Hair Fall: ಬೆಂಗಳೂರಿಗೆ ಬಂದ 2 ತಿಂಗಳಲ್ಲಿ ವಿಪರೀತ ತಲೆ ಕೂದಲು ಉದುರುವಿಕೆ ಶುರು ಎಂದ ಯುವತಿ, ನೆಟ್ಟಿಗರು ಹೇಳಿದ್ದೇನು ?

ಬೆಂಗಳೂರಿನ ಮೂಲಸೌಕರ್ಯ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುವುದು ಸಹಜ. ಆದರೆ, ಬೆಂಗಳೂರಿನಲ್ಲಿರುವ ಮತ್ತೊಂದು ಪ್ರಮುಖ ಆರೋಗ್ಯ ಸಮಸ್ಯೆ ಅಥವಾ ಯಾರೂ ಹೆಚ್ಚು ಚರ್ಚೆ ಮಾಡದ ವಿಷಯವಾಗಿರುವ ತಲೆ ಕೂದಲು ಉದುರುವಿಕೆಯ ಬಗ್ಗೆ ಯುವತಿಯೊಬ್ಬರು ಸೋಷಿಯಲ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ನಗರದಲ್ಲಿ ತಲೆ ಕೂದಲು ಉದುರುವುದು ಯಾಕೆ ಜಾಸ್ತಿ ಆಗುತ್ತಿದೆ ಎನ್ನುವುದು, ಇದಕ್ಕೆ ಪರಿಹಾರವೇನು ಅಂತ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.

ಬೆಂಗಳೂರಿನ ಜೀವನ ಶೈಲಿ, ಟ್ರಾಫಿಕ್ ಜಾಮ್, ಬಾಡಿಗೆ ಮನೆ, ರಸ್ತೆ ಗುಂಡಿ ಹಾಗೂ ಆಹಾರ ಸೇರಿದಂತೆ ವಿವಿಧ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುವುದು ಸಹಜ. ಬೆಂಗಳೂರು ಹಾಗೂ ದೇಶದ ಉಳಿದ ನಗರಗಳ ಬಗ್ಗೆ ಹೋಲಿಕೆಯ ಚರ್ಚೆ ಸಹ ಸೋಷಿಯಲ್ ಮೀಡಿಯಾದಲ್ಲಿ ನಡೆಯುವುದಿದೆ. ಆದರೆ, Tanu singh (@enoughtanu) ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ "ಬೆಂಗಳೂರಿನಲ್ಲಿ ಕೂದಲು ಉದುರುವುದು ತುಂಬಾ ಭೀಕರವಾಗಿದೆ' ಎನ್ನುವ ಸಾಲುಗಳೊಂದಿಗೆ ಮಾಡಿರುವ ಪೋಸ್ಟ್‌ ಇದೀಗ ಬೆಂಗಳೂರು ನಗರದಲ್ಲಿ "ಕೂದಲು ಉದುರುವಿಕೆ'ಯ ಚರ್ಚೆಗೆ ಕಾರಣವಾಗಿದೆ.

Hair Fall Woman Reports Severe Hair Loss Within 2 Months of Moving to Bengaluru Netizens React

Hair Fall: ಬೆಂಗಳೂರಲ್ಲಿ ತಲೆ ಕೂದಲು ಉದುರುವಿಕೆ ಭೀಕರವಾಗಿದೆ!

ಬೆಂಗಳೂರು ನಗರದಲ್ಲಿ ತಲೆ ಕೂದಲು ಉದುರುವಿಕೆ ಸಮಸ್ಯೆ ಭೀಕರವಾಗಿದೆ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ತನು ಸಿಂಗ್ ಎನ್ನುವವರು ಪೋಸ್ಟ್‌ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೂದಲು ಉದುರುವುದು ತುಂಬಾ ಭೀಕರವಾಗಿದೆ. ನಾನು ಇಲ್ಲಿಗೆ ಬಂದು ಕೇವಲ 2 ತಿಂಗಳಾಗಿವೆ ಮತ್ತು ಈಗಾಗಲೇ ಅರ್ಧಕ್ಕಿಂತ ಹೆಚ್ಚು ಕೂದಲು ಉದುರಿಹೋಗಿದೆ. ಬೆಂಗಳೂರು ಜನರೇ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದಕ್ಕೆ ನೀವೇನು ಮಾಡುತ್ತಿದ್ದೀರಿ? ಅಂತ ಕೇಳಿದ್ದಾರೆ. ಈ ಪ್ರಶ್ನೆಯು ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿದೆ. ಅಲ್ಲದೆ, ನನಗೆ ತಲೆ ಕೂದಲು ಸುರುಳಿಯಾಗುತ್ತಿದೆ ಅಂತಲೂ ಅವರು ಹೇಳಿದ್ದಾರೆ.

Hair Fall: ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹೇಳಿದ್ದೇನು ?

ನನಗೂ ಇದೇ ರೀತಿ ಆಯಿತು, ತುಂಬಾ ಕೂದಲು ಉದುರಿತು ಮತ್ತು ನನ್ನ ಕೂದಲು ಇದ್ದಕ್ಕಿದ್ದಂತೆ ಗುಂಗುರು ಆಯಿತು. ಈ ನಗರದಲ್ಲಿ ಯಾಕೆ ಈ ರೀತಿ ಆಗುತ್ತಿದೆ. ಗಾಳಿಯಲ್ಲಿಯ ಸಮಸ್ಯೆಯೋ ಅಥವಾ ನೀರಿನ ಸಮಸ್ಯೆಯೋ ಅಂತ ನೆಟ್ಟಿಗರೊಬ್ಬರು ಹೇಳಿದ್ದಾರೆ. ಕೂದಲು ತೊಳೆಯಲು ಬಿಸ್ಲೆರಿ 20 ಲೀಟರ್ ನೀರಿನ ಬಾಟಲಿ ಸಬ್‌ಸ್ಕ್ರಿಪ್ಷನ್‌ ಪಡೆಯಿರಿ. RO ನೀರು ಮತ್ತು ವಾಟರ್ ಸಾಫ್ಟನರ್‌ಗಳು ಕೆಲಸ ಮಾಡುವುದಿಲ್ಲ ಅಂತ ನೆಟ್ಟಿಗರೊಬ್ಬರು ಸಜೆಸ್ಟ್‌ ಮಾಡಿದ್ದಾರೆ. ಮಿನಾಕ್ಸಿಡಿಲ್‌ ಹಚ್ಚುವ ಚಿಕಿತ್ಸೆ (ಟಾಪಿಕಲ್) ಪ್ಯಾಟರ್ನ್‌ ಕೂದಲು ಉದುರುವಿಕೆಗೆ ವೈಜ್ಞಾನಿಕ ಸಾಕ್ಷ್ಯಾಧಾರ ಹೊಂದಿರುವ ಚಿಕಿತ್ಸೆಯಾಗಿದೆ ಅಂತ ಬೆಂಗಳೂರಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ನಿಮ್ಮ ಬಾತ್‌ರೂಮ್‌ಗಳಲ್ಲಿ ವಾಟರ್ ಸಾಫ್ಟನರ್‌ ಅಳವಡಿಸಿಕೊಳ್ಳಿ. Kent RO ಮತ್ತು Eureka ಮುಂತಾದ ಕಂಪನಿಗಳು ಪ್ರತಿ ಬಾತ್‌ರೂಮ್‌ಗೆ ಸುಮಾರು ₹10-15 ಸಾವಿರಕ್ಕೆ ಈ ಸೌಲಭ್ಯವನ್ನು ಒದಗಿಸುತ್ತವೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ನೀವು ಅಳವಡಿಸಿಕೊಂಡಿರುವ ವಾಟರ್ ಸಾಫ್ಟನರ್‌ಗಳನ್ನು ಸರಿಯಾಗಿ ನಿರ್ವಹಿಸುತ್ತಿದ್ದೀರಾ? ಸರಿಯಾಗಿ ನಿರ್ವಹಿಸಿದರೆ, ಇದು ಬಹುತೇಕ ಎಲ್ಲರಿಗೂ ಪರಿಣಾಮಕಾರಿ. ಮತ್ತೊಂದು ಆಯ್ಕೆಯಾಗಿ, ಪ್ರತಿಬಾರಿಯೂ ಕೂದಲು ತೊಳೆಯಲು RO ನೀರನ್ನು ಬಳಸಬಹುದು. ಇದಕ್ಕೆ ಸ್ವಲ್ಪ ಹೆಚ್ಚು ಶ್ರಮ ಬೇಕಾಗಬಹುದು. ಆರಂಭದಲ್ಲಿ ಕೆಲವು ವಾರಗಳ ಕಾಲ ಇದನ್ನು ಪ್ರಯತ್ನಿಸಿ ನೋಡಬಹುದು ಎಂದೂ ಕೆಲವರು ಸಜೆಸ್ಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+