ಬೆಂಗಳೂರಿನಲ್ಲಿ ಅತಿ ದೊಡ್ಡ ಸೈಬರ್ ವಂಚನೆ; ಕಂಪನಿಯ ಸರ್ವರ್ ಹ್ಯಾಕ್ ಮಾಡಿ ₹384 ಕೋಟಿ ಲೂಟಿ ಮಾಡಿದ ಖತರ್ನಾಕ್ ಸಿಕ್ಕಿದ್ದೇಗೆ?
ಬೆಂಗಳೂರು, ಜುಲೈ 30: ಬೆಂಗಳೂರಿನಲ್ಲಿ ಅತಿ ದೊಡ್ಡ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನೆಬಿಲೊ ಟೆಕ್ನಾಲಜೀಸ್ ಭಾರತದಲ್ಲೇ ಪ್ರತಿಷ್ಠಿತ ಕ್ರಿಪ್ಟೊ ಕರೆನ್ಸಿ ಕಂಪನಿಯಾಗಿದೆ. ಒಂದಲ್ಲಾ, ಎರಡಲ್ಲಾ ಬರೋಬ್ಬರಿ ₹384 ಕೋಟಿ ದೋಚಿದ ಸೈಬರ್ ಖದೀಮ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರು ಮೂಲದ ನೆಬ್ಲಿಯೊ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಹ್ಯಾಕಿಂಗ್‌ನಿಂದಾಗಿ 384 ಕೋಟಿ ರೂ.ಗಳನ್ನು ಕಳೆದುಕೊಂಡಿದೆ ಎಂದು ಹೇಳಿದೆ, ಇದು ದೇಶದಲ್ಲಿ ವರದಿಯಾದ ಅತಿದೊಡ್ಡ ಸೈಬರ್ ಅಪರಾಧಗಳಲ್ಲಿ ಒಂದಾಗಿದೆ.
ನೆಬ್ಲಿಯೊ ಟೆಕ್ನಾಲಜೀಸ್‌ನ ಸಾರ್ವಜನಿಕ ನೀತಿ ಮತ್ತು ಸರ್ಕಾರಿ ವ್ಯವಹಾರಗಳ ಉಪಾಧ್ಯಕ್ಷ ಹರ್ದೀಪ್ ಸಿಂಗ್, ಜುಲೈ 19 ರಂದು ಬೆಳಗಿನ ಜಾವ 2:37ಕ್ಕೆ ನೆಬಿಲೊ ಟೆಕ್ನಾಲಜೀಸ್ ಕಂಪನಿಗೆ ದೊಡ್ಡ ವಂಚನೆ ಆಗಿತ್ತು. ಕಂಪನಿ ವ್ಯಾಲೆಟ್ನಿಂದ ಇನ್ನೊಂದು ವ್ಯಾಲೆಟ್ಗೆ ವಂಚಕ ಕೋಟಿ ಕೋಟಿ ಟ್ರಾನ್ಸ್ಫರ್ ಮಾಡಿಕೊಂಡಿದ್ದ. ಅಲ್ಲದೇ 1USDT ಅನ್ನು ವರ್ಗಾವಣೆ ಮಾಡಿಕೊಳ್ಳಲಾಗಿತ್ತು. ಬೆಳಗಿನ ಜಾವ ಸಮಯ: 9:40ಕ್ಕೆ ಮತ್ತೆ ಸರ್ವರ್ಗೆ ವಂಚಕ ಎಂಟ್ರಿಯಾಗಿ 44 ಮಿಲಿಯನ್ USDT ಭಾರತೀಯ ರೂ.ಗೆ 384 ಕೋಟಿ ವರ್ಗಾವಣೆ ಖತರ್ನಾಕ್ ಮಾಡಿಕೊಂಡಿದ್ದ.

ಆರೋಪಿ ರಾಹುಲ್ ಅಗರ್ವಾಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 3,84,00,00,000 ದೋಚಿದ್ದ. ಪ್ರೈವೇಟ್ ಲಿಮಿಟೆಡ್ ಕಂಪನಿ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ ಕೆಲಸ ಮಾಡುತ್ತದೆ. ಈ ಕಂಪನಿಯ ವ್ಯಾಲೇಟ್ನಿಂದ ಆರೋಪಿ ಬೆಳಗಿನ ಜಾವ 2:37ಕ್ಕೆ, ಇನ್ನೊಂದು ವ್ಯಾಲೇಟ್ಗೆ 1USDT ಅನ್ನು ವರ್ಗಾವಣೆ ಮಾಡಿಕೊಂಡಿದ್ದ. ನಂತರ ಬೆಳಗ್ಗೆ ಮತ್ತೆ 9:40ಕ್ಕೆ ಮತ್ತೆ ಸರ್ವರ್ಗೆ ವಂಚಕ ಎಂಟ್ರಿಯಾಗಿ 44 ಮಿಲಿಯನ್ USDT ಭಾರತೀಯ ರೂಪಾಯಿಗೆ 3,84,00,00,000 ರೂ ವರ್ಗಾವಣೆ ಮಾಡಿಕೊಂಡಿದ್ದಾನೆ.
ಇನ್ನೂ ಆರೋಪಿ ರಾಹುಲ್ ಅಗರ್ವಾಲ್ ಕಂಪನಿ ನೀಡಿದ್ದ ಲ್ಯಾಪ್ ಟಾಪ್ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿದ್ದ. ಅಲ್ಲಿ ಕೆಲಸ ಮಾಡಿ ರಾಹುಲ್ ಅಗರ್ವಾಲ್ ಹದಿನೈದು ಲಕ್ಷ ಹಣ ಪಡೆದಿದ್ದ. ಕಂಪನಿ ಲ್ಯಾಪ್ ಟಾಪ್ ಬಳಸಿ ಕೆಲಸ ಮಾಡುತ್ತಿದ್ದ ವೇಳೆ ವಂಚಕ ಹ್ಯಾಕ್ ಮಾಡಿದ್ದಾನೆ. ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸರ್ವರ್ಗೆ ಎಂಟ್ರಿಯಾಗಿದ್ದ. ನಂತರ ಒಟ್ಟು 44 ಮಿಲಿಯನ್ ಡಾಲರ್ ವಂಚನೆ ಮಾಡಿದ್ದ. ಇನ್ನೂ, ಈ ಬಗ್ಗೆ ಆಂತರಿಕ ತನಿಖೆ ನಡೆಸಿದ್ದ ನೆಬಿಲೊ ಕಂಪನಿ ವೈಟ್ ಫೀಲ್ಡ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕೇಸ್ಗೆ ಸಂಬಂಧಿಸಿದಂತೆ ವಂಚಕ ರಾಹುಲ್ ಅಗರ್ವಾಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ರಾಹುಲ್ ಅಗರ್ವಾಲ್ ಅವರಿಗೆ ಕಚೇರಿ ಕೆಲಸಕ್ಕಾಗಿ ಲ್ಯಾಪ್‌ಟಾಪ್ ನೀಡಲಾಗಿತ್ತು ಮತ್ತು ಅದನ್ನು ಇತರ ಉದ್ದೇಶಗಳಿಗಾಗಿ ಬಳಸಲು ಅವರಿಗೆ ಅನುಮತಿ ಇಲ್ಲ ಎಂದು ಕಟ್ಟುನಿಟ್ಟಾಗಿ ಆದೇಶಿಸಲಾಗಿತ್ತು ಎಂದು ಸಿಂಗ್ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದರೂ, ರಾಹುಲ್ ಅಗರ್ವಾಲ್ ಕಂಪನಿಯ ಆದೇಶವನ್ನು ನಿರ್ಲಕ್ಷಿಸಿದ್ದಾರೆ ಎಂದು ಅವರು ಹೇಳಿದರು.












Click it and Unblock the Notifications