ಬೆಂಗಳೂರಲ್ಲಿ ಎಚ್1ಎನ್1 46 ಪ್ರಕರಣ ಪತ್ತೆ: ರಾಜ್ಯಾದ್ಯಂತ ಹೈ ಅಲರ್ಟ್
ಬೆಂಗಳೂರು, ಅಕ್ಟೊಬರ್ 6: ರಾಜ್ಯದಲ್ಲಿ ಮಳೆಯ ಅಬ್ಬರದ ಬೆನ್ನಲ್ಲೇ ಎನ್1 ಎನ್1 ಹಾಗೂ ಸಾಂಕ್ರಾಮಿಕ ರೋಗಗಳ ಭೀತಿ ಆರಂಭವಾಗಿದೆ. ಆರೋಗ್ಯ ಇಲಾಖೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ.
ಬೆಂಗಳೂರಲ್ಲಿ ಒಟ್ಟು 46 ಎಚ್1 ಎನ್1 ಪ್ರಕರಣಗಳು ಪತ್ತೆಯಾಗಿವೆ, ಖಾಸಗಿ, ಸರ್ಕಾರಿ ಆಸ್ಪತ್ರೆಗಳಿಗೆ ಮುಂಜಾಗ್ರತೆವಹಿಸಲು ಸೂಚನೆ ನೀಡಲಾಗಿದೆ. ಔಷಧ ಸ್ಟಾಕ್ ಇಟ್ಟುಕೊಳ್ಳಲು ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ರಾಜ್ಯಾದ್ಯಂತ ಬಹುತೇಕ ಆಸ್ಪತ್ರೆಗಳಲ್ಲಿ ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಪರೀಕ್ಷೆಯಿಂದ ಎಚ್1 ಎನ್1 ಪ್ರಕರಣ ಪತ್ತೆಯಾಗಿದೆ.ಈ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಎಲ್ಲಾ ಆಸ್ಪತ್ರೆಗಳಿಗೂ ಸುತ್ತೋಲೆ ಹೊರಡಿಸಿದೆ.
ಹೀಗಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಶಂಕಿತ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಸಗತ್ಯ ಸಲಹೆ ಸೂಚನೆ, ಚಿಕಿತ್ಸಾ ನಂತರದ ಅನುಸರಣೆ ಮುಂತಾದ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆರೋಗ್ಯ ಇಲಾಖೆ ಆಯುಕ್ತರು ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶಿಸಿದ್ದಾರೆ.
ರಾಜ್ಯದಲ್ಲಿ ಜನವರಿ ಆರಂಭದಿಂದ ಇಲ್ಲಿಯವರೆಗೆ 3876 ಶಂಕಿತ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 139 ಪ್ರಕರಣಗಳು ಪ್ರಕರಣಗಳು ದೃಢಪಟ್ಟಿವೆ. ಕಳೆದ ವರ್ಷ ಇದೇ ಸಮಯಕ್ಕೆ 13,849 ಶಂಕಿತ ಮಾದರಿ ಪರೀಕ್ಷೆಯಲ್ಲಿ 1134 ಪ್ರಕರಣಗಳು ದೃಢಪಟ್ಟಿತ್ತು.

ಎಚ್1ಎನ್1 ರೋಗದ ಲಕ್ಷಣವೇನು?
ಎಚ್ 1 ಎನ್1 ರೋಗವು ಹರಡಿರುವ ವ್ಯಕ್ತಿಗೆ ಪ್ರಮುಖವಾಗಿ ತೀವ್ರ ಜ್ವರ, ನೆಗಡಿ, ಗಂ ಟಲು ಕೆರೆತ, ಅತಿಯಾದ ಮೈ ಕೈ ನೋವು ಕೆಮ್ಮು ಮತ್ತು ಕಫ ಬರುವುದರೊಂದಿಗೆ ಅತಿಯಾಗಿ ವಾಂತಿ ಬೇದಿ ಉಂಟಗುತ್ತಿರುತ್ತದೆ. ಹಾಗೂ ಉಸಿರಾಟ ತೊಂದರೆಗಳ ಲಕ್ಷ ಣಗಳು ಉಂಟಾಗುತ್ತಿರುತ್ತದೆ. ಮನೆಯ ಅಥವಾ ಕುಟುಂಬದ ಸದಸ್ಯರುಗಳಲ್ಲಿ ಯಾರಿ ಗಾದರೂ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಡಮಾಡದೆ ಹತ್ತಿರದ ಆಸ್ಪತ್ರೆಗಳಲ್ಲಿ ದಾಖಲಿಸಿ ಸೂಕ್ತ ಚಿಕಿತ್ಸೆಯನ್ನು ನೀಡಿಸಬೇಕು. ಎಚ್ 1 ಎನ್ 1 ಜ್ವರವನ್ನು ಸಮರ್ಪ ಕವಾಗಿ ನಿಯಂತ್ರಿಸುವಲ್ಲ ನಾಗರೀಕರು ಜವಾಬ್ದಾರಿಯನ್ನು ಹೊರ ಬೇಕಾಗಿರುತ್ತದೆ. ಯಾವುದೇ ಕಾಯಿಲೆ ಬಗ್ಗೆ ಬೇಜವಬ್ದಾರಿಯನ್ನು ವಹಿಸಬಾರದು.

ಎಚ್1ಎನ್1 ಹೇಗೆ ಹರಡುತ್ತೆ?
ಹವಾಮಾನ ವೈಪರಿತ್ಯದಿಂದ ಹೆಚ್1ಎನ್1 ಇನ್‍ಫ್ಲೂಯೆಂಜಾ ಹೆಚ್,3, ಇನ್‍ಫ್ಲೂಯೆಂಜಾ ಬಿ ವೈರಾಣುಗಳಿಂದ ಈ ರೋಗದ ಲಕ್ಷಣ ಕಂಡು ಬರುತ್ತದೆ. ಪ್ರಮುಖವಾಗಿ ಕೆಮ್ಮುವುದರಿಂದ, ಸೀನುವುದರಿಂದ ಆ ವೇಳೆ ವೈರಾಣು ಕಣಗಳು ಗಾಳಿಯಲ್ಲಿ ಹರಡಿ ಈ ಸೋಂಕು ಕಂಡು ಬರುತ್ತವೆ. ಮಾತ್ರವಲ್ಲ, ಇದು ನಿತ್ಯದ ವಸ್ತುಗಳ ಮೇಲೆ ಕುಳಿತಾಗ ಅದರ ಮೇಲೆ ನಮ್ಮ ಸ್ಪರ್ಶ ಮಾಡಿದಾಗ ನಮ್ಮ ಕೈಗಳಿಂದ ಮುಖ ಹಾಗೂ ಮೂಗಿನ ಮೇಲಿಟ್ಟಾಗ ಈ ಸೋಂಕು ಹರಡುವ ಸಾಧ್ಯತೆ ಇವೆ.

ಯಾರಿಗೆ ಈ ರೋಗ ಬೇಗ ಹರುಡುವುದು
ಇನ್ನೂ ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆ ಅಥವಾ ಶ್ವಾಸಕೋಶದ ಸೋಂಕು ಮಧುಮೇಹದ ರೋಗಿಗಳಿಗೆ ಇದು ಬೇಗನೇ ಹರಡುತ್ತದೆ. ಈ ವೇಳೆ ಅತಿಯಾದ ಜ್ವರ, ನೆಗಡಿ, ಕೆಮ್ಮು ಉಂಟಾಗಿ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಟ್ಯಾಮಿಫ್ಲೋ ಮಾತ್ರೆಗಳನ್ನು ಸಂಬಂಧಪಟ್ಟ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ.

ಮುಂಜಾಗ್ರತಾ ಕ್ರಮಗಳು
ಮುಂಜಾಗ್ರತೆಯ ಕ್ರಮಗಳು ಜನ ಸಾಮಾನ್ಯರು ಮುಂಜಾಗ್ರತಾ ಕ್ರಮವಾಗಿ ಜನ ಸಂದಣಿಯಿರುವ ಸ್ಥಳಗಳಿಗೆ ತೆರಳುವಾಗಿ.ಬಾಯಿಗೆ ಮತ್ತು ಮೂಗಿಗೆ ಮಾಸ್ಕ್ ಗಳನ್ನು ದರಿಸಿಕೊಳ್ಳಬೇಕು. ರೋಗದ ಲಕ್ಷಣವಿರುವ ವ್ಯಕ್ತಿಗಳಿಂದ ಕನಿಷ್ಟ 1 ಮೀಟರ್ ದೂರ ದಲ್ಲಿರುವಂತೆ ಸೂಕ್ತವಾದ ಕ್ರಮವನ್ನು ವಹಿಸಿಕೊಳ್ಳಬೇಕು. ರೋಗಿಷ್ಟರಿಂದ ಹಸ್ತಲಾಘವ ಹಾಗೂ ಇತರೆ ರೂಪದಲ್ಲಿ ದೈಹಿಕ ಸಂಪರ್ಕ ಹೊಂದುವುದರಿಂದ ಮತ್ತೊಬ್ಬರಿಗೂ ರೋಗವು ಹರಡಿಕೊಳ್ಳುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಮುಂಜಾಗ್ರತಾ ಕ್ರಮವನ್ನು ಅತ್ಯಗತ್ಯವಾಗಿ ಕೈಗೊಳ್ಳಬೇಕಾಗುತ್ತದೆ.

ಹಂದಿಗಳ ನಿಯಂತ್ರಿಸಬೇಕು:
ನಗರದಲ್ಲಿ ತಿರುಗಾಡುವ ಹಂದಿಗಳನ್ನು ನಿಯಂತ್ರಿಸಲು ತಕ್ಷಣ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ. ಪಟ್ಟಣದಲ್ಲಿ ಹಂದಿಗಳ ತಿರುಗಾಟವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ನಿಯಂತ್ರಿಸ ಬೇಕಾಗಿದೆ,












Click it and Unblock the Notifications