Karnataka Rain: 48 ಗಂಟೆ ಕಾಲ ಭರ್ಜರಿ ಮಳೆ ಗ್ಯಾರಂಟಿ! ಯಾವ ಯಾವ ಜಿಲ್ಲೆಗಳಿಗೆ?
ಮಳೆ.. ಮಳೆ... ಹೀಗೆ ಬಿಟ್ಟೂ ಬಿಡದೆ ಸುರಿಯುತ್ತಿರುವ ನವೆಂಬರ್ ಮಳೆ ಕಂಡು ಜನರು ಇದೀಗ ಹಿಡಿಶಾಪ ಹಾಕುವಂತೆ ಆಗಿದೆ. ಯಾಕಂದ್ರೆ ಮುಂಗಾರು ಮಳೆ ಕಾಲ ಮುಗಿದು ಹೋಗಿ, ಇನ್ನೇನು ಹಿಂಗಾರು ಮಳೆಗಾಲದ ಅವಧಿ ಕೂಡ ಅಂತ್ಯವಾಗಿದೆ. ಹೀಗಿದ್ದಾಗ ಚಳಿಗಾಲ ಕೂಡ ಸಮೀಪದಲ್ಲೇ ಇದ್ದರೂ ಮಳೆ ಮಾತ್ರ ನಿಂತಿಲ್ಲ. ಇದು ಕನ್ನಡ ನಾಡಿನ ಜನರಿಗೆ ನಿದ್ದೆಗೆಡುವ ಪರಿಸ್ಥಿತಿ ನಿರ್ಮಾಣ ಮಾಡಿದೆ.
ಅಕಾಲಿಕ ಮಳೆ, ಕೃಷಿಗೆ ಸೇರಿದಂತೆ ಹಲವು ವಿಚಾರಗಳಲ್ಲಿ ಸಮಸ್ಯೆಯನ್ನ ಉಂಟು ಮಾಡ್ತಿದೆ. ಅದ್ರಲ್ಲೂ ಜನರಲ್ಲಿ ನೆಗಡಿ, ಶೀತ, ಜ್ವರ ಸೇರಿ ಸಾಂಕ್ರಾಮಿಕ ರೋಗದ ಭೀತಿಯು ಶುರುವಾಗಿದೆ. ಹೀಗಿದ್ದಾಗಲೇ, ಮತ್ತೆ ಮುಂದಿನ 48 ಗಂಟೆಗಳ ಕಾಲ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ ಆಗಿದೆ.

ಈಗಾಗಲೇ ಭಾರಿ ಪ್ರಮಾಣದಲ್ಲಿ ಮಳೆ ಆಗಿರುವ ಹಿನ್ನೆಲೆ ಜನ ಕೂಡ ಮಳೆಯ ಸಹವಾಸವೇ ಸಾಕು ಅಂತಿದ್ದಾರೆ. ಹೀಗಿದ್ದರೂ, ಭಾರಿ ಮಳೆ ಮಾತ್ರ ನಿಲ್ಲುತ್ತಿಲ್ಲ. ಹಾಗೇ, ಮತ್ತಷ್ಟು ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಮತ್ತೊಮ್ಮೆ ತನ್ನ ಅಬ್ಬರವನ್ನ ತೋರಿಸಲಿದ್ದಾನೆ. ಹಾಗಿದ್ರೆ ಭಾರಿ ಮಳೆ ಸುರಿಯುವ ಜಿಲ್ಲೆಗಳು ಯಾವುವು?
ಮಳೆ.. ಮಳೆ.. ಮತ್ತೆ ಮಳೆ!
ಮಳೆ ಅಬ್ಬರ ಶುರುವಾಗಿ ಬಹುತೇಕ 1 ವಾರ ಕಳೆಯುತ್ತಿದೆ, ಆದರೂ ಅಕಾಲಿಕ ಮಳೆ ನಿಂತು ಹೋಗುತ್ತಿಲ್ಲ. ಹೀಗಿದ್ದಾಗ ಬೆಂಗಳೂರು ಸೇರಿ ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ ಸಿಕ್ಕಿದೆ. ಇದರ ಜೊತೆಗೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗದಲ್ಲಿ ಮಳೆ ಅಬ್ಬರಿಸಲಿದೆ ಎಂದು ಈಗ ಎಚ್ಚರಿಕೆ ನೀಡಲಾಗಿದೆ.
ಮಲೆನಾಡು ಭಾಗದಲ್ಲೂ ಮಳೆ ಅಬ್ಬರ!
ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮೈಸೂರು & ಕೊಡಗು ಜಿಲ್ಲೆ ಕೂಡ ಮಳೆ ಅಬ್ಬರಕ್ಕೆ ಟಾರ್ಗೆಟ್ ಆಗಲಿದೆ. ಹಾಗೇ, ಉತ್ತರ ಕರ್ನಾಟಕ ಭಾಗ ಸೇರಿ, ಬೆಂಗಳೂರು ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲೂ ಭಾರಿ ಮಳೆ ಅಬ್ಬರಿಸುವುದು ಗ್ಯಾರಂಟಿ ಆಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಚಂಡಮಾರುತ ರೂಪುಗೊಂಡು ಪರಿಸ್ಥಿತಿ ಕೈಮೀರುತ್ತಿದೆ. ಅದರಲ್ಲೂ ಇನ್ನೇನು ಬೆಳೆ ಕೈಗೆ ಸಿಗಬೇಕು ಅಂತಾ ಕಾಯುತ್ತಿದ್ದ ಅನ್ನದಾತ ರೈತರಿಗೆ ಈಗ ಅಕಾಲಿಕ ಮಳೆ ದೊಡ್ಡ ಚಿಂತೆ ತರಿಸಿದೆ. ಬೆಳೆ ಕಳೆದುಕೊಳ್ಳುವ ಆತಂಕ ರೈತರಲ್ಲಿ ಆವರಿಸಿದೆ.
ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ...
ಮಳೆ ಇಲ್ಲದೆ ಸೊರಗಿದ್ದ ಕರ್ನಾಟಕದ ಜನರಿಗೆ ಮಳೆರಾಯ ಕಳೆದ 6 ತಿಂಗಳಿಂದ ಭಾರಿ ದೊಡ್ಡ ಕೊಡುಗೆ ನೀಡಿದ್ದಾನೆ. ಅದರಲ್ಲೂ ಭರ್ಜರಿ ಮಳೆಗೆ, ಕರ್ನಾಟಕದ ಪ್ರತಿಯೊಂದು ಜಿಲ್ಲೆ ಕೂಡ ತಂಪಾಗಿದೆ. ಹೀಗಿದ್ದಾಗ ಹಿಂಗಾರು ಮಳೆ ಮೋಡಗಳು ಕರ್ನಾಟಕದ ಕಡೆಗೆ ಓಡೋಡಿ ಬರುತ್ತಿದ್ದು ಕರ್ನಾಟಕದಲ್ಲಿ ಮತ್ತಷ್ಟು ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೆ. ಆದರೆ, ಈಗಾಗಲೇ ಬೆಳೆ ಕೈಗೆ ಬರುವ ನಿರೀಕ್ಷೆಯಲ್ಲಿ ಖುಷಿಯಾಗಿರುವ ರೈತರಿಗೆ, ಮಳೆ ಎಂಟ್ರಿ ಆಗಿದ್ದು ಭಯ ಹುಟ್ಟಿಸಿದೆ. ಯಾಕಂದ್ರೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣ ಆಗುತ್ತಿದೆ.












Click it and Unblock the Notifications