ವಿಚಿತ್ರ ಘಟನೆ: ಸ್ಮಶಾನದಲ್ಲಿ ಹೂತಿರುವ ಹೆಣವನ್ನೂ ಬಿಡಲ್ಲ ಜನ
ಬೆಂಗಳೂರು, ಮಾರ್ಚ್ 6: ಸ್ಮಶಾನದಲ್ಲಿ ಹೂತಿದ್ದ ಶವದ ರುಂಡವನ್ನು ದುಷ್ಕರ್ಮಿಗಳು ಕತ್ತರಿಸಿಕೊಂಡು ಹೋಗಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಗಮಂಗಲ ತಾಲೂಕಿನ ಬೈರನಹಳ್ಳಿಯಲ್ಲಿ ಈ ಘಟನೆ ನಡೆದಿದೆ, ಎರಡು ತಿಂಗಳ ಹಿಂದೆ ಅನಾರೋಗ್ಯದಿಂದ ಮೃತರಾಗಿದ್ದ ಅರಸಪ್ಪ ಎಂಬುವವರ ರುಂಡವನ್ನು ಕತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.
ಊರ ಹೊರಗಿನ ಸ್ಮಶಾನದಲ್ಲಿ ನರಸಪ್ಪ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ ಕಳೆದ ಅಮಾವಾಸ್ಯೆ ರಾತ್ರಿ ಶವವನ್ನು ದುಷ್ಕರ್ಮಿಗಳು ಹೊರ ತೆಗೆದು ತಲೆಯನ್ನುಕತ್ತರಿಸಿಕೊಂಡು ಹೋಗಿದ್ದಾರೆ.
ಅದಕ್ಕೂ ಮುನ್ನ ಪೂಜೆ ಸಲ್ಲಿಸಿರುವ ಕುರಿತು ಅನುಮಾನ ವ್ಯಕ್ತವಾಗಿದೆ. ಆ ರುಂಡವನ್ನು ಯಾರಾದರೂ ಯಾವ ಕಾರಣಕ್ಕೆ ಬಳಸುತ್ತಾರೆ ಎನ್ನುವ ಕುರಿತು ಅನುಮಾನ ವ್ಯಕ್ತವಾಗಿದೆ.