ಮತ್ತೆ ಬೆಂಗಳೂರಲ್ಲಿ ಯುವತಿಗೆ ಲೈಂಗಿಕ ಕಿರುಕುಳ?!

ಇಷ್ಟು ದಿನ ರಾತ್ರಿ ರಸ್ತೆಯಲ್ಲಿ ನಡೆದು ಹೋಗುವುದು, ಹಗಲಲ್ಲೂ ಒಂಟಿಯಾಗಿ ನಿರ್ಜನ ಪ್ರದೇಶಗಳಲ್ಲಿ ಸಂಚರಿಸುವುದು ಅಪಾಯ ಎಂಬ ಪರಿಸ್ಥಿತಿ ಇತ್ತು. ಇದೀಗ ದ್ವಿಚಕ್ರ ವಾಹನದಲ್ಲಿ ಹೋಗುವುದೂ ಸೇಫ್ ಅಲ್ಲ ಎಂಬುದು ಘಟನೆಯಿಂದ ದೃಢವಾಗಿದೆ!

ಬೆಂಗಳೂರು ಮಾರ್ಚ್ 20: ಬೆಂಗಳೂರು ಯುವತಿಯರಿಗೆ ಸೇಫ್ ಅಲ್ಲ ಅನ್ನೋ ಮಾತಿಗೆ ಪುಷ್ಠಿ ನೀಡುವಂಥ ಘಟನೆ ಇಂದು ನಗರದ ಚಿಕ್ಕಜಾಲ ಸರ್ವಿಸ್ ರಸ್ತೆ ಬಳಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಸ್ನೇಹಿತನೊಂದಿಗೆ ಹೋಗುತ್ತಿದ್ದ ಯುವತಿಯನ್ನು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕೆಲ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.

ಬೈಕಿನ ಕೀ ಕಿತ್ತುಕೊಂಡು ಯುವತಿ ಮತ್ತು ಆಕೆಯ ಸ್ನೇಹಿತ ಎಲ್ಲಿಯೂ ಹೋಗಲಾಗದಂತೆ ತಡೆದು ನಿಲ್ಲಿಸಿ ಕಿರುಕುಳ ನೀಡಲಾಗಿದೆ. ಸಹಾಯಕ್ಕೆಂದು ಕೂಗಿದರೂ ಸ್ಥಳೀಯರು ಮತ್ತು ಕೆಲ ಆಟೋ ಚಾಲಕರೂ ದುಷ್ಕರ್ಮಿಗಳಿಗೇ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಇದೀಗ ಯುವತಿ ದುಷ್ಕರ್ಮಿಗಳು, ಆಟೋ ಚಾಲಕರು, ಸ್ಥಳೀಯರು ಸೇರಿದಂತೆ ಸುಮಾರು 40 ರಿಂದ 45 ರ ಮೇಲೆ ದೂರು ನೀಡಿದ್ದಾಳೆ.[ಮಹಿಳಾ ಪೇದೆ ಮೇಲೆ ಕಸ್ಟಮ್ಸ್ ಅಧಿಕಾರಿಯಿಂದ ಅತ್ಯಾಚಾರ!]

Again there is harassment on woman Chikkajala Bengaluru

ಇಷ್ಟು ದಿನ ರಾತ್ರಿ ರಸ್ತೆಯಲ್ಲಿ ನಡೆದು ಹೋಗುವುದು, ಹಗಲಲ್ಲೂ ಒಂಟಿಯಾಗಿ ನಿರ್ಜನ ಪ್ರದೇಶಗಳಲ್ಲಿ ಸಂಚರಿಸುವುದು ಅಪಾಯ ಎಂಬ ಪರಿಸ್ಥಿತಿ ಇತ್ತು. ಇದೀಗ ದ್ವಿಚಕ್ರ ವಾಹನದಲ್ಲಿ ಹೋಗುವುದೂ ಸೇಫ್ ಅಲ್ಲ ಎಂಬುದು ಘಟನೆಯಿಂದ ದೃಢವಾಗಿದೆ! ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+