• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಪ್ಪು ಜಯಂತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಕ್ಕರ್ ಹಾಕಿದ್ದೇಕೆ?

|
   ಈ ಬಾರಿಯ ಟಿಪ್ಪು ಜಯಂತಿಗೆ ಎಚ್ ಡಿ ಕುಮಾರಸ್ವಾಮಿ ಗೈರು | Oneindia Kannada

   ಬೆಂಗಳೂರು, ನವೆಂಬರ್ 9: ಟಿಪ್ಪು ಜಯಂತಿ ಕಾರ್ಯಕ್ರಮದಿಂದ ದೂರ ಉಳಿಯಲು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಆರಂಭವಾಗಿದ್ದ ಟಿಪ್ಪು ಜಯಂತಿಯನ್ನು ಕುಮಾರಸ್ವಾಮಿ ಕೂಡ ವಿರೋಧಿಸಿದ್ದರು.

   ರಾಜಕೀಯ ಕಾರಣಗಳಿಗಾಗಿ ಟಿಪ್ಪು ಜಯಂತಿ ಪರ ವಿರೋಧದ ಕುರಿತು ಚರ್ಚೆಯ ಅಗತ್ಯವಿರಲಿಲ್ಲ, ಯಥಾಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗಬೇಕೆನ್ನುವುದು ಕುಮಾರಸ್ವಾಮಿಯವರ ವಾದವಾಗಿತ್ತು. ಈಗ ಮುಖ್ಯಮಂತ್ರಿಯಾದ ಬಳಿಕ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ಅಂತರ ಕಾಯ್ದುಕೊಂಡಿದ್ದಾರೆ.

   ಟಿಪ್ಪು ಜಯಂತಿಗೆ ವಿರೋಧ : ನ.10ರಂದು ಕೊಡಗು ಬಂದ್‌ಗೆ ಕರೆ

   ನವೆಂಬರ್ 10ರಂದು ವಿಧಾನಸೌಧದಲ್ಲಿ ನಡೆಯುತ್ತಿರುವ ಟಿಪ್ಪು ಜಯಂತಿಗೆ ಕಾಂಗ್ರೆಸ್ ನಾಯಕರುಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬದಲಿಗೆ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಉದ್ಘಾಟನೆ ಮಾಡಲಿದ್ದಾರೆ.

   ವಾಲ್ಮೀಕಿ ಜಯಂತಿಗೂ ಕುಮಾರಸ್ವಾಮಿ ಗೈರಾಗಿದ್ದರು

   ವಾಲ್ಮೀಕಿ ಜಯಂತಿಗೂ ಕುಮಾರಸ್ವಾಮಿ ಗೈರಾಗಿದ್ದರು

   ಇತ್ತೀಚೆಗೆ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಿಂದಲೂ ಕುಮಾರಸ್ವಾಮಿ ಹಾಗೂ ಎಚ್‌ಡಿ ದೇವೇಗೌಡರು ದೂರ ಉಳಿದಿದ್ದರು ಇದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ವಿಧಾನಸೌಧ ಎದುರು ವಾಲ್ಮೀಕಿ ನಾಯಕರು ಪ್ರತಿಭಟನೆಯನ್ನೂ ಕೂಡ ನಡೆಸಿದ್ದರು.

   ಆಮಂತ್ರಣ ಪತ್ರಿಕೆಯಲ್ಲಿ ಎಚ್‌ಡಿಕೆ ಹೆಸರಿಲ್ಲ

   ಆಮಂತ್ರಣ ಪತ್ರಿಕೆಯಲ್ಲಿ ಎಚ್‌ಡಿಕೆ ಹೆಸರಿಲ್ಲ

   ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯನ್ನು ರಾಜಕೀಯ ಮುಖಂಡರುಗಳಿಗೆ ಕಳುಹಿಸಲಾಗಿದ್ದು ಅದರಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹಾಗೂ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಹೆಸರು ಎಲ್ಲೂ ಕಾಣುತ್ತಿಲ್ಲ ಹಾಗಾಗಿ ಅವರು ಟಿಪ್ಪು ಜಯಂತಿಗೆ ಬರುವುದಿಲ್ಲ ಎನ್ನುವ ವಿಚಾರ ಬಹಿರಂಗಗೊಂಡಿದೆ.

   ಟಿಪ್ಪು ಜಯಂತಿ ಓಕೆ, ಆದರೆ ಪರ, ವಿರೋಧಿ ಮೆರವಣಿಗೆಗೆ ಅವಕಾಶವಿಲ್ಲ

   ಅನಂತ್ ಕುಮಾರ್ ಹೆಗಡೆ ಹೆಸರು ಕೂಡ ಇಲ್ಲ

   ಅನಂತ್ ಕುಮಾರ್ ಹೆಗಡೆ ಹೆಸರು ಕೂಡ ಇಲ್ಲ

   ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮೊದಲೇ ತಿಳಿಸಿದ್ದರು. ಅದರಂತೆಯೇ ಈಗ ಬಂದಿರುವ ಆಮಂತ್ರಣ ಪತ್ರಿಕೆಯಲ್ಲಿ ಅನಂತ್ ಕುಮಾರ್ ಹೆಗಡೆ ಹೆಸರನ್ನು ಎಲ್ಲಿಯೂ ಹಾಕಿಲ್ಲ.

   ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಿಂದ ಹೆಗಡೆ ಹೆಸರು ಕಡೆಗೂ ಮಾಯ

   ಬ್ಯಾಂಕ್ವೆಟ್‌ ಹಾಲ್‌ನಲ್ಲಿಯೇ ಟಿಪ್ಪು ಜಯಂತಿ

   ಬ್ಯಾಂಕ್ವೆಟ್‌ ಹಾಲ್‌ನಲ್ಲಿಯೇ ಟಿಪ್ಪು ಜಯಂತಿ

   ಈ ಮೊದಲು ರವೀಂದ್ರ ಕಲಾಕ್ಷೇತ್ರದಲ್ಲಿ ಟಿಪ್ಪ ಜಯಂತಿ ಆಚರಣೆಗೆ ಸರ್ಕಾರ ಮುಂದಾಗಿತ್ತು ಆದರೆ ಭದ್ರತೆಯ ಸೃಷ್ಟಿಯಿಂದ ವಿಧಾನಸೌಧದಲ್ಲಿ ಟಿಪ್ಪು ಜಯಂತಿ ಮಾಡುವಂತೆ ಒತ್ತಡ ಬಂದ ಕಾರಣ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿಯೇ ಟಿಪ್ಪು ಜಯಂತಿ ಆಚರಣೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ತಿಳಿಸಿದ್ದಾರೆ.

   ಟಿಪ್ಪು ಹಿಡ್ಕೊಂಡ ಸಿದ್ದರಾಮಯ್ಯನವರಿಗೆ ಆದ ಗತಿ ಎಚ್ಡಿಕೆಗೂ ಆಗುತ್ತೆ: ಈಶ್ವರಪ್ಪ

   English summary
   Chief minister HD Kumaraswamy will be absent for controversial Tipu Jayanti No mention of his name in government invitation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X