿರಂತರ ಹರಿವಿಗೆ ತಾತ್ಕಾಲಿಕ ಪರ್ಯಾಯ ಮಾರ್ಗಗಳನ್ನು ತಕ್ಷಣ ಕಲ್ಪಿಸುವಂತೆ BMRCLಗೆ ಸೂಚಿಸಲಾಗಿದೆ. ಚರಂಡಿ ವ್ಯವಸ್ಥೆಯು ಮಳೆಗಾಲದಲ್ಲಿ ಯಾವುದೇ ಅಡಚಣೆಯಿಲ್ಲದೆ ಕಾರ್ಯನಿರ್ವಹಿಸುವಂತೆ ಸಂಬಂಧಪಟ್ಟ ತಾಂತ್ರಿಕ ಮಾನದಂಡಗಳು, ಅನುಮೋದಿತ ನಕ್ಷೆಗಳು ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಿಲಾಗಿದೆ.

ಗಾಡ್ರೇಜ್ ಸಮೀಪ ಸರ್ವಿಸ್ ರಸ್ತೆಯ ನೀರು ಸೋರಿಕೆ ತಡೆಗೆ BWSSBಗೆ ಸೂಚನೆ

ಹೆಬ್ಬಾಳದ ಗಾಡ್ರೇಜ್ ಪ್ರದೇಶದ ಸಮೀಪ ಸರ್ವಿಸ್ ರಸ್ತೆಯಲ್ಲಿ ನಿರಂತರ ನೀರು ಸೋರಿಕೆಯಾಗುತ್ತಿರುವುದರಿಂದ ರಸ್ತೆ ಮೇಲ್ಮೈ ಹಾನಿಗೊಳಗಾಗುತ್ತಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. ನೀರು ಸೋರಿಕೆಯ ಮೂಲವನ್ನು ತಕ್ಷಣ ಪತ್ತೆಹಚ್ಚಿ ಸರಿಪಡಿಸುವಂತೆ ಹಾಗೂ ಸಮಸ್ಯೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ BWSSBಗೆ ಸೂಚಿಸಲಾಗಿದೆ. ಸೋರಿಕೆ ದುರಸ್ತಿಯಾದ ಬಳಿಕ ಸಂಬಂಧಪಟ್ಟ ರಸ್ತೆ ನಿರ್ವಹಣಾ ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸಿ ಹಾನಿಗೊಳಗಾದ ರಸ್ತೆಯ ಭಾಗವನ್ನು ಪುನಃಸ್ಥಾಪಿಸುವಂತೆಯೂ ತಿಳಿಸಲಾಗಿದೆ.

ರಸ್ತೆ ಸುರಕ್ಷತೆ ಮತ್ತು ಮೂಲಸೌಕರ್ಯ ದುರಸ್ತಿಗೆ ಆದ್ಯತೆ

ಚರಂಡಿ ಮತ್ತು ಗ್ರೇಟಿಂಗ್‌ಗಳ ಅಳವಡಿಕೆ, ರಸ್ತೆ ಸಮತಟ್ಟು ಮಾಡುವುದು, ಕಲ್ವರ್ಟ್‌ಗಳ ಸ್ವಚ್ಛತೆ, ರಸ್ತೆ ಬದಿಯ ಅಡಚಣೆಗಳ ನಿವಾರಣೆ ಹಾಗೂ ಮೆಟ್ರೋ ಕಾಮಗಾರಿ ಸ್ಥಳಗಳಲ್ಲಿ ಸೂಕ್ತ ಬ್ಯಾರಿಕೇಡಿಂಗ್ ಸೇರಿದಂತೆ ಪರಿಶೀಲನೆಯಲ್ಲಿ ಗುರುತಿಸಲಾದ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಸರಿಪಡಿಸುವ ಅಗತ್ಯವಿದೆ.

ಮಳೆನೀರು ನಿಲ್ಲುವುದರಿಂದ ರಸ್ತೆ ಹಾನಿ, ಜಲಾವೃತ ಮತ್ತು ವಾಹನ ಸವಾರರಿಗೆ ಸುರಕ್ಷತಾ ಅಪಾಯಗಳು ಉಂಟಾಗುವ ಸಾಧ್ಯತೆಯಿರುವುದರಿಂದ, ಸಂಬಂಧಪಟ್ಟ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ಮೂಲಸೌಕರ್ಯವನ್ನು ಸುಸ್ಥಿತಿಯಲ್ಲಿಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ತುರ್ತು ಕ್ರಮ ಹಾಗೂ ಅನುಪಾಲನಾ ವರದಿ ಸಲ್ಲಿಕೆಗೆ ಸೂಚನೆ

NHAI, BMRCL ಮತ್ತು BWSSB ಸಂಸ್ಥೆಗಳು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಿ, ಕೈಗೊಂಡ ಕ್ರಮಗಳ ಕುರಿತು ಅನುಪಾಲನಾ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಸಂಬಂಧಪಟ್ಟ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಮೂಲಸೌಕರ್ಯ ದೋಷಗಳಿಂದ ಉಂಟಾಗಬಹುದಾದ ಜಲಾವೃತ, ರಸ್ತೆ ಹಾನಿ ಅಥವಾ ಇತರ ಅಹಿತಕರ ಘಟನೆಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ವಿಳಂಬವಿಲ್ಲದೆ ಕೈಗೊಳ್ಳುವಂತೆ ತಿಳಿಸಲಾಗಿದೆ. ಈ ವಿಷಯವನ್ನು ಅತ್ಯಂತ ತುರ್ತು ಎಂದು ಪರಿಗಣಿಸಿ, ಸಾರ್ವಜನಿಕರ ಸುರಕ್ಷತೆ ಹಾಗೂ ಮಳೆನೀರಿನ ಸರಾಗ ಹರಿವನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+