ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾವಡೇಕರ್ 'ಧಮಾಕಾ' ಹೇಳಿಕೆಗೆ ಎಚ್ಡಿಕೆ ರಿವರ್ಸ್ ಶಾಟ್!

|
Google Oneindia Kannada News

Recommended Video

H D Kumaraswamy : ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಹೇಳಿಕೆಗೆ ಟಾಂಗ್ ಕೊಟ್ಟ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು, ಡಿಸೆಂಬರ್ 5: ಡಿಸೆಂಬರ್‌ನಲ್ಲಿ ಕರ್ನಾಟಕ ರಾಜಕೀಯದಲ್ಲಿ 'ಧಮಾಕಾ' ನಡೆಯಲಿದೆ ಎಂದು ಹೇಳಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆಗೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಇದೊಂದು ಸತ್ತು ಹೋದ ವಿಚಾರ ಎಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುವ ಮುನ್ನ ಸುದ್ದಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು ಈಗಾಗಲೇ ಆರು ತಿಂಗಳಿನಿಂದ ಈ ರೀತಿ ಭೂಕಂಪ ನಡೆಯುತ್ತಲೇ ಇದೆ ಇದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಇನ್ನುಮುಂದೆ ಅಂಥಹದ್ದೇನು ಸಂಭವಿಸುವುದಿಲ್ಲ, ಸಮ್ಮಿಶ್ರ ಸರ್ಕಾರ ಹೆಬ್ಬಂಡೆಯಂತೆ ಗಟ್ಟಿಯಾಗಿದೆ. ಸಣ್ಣಪುಟ್ಟ ಭೂಕಂಪಕ್ಕೆ ಸರ್ಕಾರ ಬಗ್ಗಲ್ಲ ಎಂದು ಜಾವಡೇಕರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಸುಳ್ಳಿನ ಸೃಷ್ಟಿಕರ್ತ: ಬಿಜೆಪಿ ವಾಗ್ದಾಳಿ ರಾಹುಲ್ ಗಾಂಧಿ ಸುಳ್ಳಿನ ಸೃಷ್ಟಿಕರ್ತ: ಬಿಜೆಪಿ ವಾಗ್ದಾಳಿ

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯರೆಲ್ಲರೂ ಒಟ್ಟಾಗಿದ್ದಾರೆ, ಬಿಜೆಪಿಯವರು ಈ ರೀತಿ ಹಗಲು ಕನಸು ಕಾಣುತ್ತಲೇ ಇದ್ದಾರೆ. ಈ ರೀತಿಯ ಷಡ್ಯಂತ್ರದಿಂದ ಸರ್ಕಾರವನ್ನು ಉರುಳಿಸಲು ಸಾಧ್ಯವಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಮೈತ್ರಿ ಪಕ್ಷ ಸ್ಥಿರವಾಗಿದೆ

ಮೈತ್ರಿ ಪಕ್ಷ ಸ್ಥಿರವಾಗಿದೆ

ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಹಲವು ತಂತ್ರಗಳನ್ನು ಬಿಜೆಪಿ ಮಾಡಿದೆ, ಅದರಲ್ಲಿ ವಿಫಲರಾಗಿ ಹತಾಶೆಯಿಂದ ಜಾವಡೇಕರ್ ಈ ರೀತಿ ಮಾತನಾಡುತ್ತಿದ್ದಾರೆ, ಮೈತ್ರಿ ಪಕ್ಷ ಸ್ಥಿರವಾಗಿದೆ ಎಂದು ಸಚಿವ ಆರ್‌ವಿ ದೇಶಪಾಂಡೆ ಹೇಳಿದ್ದಾರೆ.

ಬಿಜೆಪಿಯ ಕುದುರೆ ವ್ಯಾಪಾರ ಗುಟ್ಟಾಗೇನು ಉಳಿದಿಲ್ಲ

ಬಿಜೆಪಿಯ ಕುದುರೆ ವ್ಯಾಪಾರ ಗುಟ್ಟಾಗೇನು ಉಳಿದಿಲ್ಲ

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ, ಬಿಜೆಪಿಯ ಕುದುರೆ ವ್ಯಾಪಾರ ಗುಟ್ಟಾಗೇನು ಉಳಿದಿಲ್ಲ, ಆರು ತಿಂಗಳಿಂದ ಹುಲಿ ಬಂತು ಹುಳಿ ಕಥೆ ಹೇಳುತ್ತಿದ್ದಾರೆ, ಏನು ಆಗುತ್ತೋ ನಾವು ನೋಡ್ತೀವಿ ಎಂದು ಸಚಿವ ಸಾರಾ ಮಹೇಶ್ ಸವಾಲು ಹಾಕಿದ್ದಾರೆ.

ರಾಜ್ಯಕ್ಕೆ ಬರುತ್ತಿದ್ದಾರೆ ಬಿಜೆಪಿ ರಾಷ್ಟ್ರನಾಯಕರು, ಚುರುಕಾಗಲಿದೆ ರಾಜಕೀಯ ರಾಜ್ಯಕ್ಕೆ ಬರುತ್ತಿದ್ದಾರೆ ಬಿಜೆಪಿ ರಾಷ್ಟ್ರನಾಯಕರು, ಚುರುಕಾಗಲಿದೆ ರಾಜಕೀಯ

ಕುದುರೆ ವ್ಯಾಪಾರವನ್ನು ಬಿಜೆಪಿ ಒಪ್ಪಿಕೊಂಡಿದೆ

ಕುದುರೆ ವ್ಯಾಪಾರವನ್ನು ಬಿಜೆಪಿ ಒಪ್ಪಿಕೊಂಡಿದೆ

ಬಿಜೆಪಿಯವರು ಹತಾಶೆಯಿಂದ ಮಾತನಾಡುತ್ತಿದ್ದಾರೆ, ಈ ಮೂಲಕ ಅವರೇ ಕುದುರೆ ವ್ಯಾಪಾರ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ, ಏನೇ ಆಮಿಷ, ತಂತ್ರಗಳಿಗೆ ನಾವು ಮಣಿಯುವುದಿಲ್ಲ, ಕುಮಾರಸ್ವಾಮಿಯವರಿಗೆ ಮಾತು ಕೊಟ್ಟಿದ್ದೇವೆ ಐದು ವರ್ಷ ಮೈತ್ರಿ ಸರ್ಕಾರ ಸ್ಥಿರವಾಗಿರಲಿದೆ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ರಾಜ್ಯರಾಜಕಾರಣದಲ್ಲಿ ಭೂಕಂಪ ಆಗಿಲ್ಲ

ರಾಜ್ಯರಾಜಕಾರಣದಲ್ಲಿ ಭೂಕಂಪ ಆಗಿಲ್ಲ

ರಾಜ್ಯ ರಾಜಕಾರಣದಲ್ಲಿ ಯಾವುದೇ ಭೂಕಂಪ ಆಗಿಲ್ಲ ಆದರೆ ಕೆಲವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ, ಆರು ತಿಂಗಳಿಂದ ನಾವು ನೋಡುತ್ತಲೇ ಇದ್ದೇವೆ, ಕುಮಾರಸ್ವಾಮಿ ಸರ್ಕಾರಕ್ಕೆ ಯಾವ ಕಂಟಕವೂ ಇಲ್ಲ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

ವರ್ಷದಲ್ಲಿ ಎರಡು ಬಾರಿ ನೀಟ್, ಜೀ ಪರೀಕ್ಷೆ: ಜಾವಡೇಕರ್ ವರ್ಷದಲ್ಲಿ ಎರಡು ಬಾರಿ ನೀಟ್, ಜೀ ಪರೀಕ್ಷೆ: ಜಾವಡೇಕರ್

English summary
Chief minister H.D.Kumaraswamy has countered union minister Prakash Javadekar statement of earthquake in state politics that the coalition government is safe and strong.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X