ಡಿಐಜಿ ರೂಪಾ ವರ್ಗಾವಣೆ ಖಂಡನೀಯ : ಎಚ್ಡಿಕೆ

ಬೆಂಗಳೂರು, ಜುಲೈ 17: 'ಕಾಂಗ್ರೆಸ್ ಸರ್ಕಾರದಲ್ಲಿ ನ್ಯಾಯಕ್ಕೆ ಬೆಲೆಯಿಲ್ಲ. ಸರ್ಕಾರಕ್ಕೆ ಅಕ್ರಮ ದಂಧೆಗಳನ್ನು ಬೆಂಬಲಿಸುವುದರಲ್ಲೇ ಹೆಚ್ಚು ಆಸಕ್ತಿ. ಕಾರಾಗೃಹದಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಹೊರಟ ಕಾರಾಗೃಹ ಡಿಐಜಿ ರೂಪಾ ಅವರ ಪ್ರಾಮಾಣಿಕತೆ ಸರ್ಕಾರ ನೀಡಿದ ಬೆಲೆ ಇದು...' ಎಂದು ಎಚ್ ಡಿ ಕುಮಾರಸ್ವಾಮಿ, ಸಿದ್ದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಜೈಲಿನಿಂದ ತಮಗೆ ಬರಬೇಕಿದ್ದ ಕಪ್ಪದ ಹಣ ಬಂದಿಲ್ಲವೆಂದು ಡಿಐಜಿ ರೂಪಾ ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ತಾನೇ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಇಂದು ವ್ಯತಿರಿಕ್ತ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದರು!

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ಭ್ರಷ್ಟಾಚಾರ, ಅಕ್ರಮದ ಬಗ್ಗೆ ಎರಡು ವರದಿ ನೀಡಿ ಡಿಜಿ ಹಾಗೂ ಐಜಿ ಸತ್ಯನಾರಾಯಣ ರಾವ್ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರೆಸಿದ್ದ ಕಾರಾಗೃಹ ಡಿಐಜಿ ಡಿ ರೂಪಾ ಅವರನ್ನು ಕರ್ನಾಟಕ ಸರ್ಕಾರ ವರ್ಗಾವಣೆ ಮಾಡಿ, ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಡಿಜಿಪಿಯಾಗಿ ನೇಮಿಸದ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಮ್ಮ ಅಸಮಾಧಾನವನ್ನು ಹೊರಹಾಕಿದರು.

H D Kumaraswamy blames Karnataka government's decision on DIG Roopa's transfer

ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಸರ್ಕಾರವೇ ಬೆಂಬಲ ನೀಡುತ್ತಿದೆ. ಅದಕ್ಕೆಂದೇ, ಈ ಅಕ್ರಮಗಳನ್ನು ಬಯಲಿಗೆಳೆಯಲು ಹೊರಟ ರೂಪಾ ಪ್ರಾಮಾಣಿಕತೆಗೆ, ವರ್ಗಾವಣೆಯ ಶಿಕ್ಷೆ ನೀಡಿದೆ. ಇದು ನಿಜಕ್ಕೂ ಖಂಡನೀಯ. ಸರ್ಕಾರ ಮೊದಲು, ರೂಪಾ ಹೊರಿಸಿದ್ದ ಆರೋಪದ ಸತ್ಯಾಸತ್ಯತೆಯ ಕುರಿತು ವಿಚಾರಣೆ ನಡೆಸಬೇಕಿತ್ತು. ಆದರೆ ಈ ಸರ್ಕಾರ ಇರುವುದೇ ಅಕ್ರಮಗಳನ್ನು ಬೆಂಬಲಿಸುವುದಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿಕೆ ಹೇಳಿದರು.

"DG ಮತ್ತು DIG ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿರುವ ಹಿನ್ನಲೆಯಲ್ಲಿ, ಪಾರದರ್ಶಕ ತನಿಖೆ ನಡೆಸಲು ವರ್ಗಾವಣೆಗೆ ಸರ್ಕಾರ ಆದೇಶಿಸಿದೆ" ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

ಡಿಐಜಿ ರೂಪಾ ವರ್ಗಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಗತೆಗೆದುಕೊಂಡ ನಿರ್ಧಾರವನ್ನು ರಾಜ್ಯದ ಹಲವು ಮುಖಂಡರು ಖಡಕ್ ಆಗಿ ವಿರೋಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+