ಮಹಾ ಮಳೆಗೆ ತತ್ತರಿಸಿದ ಬೆಂಗಳೂರು, ಎಲ್ಲೆಲ್ಲೂ ನೀರು
Recommended Video

Bengaluru Rain: Waterlogging In Many Areas | Oneindia Kannada
ಬೆಂಗಳೂರು, ಸೆಪ್ಟೆಂಬರ್ 02 : ಮುಂಬೈ ಮಳೆಯನ್ನು ನೆನಪಿಸುವ ರೀತಿಯಲ್ಲಿ ಬೆಂಗಳೂರಿನಲ್ಲಿ ಬೆಳಗಿನ ಜಾವ 1 ಗಂಟೆಯಿಂದಲೇ ಸತತ ಸುರಿಯುತ್ತಿರುವ ಭಾರೀ ಮಳೆಯಿಂದ ನಗರ ತತ್ತರಿಸಿದೆ.
ಮಲ್ಲೇಶ್ವರಂ, ಕೆಂಗೇರಿ, ಜಯನಗರ, ಮೆಜೆಸ್ಟಿಕ್, ಜೆಸಿ ನಗರ, ಜೆಪಿ ನಗರ, ಆರ್ಟಿ ನಗರ, ಯಲಹಂಕ, ಹಲಸೂರು, ಬನಶಂಕರಿ, ಶಾಂತಿನಗರ ಮುಂತಾದ ಬಡಾವಣೆಗಳಲ್ಲಿ ಧಾರಾಕಾರ ಮಳೆಯಿಂದ ರಸ್ತೆತುಂಬ ನೀರು ತುಂಬಿಕೊಂಡಿವೆ.
ಶುಕ್ರವಾರವೂ ರಾತ್ರಿಯಿಂದಲೇ ಮಳೆ ಸುರಿದಿದ್ದರಿಂದ ಹೊಸೂರು ರಸ್ತೆಯಲ್ಲಿನ ಕೆಲ ಬಡಾವಣೆಗಳು ನೀರಿನಿಂದ ಆವೃತವಾಗಿದ್ದವು. ಈಗ ಶನಿವಾರವೂ ಮಳೆಯ ಆರ್ಭಟ ಮುಂದುವರಿದಿರುವುದರಿಂದ ಅಲ್ಲಿನ ಜನರ ಗೋಳು ಕೇಳದಂತಾಗಿದೆ.

ಹಲವು ಕಡೆಗಳಲ್ಲಿ ಸಂಚಾರ ವ್ಯತ್ಯಯವಾಗಿರುವುದರಿಂದ ಜನರು ಕೆಲಸಕ್ಕೆ ತೆರಳಲು ಪರದಾಡುತ್ತಿದ್ದಾರೆ, ಕೆಲ ಬಡಾವಣೆಗಳಲ್ಲಿ ಮೊಳಕಾಲು ಮಟ್ಟದಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.












Click it and Unblock the Notifications