Get Updates
Get notified of breaking news, exclusive insights, and must-see stories!

HAL ಸ್ಥಳಾಂತರ ಸ್ವಿಕಾರಾರ್ಹವಲ್ಲ: ಮಹತ್ವದ ನಿರ್ಧಾರ ಕೈಗೊಂಡ ಎಂಬಿ ಪಾಟೀಲ್

ಬೆಂಗಳೂರು, ಮೇ 27: ಕರ್ನಾಟಕದಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (HAL) ಅನ್ನು ಆಂಧ್ರ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂಬ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಮನವಿ, ನಡೆಗೆ ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಹಾಲಿ ಇರುವ ಸಂಸ್ಥೆಯನ್ನು ಬೇರೆಡೆ ಸ್ಥಳಾಂತರಿಸುವ ನಿರ್ಧಾರಕ್ಕೆ ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ. ಈ ಕುರಿತು ಸಚಿವರ ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ.

ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಚಿವ ಎಂಬಿ ಪಾಟೀಲ್ ಅವರು, ಕರ್ನಾಟಕವು HAL ತವರೂರು. ಅಸ್ತಿತ್ವದಲ್ಲಿರುವ ಸೌಲಭ್ಯವನ್ನು ಸ್ಥಳಾಂತರಿಸುವುದು ಸ್ವೀಕಾರಾರ್ಹವಲ್ಲ. ಅಲ್ಲದೇ ಕರ್ನಾಟಕಕ್ಕೆ ರಕ್ಷಣಾ ಕಾರಿಡಾರ್ ನೀಡುವಂತೆ ಕೇಂದ್ರ ಮನವಿ ಮಾಡಲಾಗುವುದು. ಈ ವಿಚಾರವನ್ನು ಚರ್ಚಿಸಲು ನಾನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಅವರು ದೆಹಲಿಗೆ ತೆರಳಲಿದ್ದಾರೆ.

HAL Relocating is Not Acceptable MB Patil Will Meet Rajnath Singh Urge Defence Corridor for State

ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಅವರು ಕರ್ನಾಟಕದHAL ಘಟಕವನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರಿದ್ದಾರೆ. ಈ ಕುರಿತು ಮಾಧ್ಯಮಗಳು ವರದಿ ಮಾಡಿವೆ. ಆಂಧ್ರದ ಸಿಎಂ ಚಂದ್ರಬಾಬು ಅವರ ಮನವಿ ನಿಜವಾಗಿದ್ದಲ್ಲಿ ಇದು ಅಸಹನಿಐ. ಅತ್ಯಂತ ಅನುಚಿತವಾಗಿದೆ. ಎರಡು ರಾಜ್ಯಗಳ ನಡುವಿನ ಸಹಕಾರದ ಮನೋಭಾವಕ್ಕೆ ವಿರುದ್ಧ ಎಂದು ಅವರು ಬಣ್ಣಿಸಿದ್ದಾರೆ. ಇಂತಹ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ. ಈ ವಿಚಾರ ಸಂಬಂಧ ಸರ್ಕಾರ, ಸಚಿವರುಗಳ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.

Take a Poll

ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಕರ್ನಾಟಕವು ನಿರ್ವಿವಾದ ನಾಯಕ ಎಂದು ರಾಜ್ಯದ ಕೊಡುಗೆಯನ್ನು ಅವರು ಸ್ಮರಿಸಿದ್ದಾರೆ. ರಾಷ್ಟ್ರೀಯ ರಕ್ಷಣಾ ಉತ್ಪಾದನೆಗೆ 65ರಷ್ಟು ಕೊಡುಗೆ ನೀಡಲಾಗುತ್ತಿದೆ. ಏರೋಸ್ಪೇಸ್ ರಂಗದಲ್ಲಿ, ಅದರ ಬಲದಲ್ಲಿ ಜಾಗತಿಕವಾಗಿ 3 ನೇ ಸ್ಥಾನದಲ್ಲಿದ್ದೇವೆ. ಇಂತಹ ಪ್ರಮುಖ ಸಾಧನೆ ಮಾಡಿದ್ದರ ಮಧ್ಯೆಯು ಕೇಂದ್ರ ಸರ್ಕಾರ 2022-23 ರಲ್ಲಿ ಡಿಫೆನ್ಸ್ ಕಾರಿಡಾರ್ (Defence Corridor) ಅನ್ನು ಉತ್ತರ ಪ್ರದೇಶ ಮತ್ತು ತಮಿಳುನಾಡಿಗೆ ನೀಡಿತು. ವಾಸ್ತವದಲ್ಲಿ ಅರ್ಹತೆ, ಕೊಡುಗೆ ನೋಡಿ ಈ ಕಾರಿಡಾರ್ ಕೊಡುವುದಿದ್ದರೆ ಅದು ಕರ್ನಾಟಕಕ್ಕೆ ಸಲ್ಲಬೇಕಿತ್ತು ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ ವೇಳೆ, ಎಚ್‌ಎಎಲ್ ಸ್ಥಳಾಂತರ ಬೇಡ ಎಂಬುದರ ಜೊತೆಗೆ ಕರ್ನಾಟಕಕ್ಕೆ ಡಿಫೆನ್ಸ್ ಕಾರಿಡಾರ್ (Defence Corridor) ಮಂಜೂರು ಮಾಡುವಂತೆ ಕೋರಲಿದ್ದೇನೆ. ಈ ಕುರಿತು ನಾನು ಬಲವಾಗಿ ಒತ್ತಾಯಿಸಲಿದ್ದೇವೆ. ಇದು ನಮ್ಮ ನ್ಯಾಯಯುತ ಹಕ್ಕು ಸಹ ಆಗಿದೆ ಎಂದು ಅವರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+