ಬೆಂಗಳೂರಲ್ಲಿ ಗುರುಸಾರ್ವಭೌಮರ ಆರಾಧನಾ ಮಹೋತ್ಸವ
ಬೆಂಗಳೂರು ಆಗಸ್ಟ್ 11: ಬೆಂಗಳೂರಿನ ಬಸವನಗುಡಿಯ 'ಶ್ರೀ ಗುರುರಾಜ ಅಸೋಸಿಯೇಷನ್' ವತಿಯಿಂದ ಶ್ರೀ ಶುಭಕೃತ್‌ನಾಮ ಸಂವತ್ಸರದ ಶ್ರಾವಣ ಬಹುಳ ಪಾಡ್ಯ, ಬಿದಿಗೆ, ತದಿಗೆ 2022ರ ಆಗಸ್ಟ್ 12, 13 ಮತ್ತು 14ರಂದು ಮೂರು ದಿನ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 351ನೇ ಆರಾಧನಾ ಮಹೋತ್ಸವವನ್ನು ಹಮ್ಮಿಕೊಂಡಿದೆ.
ಆಗಸ್ಟ್ 12ರ ಶುಕ್ರವಾರದಂದು ಪೂರ್ವಾರಾಧನೆ ಹಿನ್ನೆಲೆಯಲ್ಲಿ ಬೆಳಗ್ಗೆ 8ಗಂಟೆಗೆ ವಿವಿಧ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. ಸಂಜೆ 5.30ಕ್ಕೆ ಡಾ. ಪ್ರಭಂಜನಾಚಾರ್ಯರಿಂದ 'ಖಂಡಾರ್ಥ ಚಿಂತನ' ಪ್ರವಚನ ಕಾರ್ಯಕ್ರಮ, ನಂತರ 7ಗಂಟೆಗೆ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಅವರಿಂದ 'ಲಯಲಹರಿ' ಕಾರ್ಯಕ್ರಮ ನಡೆಯಲಿದೆ.

ಶನಿವಾರ ಆಗಸ್ಟ್ 13ರಂದು ಮಧ್ಯಾರಾಧನೆ ಪ್ರಯುಕ್ತ ಬೆಳಗ್ಗೆ 8ಕ್ಕೆ ವಿವಿಧ ಭಜನಾ ಮಂಡಳಿ ತಂಡದವರಿಂದ ''ಭಜನೆ'' ಜರುಗಲಿದೆ. ಸಂಜೆ 5.30ಕ್ಕೆ ರುಚಿರಾಚಾರ್ಯ ಅವರಿಂದ 'ಕಲಿಯುಗ ಕಲ್ಪತರು ರ್ಶರೀ ಗುರುಸಾರ್ವಭೌಮರು' ಕುರಿತು ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ನಂತರ 7ಗಂಟೆಗೆ ವಿದ್ಯಾನ್ ರಮೇಶ್ ಮತ್ತು ಪ್ರವೀಣ್ ಗೋಡ್ಕಿಂಡಿ ಅವರಿಂದ 'ಪಿಟಿಲು-ಕೊಳಲು ಜಗುಲ್ ಬಂದಿ' ನೆರವೇರಲಿದೆ.

ಆಗಸ್ಟ್ 14ರ ಭಾನುವಾರದಂದು ಬೆಳಗ್ಗೆ 8ಗಂಟೆಗೆ 'ಭಜನೆ' ನಂತರ 11ಕ್ಕೆ ಸೇವಾಕರ್ತರ ಪರವಾಗಿ ಕನಕಾಭಿಷೇಕ ನೆರವೇರಲಿದೆ. ಸಂಜೆ 5.30ಕ್ಕೆ ಡಾ.ಚತುರ್ವೇದಿ ವೇದವ್ಯಾಸಾಚಾರ್ಯರಿಂದ 'ಮಂಗಳಾಷ್ಟಕ ಚಿಂತನ' ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಬಳಿಕ 7ಕ್ಕೆ ವಿದ್ಯಾನ್ ಪ್ರಾದೇಶ ಆಚಾರ್ಯ ಅವರಿಂದ 'ಹರಿನಾಮ ಸಂಕೀರ್ತನೆ' ಮೊಳಗಲಿದೆ ಎಂದು ಶ್ರೀ ಗುರುರಾಜ ಅಸೋಸಿಯೇಷನ್ ತಿಳಿಸಿದೆ.












Click it and Unblock the Notifications