ಭಾರತ್ ಬಂದ್: ಟ್ವಿಟ್ಟರ್ ನಲ್ಲಿ ಆಕ್ರೋಶ, ವಿಷಾದ
ಬೆಂಗಳೂರು, ಸೆ.02: ಸುಮಾರು 11ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿರುವ ದೇಶವ್ಯಾಪಿ ಬಂದ್ ಬಿಸಿ ಸಾರ್ವಜನಿಕರಿಗೆ ತಟ್ಟಿದೆ. ಎನ್ ಡಿಎ ಸರ್ಕಾರದ ವಿರುದ್ಧದ ಮೊದಲ ಭಾರತ್ ಬಂದ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಬಂದ್ ಬೇಕು ಬೇಡ ಎಂಬುದರಿಂದ ಹಿಡಿದು, ಕಾರ್ಮಿಕದ ಸ್ಥಿತಿ ಗತಿ, ಸರ್ಕಾರದ ಧೋರಣೆ, ಸಾರ್ವಜನಿಕರ ಹಿತಾಸಕ್ತಿ ಹೀಗೆ ಎಲ್ಲಾ ವಿಷಯಗಳು ಚರ್ಚಿತವಾಗುತ್ತಿದೆ. [ಭಾರತ್ ಬಂದ್ ಏಕೆ? ಪ್ರತಿಭಟನೆಗೆ ಕಾರಣವೇನು?]
ಬೆಂಗಳೂರು, ಕೋಲ್ಕತ್ತಾ, ದೆಹಲಿ, ತಿರುವನಂತಪುರಂನಲ್ಲಿ ಬಸ್ ಹಾಗೂ ಆಟೋರಿಕ್ಷಾಗಳ ಸಂಚಾರ ಸ್ಥಗಿತಗೊಂಡಿದೆ. ರೈಲು ಸಂಚಾರವನ್ನು ಬಲವಂತವಾಗಿ ಎಲ್ಲೆಡೆ ನಿಲ್ಲಿಸಲಾಗುತ್ತಿದೆ. ಬಂದ್ ಬಗ್ಗೆ ಅರಿವಿಲ್ಲದ ಜನ ಸಾಮಾನ್ಯರು ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿದೆ.
ಬುಧವಾರ ಬೆಳಗ್ಗಿನಿಂದಲೂ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ #bharatbandh ಟ್ರೆಂಡಿಂಗ್ ನಲ್ಲಿದೆ. ಬಂದ್ ಬಗ್ಗೆ ಜನತೆ ಏನು ಹೇಳುತ್ತಿದ್ದಾರೆ ಮುಂದಿನ ಟ್ವೀಟ್ ಗಳಲ್ಲಿ ನೋಡಿ....

ಹಲವೆಡೆ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಭಾರತ್ ಬಂದ್ ಹಿನ್ನಲೆಯಲ್ಲಿ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಹಲವೆಡೆ ಹಿಂಸಾಚಾರಕ್ಕೆ ತಿರುಗಿದೆ. ಪಶ್ಚಿಮ ಬಂಗಾಳ, ಬಿಹಾರದಲ್ಲಿ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಬಂದ್ ಹೆಸರಿನಲ್ಲಿ ಪುಂಡಾಟಿಕೆ ಮಾಡುವುದನ್ನು ಟ್ವಿಟ್ಟರ್ ನಲ್ಲಿ ಖಂಡಿಸಲಾಗುತ್ತಿದೆ.
|
ಬಂದ್ ಏಕೆ? ಏನು? ಮಾಹಿತಿ ಕೊರತೆ
ಬಂದ್ ಏಕೆ? ಏನು? ಮಾಹಿತಿ ಕೊರತೆ, ಸಾರ್ವಜನಿಕರಿಗೆ ವಿಷಯ ತಿಳಿಸಲು ಮಾಧ್ಯಮಗಳಿದ್ದರೂ ಎಲ್ಲರಿಗೂ ಸುದ್ದಿ ತಲುಪುತ್ತಿಲ್ಲ. ಸಾರ್ವಜನಿಕರಿಗೆ ಸುದ್ದಿ ಮುಟ್ಟಿಸುವ ವ್ಯವಸ್ಥೆ ಬದಲಾಗಬೇಕಿದೆ.
|
ಬಂದ್ ಆಚರಣೆ ಖಂಡಿಸುತ್ತೇನೆ
ಬಂದ್ ಆಚರಣೆ ಖಂಡಿಸುತ್ತೇನೆ, ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟ. ಜನ ಸಾಮಾನ್ಯರ ದೈನಂದಿನ ಬದುಕಿಗೆ ಮಾರಕವಾದ ಬಂದ್ ಯಾರಿಗೆ ಬೇಕು?
|
ಆಂಬ್ಯುಲೆನ್ಸ್ ಗೂ ತಟ್ಟಿದ ಬಂದ್ ಬಿಸಿ
ಆಂಬ್ಯುಲೆನ್ಸ್ ಗೂ ತಟ್ಟಿದ ಬಂದ್ ಬಿಸಿ, ಹೀಗಾದರೆ ಹೇಗೆ?
|
ಬಂದ್ ಆಚರಣೆ ಬಗ್ಗೆ ಶೇ 99 ಜನಕ್ಕೆ ಗೊತ್ತಿಲ್ಲ
ಬಂದ್ ಆಚರಣೆ ಬಗ್ಗೆ ಶೇ 99 ಜನಕ್ಕೆ ಗೊತ್ತಿರುವುದಿಲ್ಲ. ಮಿಕ್ಕ ಶೇ 1ರಷ್ಟು ಜನರ ರಾಜಕೀಯ ಅಟಕ್ಕೆ ಜನ ಜೀವನ ಬಲಿಯಾಗುತ್ತಿದೆ.
|
ದಿನಗೂಲಿ ನೌಕರರಿಗೆ ಏನಾದರೂ ವ್ಯವಸ್ಥೆ
ದಿನಗೂಲಿ ನೌಕರರಿಗೆ ಏನಾದರೂ ವ್ಯವಸ್ಥೆ ಮಾಡಿದ್ದೀರಾ? ಬಂದ್ ಆಚರಣೆಯಿಂದ ಏನು ಪ್ರಯೋಜನ.
|
ಕಾಂಗ್ರೆಸ್ ಮುಕ್ತ ಭಾರತ ಬೇಕು
ಕಾಂಗ್ರೆಸ್ ಮುಕ್ತ ಭಾರತ ಬೇಕು, ಭಾರತ್ ಬಂದ್ ಆಚರಣೆ ನಾಚಿಕೆಗೇಡು ಎಂದ ಜನತೆ.
|
ಬಂದ್ ನಿಂದ ನಷ್ಟ ಮಾತ್ರ ಸಾಧ್ಯ
ಬಂದ್ ನಿಂದ ನಷ್ಟ ಮಾತ್ರ ಸಾಧ್ಯ, ಭಾರತದ ಆರ್ಥಿಕತೆ ಅಧೋಗತಿ ಹಿಡಿಯುತ್ತದೆ.












Click it and Unblock the Notifications