ಬೆಂಗಳೂರು: ಭಾರೀ ಮಳೆಗೆ ಧರೆಗುರುಳಿದ ಮರಗಳು

ಬೆಂಗಳೂರು, ಮೇ. 19: ಮತ್ತೆ ಬೆಂಗಳೂರಿಗರಿಗೆ ಕಾಟ ಕೊಡುತ್ತಿರುವ ಮಳೆ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಮಂಗಳವಾರ ಸಂಜೆ ಏಕಾಏಕಿ ಸುರಿದ ಮಳೆ ಟ್ರಾಫಿಕ್ ಸಮಸ್ಯೆ ತಂದಿಟ್ಟು ಮಾಯವಾಗಿದೆ.

ನಗರದ ಗಾಂಧಿ ನಗರ, ಶಿವಾಜಿನಗರ, ಜಯನಗರ, ಮಾರತ್ ಹಳ್ಳಿ, ವಿಜಯನಗರ, ಬಸವನಗುಡಿ, ಜಯನಗರ ಸೇರಿದಂತೆ ಹಲವೆಡೆ ಮಧ್ಯಾಹ್ನ 4 ಗಂಟಗೆ ಆರಂಭವಾದ ಭಾರೀ ಮಳೆ ಸುಮಾರು ಅರ್ಧ ಗಂಟೆ ಕಾಲ ಸುರಿಯಿತು.[ಮಳೆ ಬಂದ್ರೆ ಬರಲಿ ಬಿಡಿ, ಮುನ್ನೆಚ್ಚರಿಕೆ ಮರೀಬೇಡಿ]

rain

ಮಳೆ ಪರಿಣಾಮ ಹಲವೆಡೆ ಮರಗಳು ನೆಲಕ್ಕೆ ಉರುಳಿದ್ದು ಸಂಚಾರ ಸಮಸ್ಯೆ ಉಂಟಾಯಿತು. ಯಾವುದೇ ಗಂಭೀರ ಅವಘಡ ಸಂಭವಿಸಿಲ್ಲ. ಎಚ್ ಆರ್ ಬಿಆರ್ ಲೇಔಟ್ ನಲ್ಲಿ ಎರಡು ಮರ ಬಿದ್ದು ಎರಡು ದ್ವಿಚಕ್ರ ವಾಹನಗಳು ಧ್ವಂಸವಾಗಿವೆ. ಕೆಲಸ ಮುಗಿಸಿ ಮನೆ ಸೇರಬೇಕಿದ್ದ ನಾಗರೀಕರು ಟ್ರಾಫಿಕ್ ನಲ್ಲಿ ಸಿಕ್ಕು ಹಾಕಿಕೊಂಡು ಪರಿತಪಿಸುವಂತೆ ಆಗಿದೆ.[ಬೆಂಗಳೂರಲ್ಲಿ ಮಳೆ ಬಂದ್ರೆ ಏನೇನಾಗುತ್ತೆ]

ಮಳೆಗೆ ಏನು ಕಾರಣ?
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ಪೂರ್ವ ಮುಂಗಾರು ಚುರುಕಾಗಿದೆ. ಬಂಗಾಳಕೊಲ್ಲಿಯ ಪಶ್ಚಿಮ ಮಧ್ಯಭಾಗ ಮತ್ತು ಆಂಧ್ರ ಪ್ರದೇಶದ ಕರಾವಳಿ ಹೊರಗಿನ ಭಾಗದಲ್ಲಿ ಎರಡು ದಿನಗಳಿಂದಲೂ ಪ್ರಬಲ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಇದು ಸಮುದ್ರ ಮಟ್ಟದಿಂದ 1.5ರಿಂದ 5.8 ಕಿಮೀ ಎತ್ತರ ದಲ್ಲಿದ್ದು, ಉತ್ತರದಿಂದ ಪ್ರಬಲ ತೇವಾಂಶದ ಗಾಳಿ ಏಳುತ್ತಿದೆ. ದಿನ ಕಳೆದಂತೆ ಸುಳಿಗಾಳಿಯ ಪ್ರಭಾವ ಕಡಿಮೆಯಾಗಲಿದ್ದು, ಮಳೆಯೂ ಕಡಿಮೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+