ನನ್ನ ಸ್ವಂತ ಮನೆಗೆ ಬಂದಂತನ್ನಿಸುತ್ತಿದೆ: ಬೆಂಗಳೂರಿನಲ್ಲಿ ಪಿಯೂಶ್ ಗೋಯಲ್
ಬೆಂಗಳೂರು, ಜೂನ್ 7: ನಾನು ನನ್ನ ಸ್ವಂತ ಮನೆಗೇ ಬಂದಿದ್ದೇನೆನ್ನಿಸುತ್ತಿದೆ ಎಂದು ದಲಿತರೊಬ್ಬರ ಮನೆಯಲ್ಲಿ ಊಟ ಮಾಡಿದ ನಂತರ ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ತಮ್ಮ ಸಂತಸ ಹೊರಹಾಕಿದ್ದಾರೆ.
ಎರಡು ದಿನ ಬೆಂಗಳೂರು ಪ್ರವಾಸದಲ್ಲಿದ್ದ ಪಿಯೂಶ್ ಗೋಯಲ್ ನನಗೆ ಈ ಮನೆಯಲ್ಲಿ ಸಿಕ್ಕ ಪ್ರೀತಿ, ಆದರಾತಿಥ್ಯಕ್ಕೆ ನಾನು ಚಿರಋಣಿ, ನನಗೆ ಬೇರೆಲ್ಲೋ ಬಂದಿದ್ದೇನೆ ಎಂದು ಅನ್ನಿಸಲೇ ಇಲ್ಲ. ನನ್ನ ಸ್ವಂತ ತಂಗಿಯ ಮನೆಯಲ್ಲಿದ್ದೇನೆ ಅನ್ನಿಸಿತು. ಇಂಥ ಆದರದ ಆತಿಥ್ಯ ನೀಡಿದ್ದಕ್ಕೆ ಧನ್ಯವಾದ ಎಂದು ಅವರು ಹೇಳಿದರು.[ಸಿದ್ದರಾಮಯ್ಯ ಕಾಲ್ಗುಣವೇ ಸರಿಯಿಲ್ಲ! ಬಿಎಸ್ವೈ ವ್ಯಂಗ್ಯ]

ದೇಶದ ಭವಿಷ್ಯಕ್ಕಾಗಿ, ಪ್ರತಿಯೊಬ್ಬ ವ್ಯಕ್ತಿಯನ್ನೂ ಸಮಾನವಾಗಿ ಕಾಣುವ ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಗೆ ನಾವೆಲ್ಲ ಬಂದ್ಧರಾಗಿದ್ದೇವೆ. ಯಾರನ್ನೂ ತಾರತಮ್ಯದಿಂದ ನೋಡುವುದು ತರವಲ್ಲ. ನಾವೆಲ್ಲರೂ ಸೇರಿ ಭಾರತವನ್ನು ಸೂಪರ್ ಪವರ್ ಮಾಡಬೇಕಿದೆ ಎಂದು ಸಹ ಅವರು ಇದೇ ಸಂದರ್ಭದಲ್ಲಿ ನುಡಿದರು.
ಕಳೆದ ತಿಂಗಳಷ್ಟೇ ಬಿಜೆಪಿ ರಾಷಾಧ್ಯಕ್ಷ ಅಮಿತ್ ಶಾ ಸಹ ಗುಜರಾತಿನ ಛೋಟಾ ಉದಯಪುರ ಜಿಲ್ಲೆಯಲ್ಲಿ ದಲಿತರ ಮನೆಯಲ್ಲಿ ಊಟಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications