Bengaluru Rain: ಬಿರುಗಾಳಿ ಮಳೆಗೆ ಧರೆಗುರುಳಿದ ಮರಗಳು; ಮೆಟ್ರೋ ಕಾಮಗಾರಿಗೂ ಅಡ್ಡಿ
ಬೆಂಗಳೂರಿನಲ್ಲಿ ಬುಧವಾರ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಬಿರುಗಾಳಿ ಮಳೆಗೆ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿದ್ದು, ಟ್ರಾಫಿಕ್ ಸಮಸ್ಯೆ ಎದುರಾಗಿತ್ತು, ಮತ್ತೆ ಹಲವು ಕಡೆ ರಸ್ತೆಗಳು ಜಲಾವೃತವಾದ ಕಾರಣ ವಾಹನ ಸವಾರರು ಪರದಾಡುವಂತಾಗಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮರ, ಮರದ ರೆಂಬೆ, ಕೊಂಬೆಗಳು ಬಿದ್ದಿದ್ದು, ಅರಣ್ಯ ವಿಭಾಗದ ಮರ ತೆರವು ತಂಡಗಳು ಬಿದ್ದಂತಹ ಮರ, ರೆಂಬೆ ಕೊಂಬೆಗಳನ್ನು ತೆರವುಗೊಳಿಸಿದ್ದಾರೆ.

ಭಾರಿ ಮಳೆಯಿಂದಾಗಿ ನಗರದ ಪ್ಯಾಟರಿ ಟೌನ್ ಮೆಟ್ರೋ ನಿಲ್ದಾಣಕ್ಕಾಗಿ ಮಣ್ಣು ಅಗೆಯಲು ಮಾಡಿದ್ದ ತಾತ್ಕಾಲಿಕ ತಡೆಯು ವಿಫಲವಾಗಿದೆ. ಇದರಿಂದ ಬೋರ್ ಬ್ಯಾಂಕ್ ರಸ್ತೆಯ ಒಂದು ಭಾಗಕ್ಕೆ ಹಾನಿಯಾಗಿದ್ದು, ಬೋರ್ ಬ್ಯಾಂಕ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ.
ಸಂಚಾರ ಪೊಲೀಸರು ಕೂಡ ಸೂಚನೆ ನೀಡಿ ಪಾಟರಿ ಜಂಕ್ಷನ್ ನಿಂದ ಪಾಟರಿ ಟೌನ್ & ಬೆನ್ಸನ್ ಟೌನ್ ಗೆ ಹೋಗುವ ಬೋರ್ ಬ್ಯಾಂಕ್ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಸ್ಥಳದ ಹತ್ತಿರ ರಸ್ತೆಯು ಕುಸಿದಿರುವುದರಿಂದ ಸಂಪೂರ್ಣವಾಗಿ ಸಂಚಾರ ನಿರ್ಬಂಧಿಸಿದ್ದು, ವಾಹನ ಚಾಲಕರು ಹೇನ್ಸ್ ರಸ್ತೆ -ಮಿಲ್ಲರ್ಸ್ ರಸ್ತೆ- ನಂದಿದುರ್ಗ ರಸ್ತೆ ಮುಖಾಂತರ ತೆರಳುವಂತೆ ಮನವಿ ಮಾಡಿದರು.
ಮಳೆಗಾಲದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ತನ್ನ ವ್ಯಾಪ್ತಿಯ ಎಂಟೂ ಜಿಲ್ಲೆಗಳಲ್ಲಿ ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿಗೆ ಪರ್ಯಾಯವಾಗಿ ಎಂಟು ಪ್ರತ್ಯೇಕ ವಾಟ್ಸ್‌ಆ್ಯಪ್ ಸಂಖ್ಯೆಗಳನ್ನು ನೀಡಿದೆ. ಈ ಮೂಲಕ ವಿದ್ಯುತ್ ಸಮಸ್ಯೆ ಬಗ್ಗೆ ಗ್ರಾಹಕರು ತಮ್ಮ ಪ್ರದೇಶಕ್ಕೆ ಅನುಗುಣವಾಗಿ… pic.twitter.com/q72x14x2cx
— DIPR Karnataka (@KarnatakaVarthe) May 8, 2024
ಬೆಸ್ಕಾಂ ಸಹಾಯವಾಣಿ
ಮಳೆಗಾಲದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ತನ್ನ ವ್ಯಾಪ್ತಿಯ ಎಂಟೂ ಜಿಲ್ಲೆಗಳಲ್ಲಿ ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿಗೆ ಪರ್ಯಾಯವಾಗಿ ಎಂಟು ಪ್ರತ್ಯೇಕ ವಾಟ್ಸ್‌ಆ್ಯಪ್ ಸಂಖ್ಯೆಗಳನ್ನು ನೀಡಿದೆ. ವಿದ್ಯುತ್ ಸಮಸ್ಯೆ ಬಗ್ಗೆ ಗ್ರಾಹಕರು ತಮ್ಮ ಪ್ರದೇಶಕ್ಕೆ ಅನುಗುಣವಾಗಿ ದೂರು ಸಲ್ಲಿಸುವಂತೆ ಮನವಿ ಮಾಡಿದೆ.
ಹಲವು ಕಡೆ ಮುರಿದು ಬಿದ್ದ ಮರ
ಮೈಸೂರು ರಸ್ತೆಯ ಟಿ ಟಿ ಎಂ ಸಿ ಜಂಕ್ಷನ್ ಬಳಿ ಮರ ಬಿದ್ದಿರುವುದರಿಂದ ಟ್ರಾಫಿಕ್ ಉಂಟಾಗಿತ್ತು, ಬಳಿಕ ಮರವನ್ನು ಬೇರೆಡೆ ಸಾಗಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.
ಸಿ.ವಿ ರಾಮನ್ ರಸ್ತೆಯಲ್ಲಿ, ನಾಗರಬಾವಿಯ ಬಿ ಡಿ ಎ ಲೇಔಟ್ ನಲ್ಲಿ ಕೂಡ ಮರ ಬಿದ್ದ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು, ತಕ್ಷಣವೇ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.
ಸರ್.ಸಿ.ವಿ.ರಾಮನ್ ರಸ್ತೆಯ ಏರ್ ಪೋರ್ಸ್ ಶಾಲೆಯ ಎದುರು ಕಾರ್ ನ ಮೇಲೆ ಮರದ ಕೊಂಬೆ ಬಿದ್ದು, ಕಾರು ಜಖಂಗೊಂಡಿತ್ತು, ಅದೃಷ್ಟವಶಾತ್ ಕಾರಿನಲ್ಲಿದ್ದ ಯಾರಿಗೂ ಹಾನಿಯಾಗಿರಲಿಲ್ಲ.
ನೀರು ತುಂಬಿದ ರಸ್ತೆಗಳು
ಹೆಬ್ಬಾಳ ಮೇಲ್ಸೇತುವೆ ಇಳಿಜಾರಿನಲ್ಲಿ ನೀರು ನಿಂತಿದ್ದ ಕಾರಣ ಏರ್ಪೋರ್ಟ್ ಕಡೆಗೆ ನಿಧಾನಗತಿಯ ಸಂಚಾರವಿತ್ತು, ವಡ್ಡರಪಾಳ್ಯ ಜಂಕ್ಷನ್ ಬಳಿ ನೀರು ನಿಂತಿರುವುದರಿಂದ ಹೆಣ್ಣೂರು ಕ್ರಾಸ್ ಕಡೆಗೆ ನಿಧಾನಗತಿಯ ಸಂಚಾರವಿತ್ತು, ಎನ್‌ಜಿಇಎಫ್ ಸಿಗ್ನಲ್ ಬಳಿ ನೀರು ನಿಂತಿರುವುದರಿಂದ ಸದಾನಂದ ನಗರ ಕಡೆಗೆ ನಿಧಾನಗತಿಯ ಸಂಚಾರವಿತ್ತು ಬಳಿಕ ನೀರನ್ನು ಸುಗಮವಾಗಿ ಹರಿಯುಂತೆ ಮಾಡಿದ ಬಳಿಕ ಸಂಚಾರ ಸುಗಮವಾಯಿತು.
ವೀರಣ್ಣಪಾಳ್ಯ ಕಡೆಯಿಂದ ಹೆಬ್ಬಾಳ ಸರ್ಕಲ್ ಕಡೆಗೆ ಯೋಗೇಶ್ವರ್ ನಗರ ಕ್ರಾಸ್ ಹತ್ತಿರ ಮಳೆ ನೀರು ನಿಂತು ವಾಟರ್ ಲಾಗಿಂಗ್ ಆಗಿದ್ದು, ರಸ್ತೆಯಲ್ಲಿ ನಿಧಾನಗತಿಯ ಸಂಚಾರ ಇರುತ್ತದೆ. ಸಂಚಾರ ಪೊಲೀಸ್ ಸಿಬ್ಬಂದಿ ನಮ್ಮ ಸಿಬ್ಬಂದಿ ನೀರು ಸರಾಗವಾಗಿ ಹರಿಯುಂತೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.












Click it and Unblock the Notifications