Bengaluru Rain: ಬೆಂಗಳೂರಿನಲ್ಲಿಂದು ಜೋರಾಗಲಿದೆ ಮಳೆಯ ಅಬ್ಬರ... ಬೇಗ ಬೇಗ ಮನೆ ಸೇರಿಕೊಳ್ಳಿ..!
ಬೆಂಗಳೂರು ನವೆಂಬರ್ 4: ಬೆಂಗಳೂರಿನಲ್ಲಿ ಇಂದು ವರುಣನ ಅರ್ಭಟ ಜೋರಾಗಿದೆ. ಸಂಜೆವರೆಗೂ ಉರಿ ಬಿಸಿಲಿಗೆ ಹೈರಾಣಾದ ಬೆಂಗಳೂರಿನ ಜನರಿಗೆ ಸಂಜೆ ಹೊತ್ತಿಗೆ ಮಳೆರಾಯ ತಂಪೆರೆದಿದ್ದಾನೆ. ನಗರದ ಹಲವೆಡೆ ಅಧಿಕ ಮಳೆಯಾಗುತ್ತಿದ್ದು, ಇನ್ನೂ ಕೆಲವೆಡೆ ಮೋಡ ಕವಿದ ವಾತಾವರಣವಿದೆ. ಇದರಿಂದಾಗಿ ರಾತ್ರಿ ವೇಳೆಗೆ ಮಳೆ ಇನ್ನಷ್ಟು ಕಡೆ ಸುರಿಯುವ ಸಾಧ್ಯತೆ ಇದೆ.
ಬೆಂಗಳೂರಿನ ಬಸವನಗುಡಿ, ವಿಜಯನಗರ, ರಾಜಾಜಿನಗರ, ಜಯನಗರ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್ ಮತ್ತಿತರ ಕಡೆ ತುಂತುರು ಮಳೆಯಾಗುತ್ತಿದ್ದು ಮೋಡ ಕವಿದ ವಾತಾವರಣವಿದೆ. ಬೆಂಗಳೂರಿನ ಹಲವೆಡೆ ಮುಂದಿನ 24 ಗಂಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಂಜೆ ಮಳೆಯಾಗುತ್ತಿದ್ದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಜೊತೆಗೆ ಮುಂದಿನ 24 ಗಂಟೆಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಸಿಲಿಕಾನ್ ಸಿಟಿ ಮಂದಿ ಇಂದು ಭಾರೀ ಪ್ರಮಾಣದ ಮಳೆ ಕಾಣಲಿದ್ದಾರೆ. ಸದ್ಯ ಹವಾಮಾನ ಇಲಾಖೆ ನೀಡಿದ ವರದಿ ಅನ್ವಯ ಕೆಲವೆಡೆ ಸಾಧಾರಣ ಮತ್ತು ಇನ್ನೂ ಕೆಲವೆಡೆ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ. ಹೀಗೆ ಆದಲ್ಲಿ ರಸ್ತೆ ಸಂಚಾರದಲ್ಲಿ ಭಾರೀ ಅವ್ಯವಸ್ಥೆ ಉಂಟಾಗುವ ಸಾಧ್ಯತೆ ಇದೆ.
ಇಂದು ಬಸವನಪುರ, ರಾಮಮೂರ್ತಿ ನಗರ, ಯಲಹಂಕ, ಜಕ್ಕೂರು, ಕಾಡುಗೋಡಿ ವ್ಯಾಪ್ತಿಗಳಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಲಿದೆ. ಇನ್ನುಳಿದಂತೆ ದಾಸರಹಳ್ಳಿ ವಲಯ, ಪೂರ್ವ ವಲಯ, ದಕ್ಷಿಣ ವಲಯ, ಮಹದೇವಪುರ ವಲಯ, ಪಶ್ಚಿಮ ವಲಯ, ಬೊಮ್ಮನಹಳ್ಳಿ ವಲಯ, ಆರ್ ಆರ್ ನಗರ ವಲಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ. ಈ ಎಲ್ಲ ಪ್ರದೇಶಗಳಲ್ಲಿ 64 ಮೀಟರ್ ನಿಂದ 115 ಮೀಟರ್ ವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಮುಖವಾಗಿ ಮಾರತಹಳ್ಳಿ, ವರ್ತೂರು, ಬೊಮ್ಮನಹಳ್ಳಿ, ನಾಗರಬಾವಿ, ಹೆಚ್ಎಎಲ್, ದೊಮ್ಮಲೂರು, ಗಾಲಿ ಆಂಜನೇಯ ದೇಗುಲ, ಆರ್ ಆರ್ ನಗರ, ಕೆಂಗೇರಿ, ಪೀಣ್ಯ, ಪುಲಕೇಶಿನಗರ, ಯಶವಂತಪುರ, ಬಾಣಸವಾಡಿ ಈ ಎಲ್ಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ.ನವೆಂಬರ್ 4 ರ ರಾತ್ರಿಯೇ ಭಾರೀ ಮಳೆಯಾಗಲಿದ್ದು, ನವೆಂಬರ್ 5 ರಂದು ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications