ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಸೆಮಿ ಲಾಕ್‌ಡೌನ್ ಅಥವಾ ಲಾಕ್‌ಡೌನ್: ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಮಾರ್ಚ್ 22: "ರಾಜ್ಯದಲ್ಲಿ ಕೊರೊನಾ ವೈರಸ್ 2ನೇ ಅಲೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಆದರೆ ಸೆಮಿ ಲಾಕ್‌ಡೌನ್ ಅಥವಾ ಲಾಕ್‌ಡೌನ್ ಇಂದಿನ ಪರಿಸ್ಥಿತಿಗೆ ಅನ್ವಯವಾಗುವುದಿಲ್ಲ'' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಸುಧಾಕರ್, ""ಮಹಾರಾಷ್ಟ್ರ, ಕೇರಳ ರಾಜ್ಯಗಳ ಗಡಿಭಾಗಗಳಿಂದ ಬರುವ ಜನರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಆರ್.ಟಿ-ಪಿಸಿಆರ್ ನೆಗೆಟಿವ್ ವರದಿ ಇಲ್ಲದೇ ಬಿಡದಿರುವುದು ಅಥವಾ ಅಲ್ಲೇ ಪರೀಕ್ಷೆ ಮಾಡುವುದು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದು, ಹೆಚ್ಚು ಅರಿವು ಮೂಡಿಸುವುದು ಎನ್ನುವ ವಿಷಯಗಳ ಬಗ್ಗೆ ಆರೋಗ್ಯ ಇಲಾಖೆಯ ಸಭೆಯಲ್ಲಿ ಚರ್ಚೆಯಾಗಿದೆ. ಜನರು ಆದಷ್ಟು ಬೇಗ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಲಸಿಕೆ ಪಡೆಯುವಂತೆ ಮಾಡಬೇಕಿದೆ'' ಎಂದರು.

 ಕರ್ನಾಟಕದಲ್ಲಿ 1445 ಕೊರೊನಾ ಪ್ರಕರಣ ದಾಖಲು; ಬೆಂಗಳೂರಿನಲ್ಲೇ ಹೆಚ್ಚು ಕರ್ನಾಟಕದಲ್ಲಿ 1445 ಕೊರೊನಾ ಪ್ರಕರಣ ದಾಖಲು; ಬೆಂಗಳೂರಿನಲ್ಲೇ ಹೆಚ್ಚು

""ರಾಜ್ಯದ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲು ಗೃಹ ಇಲಾಖೆಯ ಸಹಯೋಗ ಬೇಕಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಸೆಮಿ ಲಾಕ್‌ಡೌನ್ ಅಥವಾ ಲಾಕ್‌ಡೌನ್ ಎಲ್ಲ ಇಂದಿನ ಪರಿಸ್ಥಿತಿಗೆ ಅನ್ವಯವಾಗಲ್ಲ. ಹಿಂದಿನ ತಪ್ಪುಗಳನ್ನು ನೋಡಿಕೊಂಡು ಈಗ ಸರಿಪಡಿಸಿಕೊಳ್ಳಬೇಕಿದೆ'' ಎಂದು ಹೇಳಿದರು.

Health Minister Dr K.Sudhakar Has Clarified About The Semi-Lockdown Or Lockdown In Karnataka

ಮದುವೆ ಸಮಾರಂಭಗಳಲ್ಲಿ ನಿಗದಿಪಡಿಸಿದ ಮಿತಿ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಕ್ರಮ ಅನುಸರಿಸಬೇಕು. ಇಲ್ಲದಿದ್ದರೆ ಮಾಲೀಕರ ಮೇಲೆ, ಆಯೋಜಕರ ಮೇಲೆ ದಂಡ ವಿಧಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಭೌತಿಕ ಅಂತರ ಕಾಯ್ದುಕೊಳ್ಳಬೇಕೆಂದು ಸೂಚಿಸಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ಷ್ಮವಾಗಿ ಗಮನಿಸಿ, ಸೋಂಕಿತರ ಪ್ರಮಾಣ ಹೆಚ್ಚಿದ್ದರೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ, ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಈ ವಾರದಿಂದಲೇ ಮೂರು ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು. ಈ ಎಲ್ಲ ಕ್ರಮಗಳಿಂದ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Recommended Video

ಮಹಾರಾಷ್ಟ್ರಕ್ಕೆ ತೆರಳುವ ಮತ್ತು ಬೆಳಗಾವಿಗೆ ಬರುವ 120 ಬಸ್‌ಗಳ ಸಂಚಾರ ತಾತ್ಕಾಲಿಕ ಸ್ಥಗಿತ | Oneindia Kannada

English summary
Strict measures have been taken to prevent the second wave of coronavirus in the state, Health and medical education minister Dr K Sudhakar said that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X