ಹಾಡಹಗಲೇ ಬೆಂಗಳೂರಿನಲ್ಲಿ ಮಾರಕಾಸ್ತ್ರ ಹಿಡಿದು ಓಡಾಡಿದ ಯುವಕರ ಗುಂಪು!

ಬೆಂಗಳೂರಿನ ನೆಲಮಂಗಲದಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಯುವಕರ ಗುಂಪು ದಾಳೀಗೆ ಮುಂದಾಗಿದ್ದ ವಿಡಿಯೋ ವೈರಲ್ ಆಗಿದೆ.

ಬೆಂಗಳೂರು ಫೆಬ್ರವರಿ 27: ಯುವಕರ ಗುಂಪೊಂದು ಹಾಡಹಗಲೇ ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಜಗಳಕ್ಕೆ ನಿಂತ ಘಟನೆ ಬೆಂಗಳೂರಿನ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ. ಹಣಕಾಸಿನ ವಿಚಾರಕ್ಕೆ ಯುವಕರು ಜಗಳ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಸ್ಗರ್, ಅಜರುದ್ದೀನ್, ಫೈರೋಜ್ ಮತ್ತು ಹರ್ಷದ್ ಎಂಬವರು, ಇಸ್ಲಾಂಪುರದ ಯುವಕ ಅತೂಬ್ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ.

ಈ ವೇಳೆ ಅತೂಬ್ ನಡೆಸಿದ ದಾಳಿಯಲ್ಲಿ ಎದುರಾಳಿ ಗುಂಪಿನ ಹರ್ಷದ್ ನ ಕುತ್ತಿಗೆಗೆ ಗಾಯವಾಗಿದೆ. ನೆಲಮಂಗಲ ಗ್ರಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Group of youths carrying handguns in Bangalore!

ಮಾರಕಾಸ್ತ್ರ ಹಿಡಿದು ಜನರಿಗೆ ಬೆದರಿಕೆ:

ಕಳೆದ ತಿಂಗಳು ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕಕರ ಮೇಲೆ ಹಲ್ಲೆಗೆ ಯತ್ನಿಸಿದ್ದ ವ್ಯಕ್ತಿ ಮೇಲೆ ಪೊಲೀಸರು ಪೈರಿಂಗ್ ಮಾಡಿದ ಘಟನೆ ನಡೆದಿತ್ತು. ಕಲಬುರಗಿ ನಗರದ ಸೂಪರ್ ಮಾರ್ಕೇಟ್ ನಲ್ಲಿ ಹಲ್ಲೆಗೆ ಯತ್ನಿಸಿದ ವ್ಯಕ್ತಿ, ಒಂದು ಗಂಟೆಯಿಂದ ತಲವಾರ್ ಹಿಡಿದು ಅವಾಜ್ ಹಾಕುತ್ತಿದ್ದ. ಮಾರಕಾಸ್ತ್ರದಿಂದ ಅನೇಕರ ಮೇಲೆ ಹಲ್ಲೆಗೆ ಯತ್ನಿಸಿದ್ದನು. ಪೊಲೀಸರು ಶರಣಾಗಲು ತಿಳಿಸಿದರೂ ವ್ಯಕ್ತಿ ಪೊಲೀಸರ ಮಾತು ಕೇಳಿರಲಿಲ್ಲ.

ಆದರೆ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದನು. ಈ ವೇಳೆ ಆತ್ಮರಕ್ಷಣೆಗಾಗಿ ಚೌಕ್ ಠಾಣೆ ಪಿಎಸ್ಐ ವಹೀದ್ ಕೊತ್ವಾಲ್ ಆರೋಪಿಯ ಕಾಲಿಗೆ ಮೂರು ಗುಂಡು ಹಾರಿಸಿದ್ದಾರೆ. ಸಾರ್ವಜನಿಕರ ಎದುರೆ ಪೈರಿಂಗ್ ಮಾಡಿದ್ದಾರೆ. ಪೈರಿಂಗ್ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಲಬುರಗಿ ನಗರದ ನಿವಾಸಿ ಅಬ್ದುಲ್ ಜಾಪರ್ ಸಾಬ್ (35) ಅನ್ನೋ ನ ಮೇಲೆ ಪೈರಿಂಗ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+