ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ

|
Google Oneindia Kannada News

ಬೆಂಗಳೂರು, ಮಾರ್ಚ್ .07 : ಸೋಮವಾರ ರಾತ್ರಿ ಬೆಂಗಳೂರು ನಗರದ ಜನತೆಗೆ ತಂಪೆರದಿದ್ದ ವರುಣ, ಮಂಗಳವಾರ ರಾತ್ರಿಯೂ ಗುಡುಗು, ಮಿಂಚು ಸಹಿತಿ ಭಾರೀ ಮಳೆಯಾಗಿ ಮತ್ತಷ್ಟು ಕೂಲ್ ಕೂಲ್ ಆಗಿಸಿತು.

ಧಾರಾಕಾರ ಮಳೆಯಿಂದಾಗಿ ಜಯನಗರದ 7ನೇ ಹಂತದ ಬಳಿ ಹೋರ್ಡಿಂಗ್ ವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ.

ನಗರದ ಶಾಂತಿನಗರ, ಬಸವನಗುಡಿ, ಜಯನಗರ, ಚಾಮರಾಜಪೇಟೆ, ಟೌನ್ ಹಾಲ್, ನೆಲಮಂಗಲ ಮತ್ತು ಮೈಸೂರು ರೋಡ್ ಸೇರಿದಂತೆ ಹಲವೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ. ಬೆಳಗ್ಗೆಯಿಂದ ಸಂಜೆ ವರೆಗೆ ಬಿರು ಬಿಸಿಲಿಗೆ ಬೇಗಿದ್ದ ಜನರಿಗೆ ವರುಣ ಕೊಂಚ ತಂಪೆರೆದಿದ್ದಾನೆ. [ಉದ್ಯಾನ ನಗರಿಗೆ ಸೋಮವಾರ ರಾತ್ರಿ ವರುಣನ ಸಿಂಚನ]

Heavy rain in bengaluru on March 7 night

ಇದರಿಂದ ಜನರು ತಮ್ಮ ಕೆಲಸವನ್ನು ಮುಗಿಸಿಕೊಂಡು ಮನೆಗೆ ಹೋಗುವ ಮಾರ್ಗ ಮಧ್ಯದಲ್ಲೇ ಮಳೆಗೆ ಸಿಲುಕಿದ ಹಲವಾರು ದ್ವಿಚಕ್ರ ವಾಹನ ಸವಾರರು ಫ್ಲೈ ಓವರ್ ಗಳು ಹಾಗೂ ರಸ್ತೆ ಬದಿಯ ಕಟ್ಟಡಗಳ ಕೆಳಗೆ ಆಶ್ರಯ ಪಡೆಯಬೇಕಾಯಿತು.

ಇದಲ್ಲದೆ, ಮಳೆ ಬಂದಾಗ ಆಗುವ ಟ್ರಾಫಿಕ್ ಜಾಮ್ ಸಮಸ್ಯೆಯೂ ತಲೆದೋರಿ ಅನೇಕ ರಸ್ತೆಗಳು ವಾಹನ ದಟ್ಟಣೆಯಿಂದ ಕೂಡಿದವು.

English summary
Heavy rain in bengaluru city various areas on March 7 night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X