ಬೆಂಗಳೂರಿನಲ್ಲಿ ನಿವೇಶನ ಖರೀದಿಸಿ 3 ವರ್ಷದಲ್ಲಿ ಮನೆ ಕಟ್ಟದವರಿಗೆ ಮಾರ್ಗಸೂಚಿ
ಬೆಂಗಳೂರು, ಜನವರಿ, 03: ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿವೇಶನ ಖರೀದಿ ಮಾಡಿ ಯಾವುದೋ ಕಾರಣದಿಂದ ವರ್ಷ ಕಳದರೂ ಮನೆ ಕಟ್ಟದಿರುವವ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಈ ಹಿನ್ನೆಲೆ ಬಿಡಿಎ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿದೆ. ಹಾಗಾದರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಖರೀದಿಸಿ ಲೀಸ್ ಕಂ ಅಗ್ರಿಮೆಂಟ್ ಮಾಡಿಸಿಕೊಂಡು 3 ವರ್ಷದಲ್ಲಿ ಮನೆ ಕಟ್ಟದೆ ಒಪ್ಪಂದ ನಿಯಮ ಉಲ್ಲಂಘಿಸಿದವರಿಗೆ ನಿವೇಶನದ ಮಾರ್ಗಸೂಚಿ ದರದ ಶೇಕಡ 10ರಷ್ಟು ದಂಡಪಾವತಿ ಕಡ್ಡಾಯವಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆ, ಅರ್ಕಾವತಿ ಬಡಾವಣೆ ಹೊರತುಪಡಿಸಿ ಬಿಡಿಎ ನಿರ್ಮಿಸಿದ ಬಡಾವಣೆಗಳು ಇದರ ವ್ಯಾಪ್ತಿಗೆ ಬರುತ್ತವೆ. 2024ರ ಸೆಪ್ಟೆಂಬರ್ 23ರಿಂದ ಅನ್ವಯ ಆಗುವಂತೆ ಮಾರ್ಗಸೂಚಿ ದರದ ಶೇಕಡ 10ರಷ್ಟು ದಂಡ ನಿಗದಿಪಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಯಾವ ನಿವೇಶನಗಳು ತಕರಾರಿನಿಂದ ಕೂಡಿರುತ್ತವೆಯೋ ಅಂತಹ ನಿವೇಶನಗಳಿಗೆ ದಂಡದಿಂದ ವಿನಾಯಿತಿ ಇರಲಿದೆ. ಉಳಿದಂತೆ ಲೀಸ್ ಕಂ ಅಗ್ರಿಮೆಂಟ್ ಆಗಿ ಮೂರು ವರ್ಷ ಮೀರಿದ ಎಲ್ಲಾ ನಿವೇಶನಗಳಿಗೆ ದಂಡ ಪಾವತಿ ಅನ್ವಯ ಆಗುತ್ತದೆ. ಬಿಡಿಎ ಕಾಯ್ದೆಯ ಪ್ರಕಾರ ನಿಗದಿತ ಅವಧಿಯಲ್ಲಿ ಮನೆ ನಿರ್ಮಿಸದಿದ್ದರೆ ಅಂತಹ ನಿವೇಶನಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಬಿಡಿಎಗೆ ಇದೆ. ಈ ಕ್ರಮವನ್ನು ಪ್ರಶ್ನಿಸಿ ಕೆಲವು ಗ್ರಾಹಕರು ಕೋರ್ಟ್ ಮೊರೆ ಹೋಗಿದ್ದರು. ಆದ್ದರಿಂದ ನಿವೇಶನ ವಾಪಸ್ ಪಡೆಯದೆ ದಂಡವ ವಸೂಲಿಗೆ ನಿರ್ಧರಿಸಲಾಗಿದೆ.
ಎಷ್ಟು ಕಟ್ಟಡಗಳು ನೆಲಸಮ?: ಮತ್ತೊಂದೆಡೆ ಈಗಾಗಲೇ ಹಲವೆಡೆ ಮೆಟ್ರೋ ವಿಸ್ತರಣೆಯಿಂದ ಬೃಹತ್ ಮರಗಳು ಧರೆಗುರುಳಿದ ಘಟನೆಗಳು ಕೂಡ ನಗರದ ಹಲವೆಡೆ ನಡೆದಿವೆ. ಅಷ್ಟೇ ಪ್ರಮಾಣದಲ್ಲಿ ಗಿಡ ನೆಡುವುದಾಗಿಯೂ ಬಿಎಂಆರ್‌ಸಿಎಲ್ ಹೇಳುತ್ತಾ ಬಂದಿದೆ. ಆದರೆ, 2024ರಲ್ಲಿ ಮೆಟ್ರೋ ಕಾಮಗಾರಿ ನೋಡುವುದಾದರೆ, ಹೇಳಿಕೊಳ್ಳುವಷ್ಟು ಏನು ಅಭಿವೃದ್ಧಿಯಾಗಿಲ್ಲ ಎನ್ನುವ ಮಾಹಿತಿ ಇತ್ತೀಚೆಗಷ್ಟೇ ಬಹಿರಂಗಗೊಂಡಿದೆ.
ಇದೇ 2024ರ ಡಿಸೆಂಬರ್‌ನಲ್ಲಿ ಉದ್ಘಾಟನೆಯಾಗಬೇಕಿದ್ದ ಬಹುನಿರೀಕ್ಷಿತ ಹಳದಿ ಮಾರ್ಗದ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ. 2024ರ ಡಿಸೆಂಬರ್ ಮುಗಿಯಲು ಇನ್ನೂ ಕೆಲವ ಎರಡು ದಿನಗಳಷ್ಟೇ ಬಾಕಿಯಿದೆ. 2025ರ ಜನವರಿಯಲ್ಲಿ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದೀಗ ಮತ್ತೊಂದೆಡೆ ನಮ್ಮ ಮೆಟ್ರೋ ಹೆಬ್ಬಾಳ-ಸರ್ಜಾಪುರ ಕೆಂಪು ಮಾರ್ಗದ ಆರಂಭಿಕ ಸಮೀಕ್ಷೆ ನಡೆಸಲಾಗಿದೆ. ಈ ಮಾರ್ಗದಲ್ಲಿ ಭೂಸ್ವಾಧೀನಕ್ಕೆ ಆರಂಭವಾದರೆ, 400ಕ್ಕೂ ಹೆಚ್ಚು ಕಟ್ಟಡಗಳು ನೆಲಸಮವಾಗುವ ಸಾಧ್ಯತೆಯಿದೆ. ಈನ ಹಿನ್ನೆಲೆ ಈ ಭಾಗಗಳ ಜನರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.












Click it and Unblock the Notifications