• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ್ ಬಂದ್ ಏಕೆ? ಪ್ರತಿಭಟನೆಗೆ ಕಾರಣವೇನು?

By Mahesh
|

ಬೆಂಗಳೂರು, ಸೆ.02: ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ನೀತಿ, ಸಾರಿಗೆ ಮಸೂದೆ ತಿದ್ದುಪಡಿ, ರಸ್ತೆ ಸುರಕ್ಷತಾ ಮಸೂದೆಯನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ದೇಶದೆಲ್ಲೆಡೆ ಪ್ರತಿಭಟನೆ ಹಮ್ಮಿಕೊಂಡಿವೆ. ಇದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಪ್ರಪ್ರಥಮ ಭಾರತ್ ಬಂದ್ ಆಗಿದೆ. ಬುಧವಾರದ ಭಾರತ್ ಬಂದ್ ಏಕೆ? ಏನು? ವಿವರ ಮುಂದಿದೆ...

ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಆಸ್ಪತ್ರೆ, ಚಿತ್ರಮಂದಿರ, ಮಾಲ್, ಹೋಟೆಲ್, ಪೆಟ್ರೋಲ್ ಬಂಕ್‌ಗಳು ಎಂದಿನಂತೆ ತೆರದಿವೆ. ಬುಧವಾರದ ಭಾರತ್ ಬಂದ್‌ನ [ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ ನೋಡಿ]

ಕಾರ್ಮಿಕ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಬುಧವಾರದ ಭಾರತ್ ಬಂದ್ ನಿಂದ ಜನಜೀವನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಅದರೂ ಬಂದ್ ನಡೆಸದಂತೆ ಕಾರ್ಮಿಕ ಸಂಘಟನೆಗಳಿಗೆ ಮನವಿ ಮಾಡಲಾಗಿದೆ ಎಂದು ಕಾರ್ಮಿಕ ಖಾತೆ ಸಚಿವ ಬಂಡಾರು ದತ್ತಾತ್ರೇಯ ಪ್ರತಿಕ್ರಿಯಿಸಿದ್ದಾರೆ. [ಭಾರತ್ ಬಂದ್: ಟ್ವಿಟ್ಟರ್ ನಲ್ಲಿ ಆಕ್ರೋಶ, ವಿಷಾದ ]

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹೊಸ ಕಾರ್ಮಿಕ ನೀತಿ, ಸಾರಿಗೆ ಮಸೂದೆ ತಿದ್ದುಪಡಿ, ರಸ್ತೆ ಸುರಕ್ಷತಾ ಮಸೂದೆ, ಕಾರ್ಮಿಕ ವಿರೋಧಿ ಆರ್ಥಿಕ ನೀತಿಯನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ದೇಶದೆಲ್ಲೆಡೆ ಪ್ರತಿಭಟನೆ ಹಮ್ಮಿಕೊಂಡಿವೆ. ಇಷ್ಟಕ್ಕೂ ಬಂದ್ ನಡೆಸಲು ಕಾರಣವೇನು? ಕಾರ್ಮಿಕ ಸಂಘಟನೆಗಳ ಬೇಡಿಕೆ ಏನು? ಮುಂದೆ ಓದಿ...

ಕಾರ್ಮಿಕರ ಬೇಡಿಕೆಗಳು

ಕಾರ್ಮಿಕರ ಬೇಡಿಕೆಗಳು

* ಸಾರಿಗೆ ಸುರಕ್ಷತಾ ಮಸೂದೆ 2015ನ್ನು ವಾಪಸ್ ಪಡೆಯಬೇಕು.
* ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಷೇರು ಬಂಡವಾಳ ಹಿಂತೆಗೆತ ಮಾಡಬಾರದು,
* ಕಾರ್ಮಿಕ ವಿರೋಧಿ, ಪ್ರತಿಗಾಮಿ ಕಾರ್ಮಿಕ ಕಾಯ್ದೆ ತಿದ್ದುಪಡಿ ಬೇಡ.
* ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಬಾರದು, ಬೆಲೆ ಏರಿಕೆ ನಿಯಂತ್ರಿಸಬೇಕು,
* ನಿರುದ್ಯೋಗ ನಿಯಂತ್ರಣ, ಕಾರ್ಮಿಕ ಕಾಯ್ದೆಗಳನ್ನು ಜಾರಿಗೆ ತರಬೇಕು,
* ಗುತ್ತಿಗೆ ಕಾರ್ಮಿಕ ಪದ್ಧತಿ ತಡೆ, ಕನಿಷ್ಠ ವೇತನ 15 ಸಾವಿರ ರೂ. ಜಾರಿ,
* ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ,

ಯಾರು ಯಾರು ಬೆಂಬಲ ಸೂಚಿಸಿದ್ದಾರೆ?

ಯಾರು ಯಾರು ಬೆಂಬಲ ಸೂಚಿಸಿದ್ದಾರೆ?

ಅಂಗನವಾಡಿ, ಬಿಸಿಯೂಟ ನೌಕರರು ಮತ್ತು ಬೀಡಿ ಕಾರ್ಮಿಕರು, ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಪಿಯುಸಿ, ಟಿಯುಸಿಸಿ, ಎಲ್‌ಪಿಎಫ್, ಫೆಡರೇಷನ್ ಆಫ್ ಎಂಪ್ಲಾಯಸ್, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಆಟೋ ಚಾಲಕರ ಸಂಘಟನೆಗಳು, ಬ್ಯಾಂಕ್ ಸಂಘಟನೆಗಳ ಐಕ್ಯ ಹೋರಾಟ ವೇದಿಕೆ, ಆಶಾ ಕಾರ್ಯಕರ್ತೆಯರ ಸಂಘ, ಇನ್ಸೂರೆನ್ಸ್ ಸಂಘಟನೆ, ಲಾರಿ ಚಾಲಕರು- ಮಾಲೀಕರ ಸಂಘ, ಲಾರಿ-ಚಾಲಕರುಗಳ ಸಂಘಗಳ ಒಕ್ಕೂಟ, ಟ್ಯಾಕ್ಸಿ ಚಾಲಕರ ಸಂಘಟನೆ

ದೇಶದ ವಿವಿಧೆಡೆ ಇರುವ 11 ಪ್ರಮುಖ ಸಂಘಟನೆ

ದೇಶದ ವಿವಿಧೆಡೆ ಇರುವ 11 ಪ್ರಮುಖ ಸಂಘಟನೆ

ಸಿಐಟಿಯು, ಐಎನ್ ಟಿಯುಸಿ, ಎಐಟಿಯುಸಿ, ಹಿಂದ್ ಮಜ್ದೂರ್ ಸಭಾ, ಎಐಯುಟಿಯುಸಿ, ಟಿಯುಸಿಸಿ, ಸೇವಾ, ಎಐಸಿಸಿಟಿಯು, ಯುಟಿಯುಸಿ, ಎಲ್ ಪಿಎಫ್ ಸೇರಿದಂತೆ 11 ಸಂಘಟನೆಗಳು ಬಂದ್ ನಡೆಸುತ್ತಿವೆ. ಆರೆಸ್ಸೆಸ್ ಬೆಂಬಲಿತ ಮಜ್ದೂರ್ ಸಂಘ ಮಾತ್ರ ಬಂದ್ ಕರೆಯನ್ನು ಹಿಂತೆಗೆದುಕೊಂಡಿದೆ. ಇದಲ್ಲದೆ, ಬ್ಯಾಂಕ್ ಒಕ್ಕೂಟ,ಕಲ್ಲಿದ್ದಲು ಕಾರ್ಮಿಕರ ಒಕ್ಕೂಟ ಸೇರಿದಂತೆ 10ಕ್ಕೂ ಅಧಿಕ ಕಾರ್ಮಿಕ ಒಕ್ಕೂಟಗಳು ಬಂದ್ ನಲ್ಲಿ ಪಾಲ್ಗೊಂಡಿವೆ.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ

ಪಶ್ಚಿಮ ಬಂಗಾಳದಲ್ಲಿ ಕಾರ್ಮಿಕರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಸಿಪಿಐಎಂ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಸಂಘರ್ಷ ಕಿತ್ತಾಟ ನಡೆದಿದೆ. ಇದರಿಂದ ರಸ್ತೆಯಲ್ಲಿದ್ದ ಸಾರ್ವಜನಿಕರಿಗೂ ಏಟುಗಳು ಬಿದ್ದಿದೆ. ಕಾರ್ಮಿಕರ ಸಂಘಟನೆಗಳು ಕರೆ ನೀಡಿದ ಬಂದ್ ಹಲವು ರಾಜ್ಯಗಳಲ್ಲಿ ರಾಜಕೀಯ ದಾಳವಾಗಿ ಪರಿಣಮಿಸಿದೆ.

ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಪ್ರತಿಕ್ರಿಯೆ

ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಪ್ರತಿಕ್ರಿಯೆ

ಸುಮಾರು 15 ಕೋಟಿಗೂ ಅಧಿಕ ಕಾರ್ಮಿಕರು ಬಂದ್ ನಲ್ಲಿ ಪಾಲ್ಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ, ಬಂದ್ ನಂತರ ಕಾರ್ಮಿಕ ಸಂಘಟನೆಗಳ ಜೊತೆ ಮಾತುಕತೆ ನಡೆಸಲಾಗುವುದು, ಕಾರ್ಮಿಕರ ಹಿತಾಸಕ್ತಿಗೆ ಸರ್ಕಾರ ಬದ್ಧವಾಗಿದೆ. ದೇಶದ ಹಿತಾಸಕ್ತಿಯಿಂದ ಬಂದ್ ನಡೆಸದಿರುವುದು ಒಳ್ಳೆಯದು ಎಂದಿದ್ದಾರೆ.


ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Essential services like banking and public transport likely to be affected as trade unions have called for a strike on Wednesday (September 2).This will be first strike against incumbent Modi led NDA government which has appealed unions not to go ahead with the strike. All you need to know about the Bandh.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more