ಏಪ್ರಿಲ್ 20ರಿಂದ ಕೆಲಸ ಆರಂಭಿಸಲಿದೆ ಎಚ್‌ಎಎಲ್
ಬೆಂಗಳೂರು, ಏಪ್ರಿಲ್ 17: ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ( ಎಚ್) ಏಪ್ರಿಲ್ 20ರಿಂದ ಪುನಃ ಕೆಲಸವನ್ನು ಆರಂಭಿಸಲಿದೆ. ಸುಮಾರು ಒಂದು ತಿಂಗಳಿನಿಂದ ಕಾರ್ಯ ಚಟುವಟಿಕೆಗಳು ಬಂದ್ ಆಗಿತ್ತು.
ದೇಶದಲ್ಲಿ ಕೋವಿಡ್ -1 9 ಭೀತಿ ಹಬ್ಬಿದ್ದರಿಂದ ಮಾರ್ಚ್ 24ರಿಂದ ಎಚ್‌ಎಎಲ್ ಕಾರ್ಯ ಚಟುವಟಿಕೆ ಬಂದ್ ಆಗಿತ್ತು. ಏಪ್ರಿಲ್ 20ರಿಂದ ಪುನಃ ಕೆಲಸಗಳು ಆರಂಭವಾಗಲಿದ್ದು, ಶಿಫ್ಟ್ ಅನುಸಾರ ಉದ್ಯೋಗಿಗಳು ಕಚೇರಿಗೆ ಆಗಮಿಸಲಿದ್ದಾರೆ.
ಎಚ್‌ಎಎಲ್‌ನ ಉದ್ಯೋಗಿಗಳು ಬೇರೆ ಬೇರೆ ಯೂನಿಟ್‌ಗಳಿಗೆ ಸೇರಿದ ಗುತ್ತಿಗೆ ನೌಕರರು ಸೋಮವಾರದಿಂದ ಕೆಲಸ ಆರಂಭಿಸಲಿದ್ದಾರೆ. ಎಚ್‌ಎಎಲ್ ಕೆಲಸ ನಿಲ್ಲಿಸಿದರೆ ರಕ್ಷಣಾ ಇಲಾಖೆಗೆ ಪೂರೈಕೆಯಾಗಬೇಕಾದ ಉತ್ಪನ್ನಗಳಿಗೆ ತೊಂದರೆಯಾಗಲಿದೆ.

ಏಪ್ರಿಲ್ 15ರಂದು ಕೇಂದ್ರ ಗೃಹ ಇಲಾಖೆ ಹೊರಡಿಸಿದ ಮಾರ್ಗಸೂಚಿಯಂತೆ ಎಚ್‌ಎಎಲ್ ಮತ್ತು ಕಾನ್ಪುರದಲ್ಲಿನ ಘಟಕ ಕೆಲಸ ಆರಂಭಿಸಲಿದೆ. ಏಪ್ರಿಲ್ 20ರಿಂದ ಮೇ 3ರ ತನಕ ಶಿಫ್ಟ್‌ಗಳಲ್ಲಿ ಕಾರ್ಯ ನಿರ್ವಹಣೆ ಮಾಡಲಾಗುತ್ತದೆ ಎಂದು ಮಾನವ ಸಂಪನ್ಮೂಲ ಇಲಾಖೆ ಹೇಳಿದೆ.
ಕೆಲಸದ ಅವಧಿಯಲ್ಲಿ ಉದ್ಯೋಗಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎರಡು ಅಥವ ಮೂರು ಶಿಫ್ಟ್‌ಗಳಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಒಂದು ಶಿಫ್ಟ್ 5 ಗಂಟೆಯ ಅವಧಿಯದ್ದಾಗಿದ್ದು, ನಡುವೆ ಅರ್ಧಗಂಟೆಗಳ ಬಿಡುವು ಇರುತ್ತದೆ.
ಬಿಡುವಿನ ವೇಳೆಯಲ್ಲಿ ಉದ್ಯೋಗಿಗಳಿಗೆ ಕ್ಯಾಂಟೀನ್ ಸೌಲಭ್ಯ ಇರುವುದಿಲ್ಲ. ಕಾಫಿ ಅಥವ ಟೀ ನೀಡಲಾಗುವುದಿಲ್ಲ. ಒಳಗೆ ಬರುವಾಗ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಉದ್ಯೋಗಿಗಳು ತಮ್ಮ ಸ್ವಂತ ವಾಹನದಲ್ಲಿ ಕಚೇರಿಗೆ ಬರಬೇಕು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications