• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಂದ್ : ಆಟೋ ಡ್ರೈವರ್ ಗೋಪಾಲ್ ನಿಷ್ಠಾವಂತಿಕೆಗೆ ಸೆಲ್ಯೂಟ್

By ಉಪೇಂದ್ರ ಕಗಲಗೊಂಬ
|

ಬಸ್ ಸಂಚಾರ ಸ್ಥಗಿತ, ಶಾಲಾ-ಕಾಲೇಜುಗಳಿಗೆ ರಜೆ, ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ ಬಂದ್, ಈ ಸಾಲುಗಳನ್ನು ಟಿ.ವಿ ಮಾಧ್ಯಮಗಳು ಮುಂಜಾನೆಯಿಂದ ಸುದ್ದಿ ಮಾಡುತ್ತ ಇದ್ದವು. ಇದೆಲ್ಲಾ ಬುಧವಾರ ಭಾರತ ಬಂದ್ ಎಫೆಕ್ಟ್ ಅಂತ ನಿನ್ನೆನೇ ಗೊತ್ತಾಗಿತ್ತು. ಬಹುತೇಕ ಆಟೋದವರಿಗೆ ಈ ದಿನ ಸುಗ್ಗಿ ಹಬ್ಬ. ಆಫೀಸ್ ಗಂತೂ ಹೋಗ್ಲೆ ಬೇಕಿತ್ತು.

ಮೀಟರ್ ಮೇಲೆ ಅಷ್ಟು-ಇಷ್ಟು ಅಂತ ದುಡ್ಡು ಏರಿಸಿ ಪ್ರಯಾಣಿಕರಿಂದ ಮೀಟರಿಗಿಂತ ಡಬಲ್ ಹಣ ವಸೂಲಿ ಮಾಡೋದಕ್ಕೆ ರೆಡಿಯಾಗಿರುತ್ತಾರೆ. ಆಫೀಸ್ ಗಂತೂ ಹೋಗಲೇ ಬೇಕಿತ್ತು. [ಭಾರತ್ ಬಂದ್: ಟ್ವಿಟ್ಟರ್ ನಲ್ಲಿ ಆಕ್ರೋಶ, ವಿಷಾದ]

ವಿಜಯನಗರದಿಂದ ಜಯನಗರಕ್ಕೆ ಬಸ್ಸಿಗೆ 20 ರೂಪಾಯಿ; ಆಟೋಗಾದ್ರೆ 130 ರಿಂದ 150 ರೂಪಾಯಿ. ಭಾರತ್ ಬಂದ್ ಬೇರೆ. ಬಸ್ ಸಂಚಾರ ಇರಲಿಲ್ಲವಾದ್ದರಿಂದ ಅನಿವಾರ್ಯವಾಗಿ, ಬೇಜಾನ್ ರೂಪಾಯಿ ವಸೂಲಿ ಮಾಡ್ಕೋತಾರೆ ಅಂತ ಅಂದ್ಕೊಂಡು ಆಟೋದವರಿಗೆ ಜಯನಗರ 3rd ಬ್ಲಾಕ್ ಗೆ ಕೇಳಿದ್ರೆ ಕೆಲವರು ಅಷ್ಟು ದೂರ ಬರೋದಿಲ್ಲ ಅಂತ ಅಂದ್ರು.[ಮೋದಿ ಸರ್ಕಾರದ ವಿರುದ್ಧ ಭಾರತ್ ಬಂದ್ ಏಕೆ?]

ಕೆಲವ್ರು 200, 230 ಅಂತ ಬಾಯಿ ಬಂದಂತೆ ರೇಟ್ ಹೇಳ್ತಾಯಿದ್ರು. ಅವರ ದಿಮಾಕಿನ ಮಾತಿನ ವರಸೆ ನೋಡಿ ಅವರ ಸಹವಾಸವೇ ಬೇಡ ಅಂತ ಮುಂದೆ ಹೆಜ್ಜೆ ಹಾಕಿದೆ.

ಕೊನೆಗೆ ರಸ್ತೆಯಲ್ಲಿ ಖಾಲಿ ಆಟೋ ಒಂದು ಹೋಗುತ್ತಿರುವುದನ್ನು ನೋಡಿ ಕೈ ಮಾಡಿ ನಿಲ್ಲಿಸಿ ಜಯನಗರ 3rd ಬ್ಲಾಕ್ ಗೆ ಅಂತ ಕೇಳಿ ಅವನ ಉತ್ತರಕ್ಕಾಗಿ ಕಾದೆ. ಆ ಪುಣ್ಯಾತ್ಮ, ಮೀಟರ್ ಹಾಕಿ ಬನ್ನಿ ಸರ್ ಕೂತ್ಕೋಳಿ ಅಂದ. ನಾನು ಫುಲ್ ಕನಫ್ಯೂಸ್ ಆದೆ. ನಂತರ...

ಆ ಆಟೋ ಡ್ರೈವರ್ ಗೋಪಾಲ್ ಕೃಷ್ಣ ಅವರ ನಿಷ್ಠಾವಂತಿಕೆಗೆ ಸೆಲ್ಯೂಟ್ ಹೋಡಿಬೇಕು. ಈ ಆಟೋರಿಕ್ಷಾದವರೆಂಬ ಇದ್ದ ಪೂರ್ವಗ್ರಹ ಭಾವನೆ ದೂರಾಯಿತು.

ಅವನ ಆಟೋ ಮೇಲೆ ಕಣ್ಣಾಡಿಸಿದೆ

ಅವನ ಆಟೋ ಮೇಲೆ ಕಣ್ಣಾಡಿಸಿದೆ

ಅವನ ಆಟೋ ಮೇಲೆ ಕಣ್ಣಾಡಿಸಿದೆ. ನಿಜಕ್ಕೂ ತುಂಬಾ ಖುಷಿಯಾಯಿತು. ಅವರ ಸಿಟೀನ ಹಿಂದೆ "ನಾವು ಮಹಿಳೆಯರನ್ನು ಮತ್ತು ಮಕ್ಕಳನ್ನು ಗೌರವಿಸುತ್ತೇವೆ ಹಾಗೂ ಅವರ ಮೇಲೆ ಆಗುವ ಹಿಂಸೆ, ದೌರ್ಜನ್ಯವನ್ನು ಖಂಡಿಸುತ್ತೇವೆ." ವಾಕ್ಯ ನೋಡಿ ಈ ಮನುಷ್ಯ ಏನೋ ಸಮಥಿಂಗ್ ಸ್ಪೆಷಲ್ ಅಂತ ಅನಿಸಿತ್ತು. ರಸ್ತೆಯೆಲ್ಲಾ ಖಾಲಿ ಇದ್ದರೂ ಸಂಧಿ-ಸಂಧಿಯಲ್ಲಿ ಹೋಗಿ ಶಾರ್ಟ್ ಕಟ್ ರೂಟ್ ನಲ್ಲಿ ಜಯನಗರ 3 ಬ್ಲಾಕ್ ನಲ್ಲಿರೋ ಆಫೀಸಿಗೆ 20 ನಿಮಿಷದಲ್ಲಿ ಮುಟ್ಟಿಸಿದ.

ಮೀಟರ್ 122 ಅಂತ ತೋರಿಸುತ್ತಿತ್ತು

ಮೀಟರ್ 122 ಅಂತ ತೋರಿಸುತ್ತಿತ್ತು

ಮೀಟರ್ 122 ರು ಅಂತ ತೋರಿಸುತ್ತಿತ್ತು. ಆದ್ರೂ ಮೀಟರ್ ನೋಡದಂತೆ ನಟಿಸಿ ಎಷ್ಟು ಸಾಹೇಬ್ರೆ ಅಂತ ಕೇಳಿದೆ. 122 ಕೊಡಿ ಅಂತ ಹೇಳಿದಾಗ 130 ಕೊಟ್ಟೆ. ಸರ್ 2 ರೂಪಾಯಿ ಚಿಲ್ಲರೆ ಕೊಡಿ ನನ್ನಂತ್ರ ಚೇಂಜ್ ಇಲ್ಲ ಅಂತ ಹೇಳಿದಾಕ್ಷಣ ಅವನ ನಿಷ್ಠಾವಂತಿಕೆಗೆ ಮಾತೇ ಹೊರಡದಂತಾಯಿತು. ನಿಜಕ್ಕೂ ಅವರ ನಿಷ್ಠಾವಂತಿಕೆಗೆ ಸೆಲ್ಯೂಟ್ ಹೋಡಿಬೇಕು.

ಭಾರತ್ ಬಂದ್ ಆಟೋದವರಿಗೆ ಹಬ್ಬವಲ್ವಾ

ಭಾರತ್ ಬಂದ್ ಆಟೋದವರಿಗೆ ಹಬ್ಬವಲ್ವಾ

"ಸಾಹೇಬ್ರೆ ಇವತ್ತು ಭಾರತ್ ಬಂದ್ ಆಟೋದವರಿಗೆ ಹಣ ಮಾಡೋ ದಿನ ಮೀಟರ್ ಮೇಲೆ ಹೆಚ್ಚಿಗೆ ದುಡ್ಡು ವಸುಲಿ ಮಾಡ್ತಾರೆ. ಅಷ್ಟೆ ಅಲ್ಲ ನಾರ್ಮಲಿ ವಿಜಯನಗರದಿಂದ ಜಯನಗರಿಗೆ ಮೀಟರ್ ಪ್ರಕಾರ 140 ರಿಂದ 150 ರೂಪಾಯಿ ಆಗುತ್ತೆ. ಆದ್ರೆ ನೀವು ಶಾರ್ಟಕಟ್ ರೂಟ್ ನಲ್ಲಿ ಕರೆದುಕೊಂಡು ಬಂದು 122 ರೂಪಾಯಿ ಮಾಡಿದ್ದೀರಾ ಅಂತ ಕೇಳಿದೆ".

ಆ ದೇವರು ಕೊಟ್ಟು ನೋಡ್ತಾನೆ. ಏನೂ ಕೊಡದೇ ನೋಡ್ತಾನೆ

ಆ ದೇವರು ಕೊಟ್ಟು ನೋಡ್ತಾನೆ. ಏನೂ ಕೊಡದೇ ನೋಡ್ತಾನೆ

ನಾವ್ ತಲಪಬೇಕಿದ್ದ ಸ್ಥಳ ನಾವ್ ಹೋಗೋ ದಾರಿ ಸಿಕ್ಕರೆ ಆ ದಾರಿಯಲ್ಲಿ ಹೋದ್ರೆ ಶಾರ್ಟ್ ಕಟ್ ರೂಟ್ ಅಂತ ಯಾಕ್ ಅನ್ಕೊಬೇಕು. ಭಾರತ್ ಬಂದ್ ಇದೆ ಹೇಳಿ ಹೆಚ್ಚಿಗೆ ಹಣ ವಸೂಲಿ ಮಾಡಿದ್ರೆ ಇವತ್ತು ನಾನು ಚೆನ್ನಾಗಿ ದುಡ್ಡು ಮಾಡಬಹುದು ಆದ್ರೆ ನಾಳೆ!
"ಆ ದೇವರು ಕೊಟ್ಟು ನೋಡ್ತಾನೆ. ಏನೂ ಕೊಡದೇ ನೋಡ್ತಾನೆ. ನಾವು ಸರಿಯಾಗಿದ್ರೆ ಎಲ್ಲಾ ಒಳ್ಳೆಯದೇ ಆಗುತ್ತೆ. ನಾನು ಈಗ ಆರಾಮಾಗಿ ಇದ್ದೀನಿ. " ಅಂತ ನಕ್ಕರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Bharat Bandh: In Bengaluru the Bandh affected normal life as shops and offices chose to remain shut. Only essential commodities like milk and medical services are available but all schools and colleges were closed.Our citizen reporter Upendra narrates his experience with sincere Auto rickshaw driver Gopal Krishanaiah.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more