ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೂಲ್ ಕಿಟ್ ಪ್ರಕರಣ: ದಿಶಾ ರವಿ ಸಹೋದರಿ ಹೇಳಿದ ಸ್ಪೋಟಕ ಸತ್ಯ !

|
Google Oneindia Kannada News

ಬೆಂಗಳೂರು, ಫೆಬ್ರವರಿ 15 : ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದಿಶಾ ರವಿ ಹೆಸರಿನಲ್ಲಿ ನಕಲಿ ಖಾತೆಗಳು ಸೃಷ್ಟಿಯಾಗಿವೆಯೇ ? ದಿಶಾರವಿ ಅವರನ್ನು ಸುಳ್ಳು ಆರೋಪದಲ್ಲಿ ಬಂಧನಕ್ಕೆ ಒಳಪಡಿಸಲಾಗಿದೆಯೇ ?

ಹೀಗೊಂದು ಅನುಮಾನ ವ್ಯಕ್ತಪಡಿಸಿ ದಿಶಾ ರವಿ ಟ್ವಿಟ್ಟರ್ ಖಾತೆಯಲ್ಲಿ ಆಕೆಯ ಸಹೋದರಿ ಪೋಸ್ಟ್ ಮಾಡಿದ್ದಾರೆ. ನಾನು ದಿಶಾ ರವಿಯ ಸಹೋದರಿ, ಆಪ್ತ ಸ್ನೇಹಿತೆ. ಸುಳ್ಳು ಆರೋಪದ ಮೇಲೆ ದಿಶಾ ರವಿ ಅವರನ್ನು ಬಂಧಿಸಿದ್ದಾರೆ. ಅನೇಕರು ದಿಶಾ ರವಿ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ದುರ್ಬಳಕೆ ಮಾಡಿದ್ದಾರೆ. ಈ ಬಗ್ಗೆ ವರದಿ ಮಾಡಿ ಎಂದು ಅವರು ಮನವಿ ಮಾಡಿದ್ದಾರೆ. ಮಾತ್ರವಲ್ಲ, ದಿಶಾ ರವಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

5 ದಿನಗಳ ಪೊಲೀಸ್ ವಶಕ್ಕೆ ದಿಶಾ ರವಿ, ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಪರಿಸರ ಹೋರಾಟಗಾರ್ತಿ5 ದಿನಗಳ ಪೊಲೀಸ್ ವಶಕ್ಕೆ ದಿಶಾ ರವಿ, ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಪರಿಸರ ಹೋರಾಟಗಾರ್ತಿ

ಸೋಲದೇವನಹಳ್ಳಿ ಸಮೀಪದ ಸೋಮಶೆಟ್ಟಿಹಳ್ಳಿ ನಿವಾಸಿ ದಿಶಾ ರವಿ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಓದಿದ್ದರು. ಹವಾಮಾನ ವೈಪರೀತ್ಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. 2018 ರಲ್ಲಿ ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ಕುರಿತು ಬಹುದೊಡ್ಡ ಹೋರಾಟವನ್ನು ಹುಟ್ಟು ಹಾಕಿದ್ದ ಫ್ರೈಡೇ ಫರ್ ಫ್ಯೂಚರ್ ಸಂಸ್ಥೆಯ ಸಹ ಸ್ಥಾಪಕಿಯಾಗಿದ್ದಳು ದಿಶಾ ರವಿ. ಹವಾಮಾನ ಬದಲಾವಣೆ ಕುರಿತು ಜಾಗತಿಕ ಹೋರಾಟಕ್ಕೆ ಸ್ವೀಡನ್ ನ ಗ್ರೇಟಾ ಥನ್ ಬರ್ಗ್ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಹವಾಮಾನ ವೈಪರೀತ್ಯ ಕುರಿತು ಬಹುದೊಡ್ಡ ಜಾಗೃತಿ ಅಭಿಯಾನಕ್ಕೆ ನಾಂದಿಯಾಡಿತ್ತು. ಹೀಗಾಗಿ ಗ್ರೇಟಾ ಥನ್ ಬರ್ಗ್ ಹಾಗೂ ದಿಶಾ ರವಿಗೂ ನಿಕಟ ಸಂಪರ್ಕವಿತ್ತು. ದೆಹಲಿಯಲ್ಲಿ ರೈತರ ಹೋರಾಟವನ್ನು ಒಕ್ಕಲೆಬ್ಬಿಸುವ, ಸರ್ಕಾರದ ವಿರುದ್ಧ ಸಂಚು ರೂಪಿಸಿ ಕೆಲವು ರಹಸ್ಯ ಕಾರ್ಯ ಸೂಚಿಯ ಟೂಲ್ ಕಿಟ್‌ ನ್ನು ತಯಾರಿಸಿದ ಆರೋಪದಡಿ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಶನಿವಾರ ಬೆಂಗಳೂರಿನಲ್ಲಿ ಬಂಧಿಸಿದ್ದರು.

Greta Thunberg toolkit case: Fake Accounts Created in the Name of Disha Ravi

ದಿಶಾ ಪರ ಧ್ವನಿ : ದಿಶಾ ರವಿಯ ಬಂಧನ ವಿರೊಧಿಸಿ ದೇಶವ್ಯಾಪ್ತಿ ಧ್ವನಿ ಎತ್ತಿದ್ದಾರೆ. ದಿಶಾ ರವಿ ಪರ ಹಿರಿಯ ಕಾಂಗ್ರೆಸ್ ನಾಯಕರಾದ ಪಿ. ಚಿದಂಬರಂ, ಶಶಿ ತರೂರ್, ಜಯರಾಮ್ ರಮೇಶ್ ಅವರು ಧ್ವನಿಯೆತ್ತಿದ್ದಾರೆ. ಇದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಎಂದು ಟ್ವೀಟ್ ಮಾಡಿದ್ದಾರೆ. ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ " ದಿಶಾ ರವಿ ಬಂಧನವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಸರ್ವಾಧಿಕಾರಿ ಧೋರಣೆ ವಿರುದ್ಧ ವಿದ್ಯಾರ್ಥಿಗಳು ಮತ್ತು ಯುವ ಜನತೆ ಹೋರಾಟಕ್ಕೆ ಇಳಿಯಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಸಂಸದ ಜಯರಾಮ್ ರಮೇಶ್ ಇದೊಂದು ನೀಚ ಕೃತ್ಯ ಎಂದು ಬಣ್ಣಿಸಿದ್ದಾರೆ.

Greta Thunberg toolkit case: Fake Accounts Created in the Name of Disha Ravi

Recommended Video

ಸುರತ್ಕಲ್ ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹಕ್ಕೆ ಅಸಮಾಧಾನ | Oneindia Kannada

ಹ್ಯಾಷ್ ಟ್ಯಾಗ್ ದಿಶಾ ರವಿ: ಇನ್ನು ದಿಶಾ ರವಿ ಬಂಧನ ಪೊಲೀಸರ ಕ್ರಮ ಖಂಡಿಸಿ ಒಂದಡೆ ದೇಶವ್ಯಾಪ್ತಿ ಧ್ವನಿಯೆತ್ತಿದ್ದಾರೆ. ಟಿಟ್ಟರ್ ಖಾತೆಯಲ್ಲಿ ಹ್ಯಾಷ್ ಟ್ಯಾಗ್ ದಿಶಾ ರವಿ ಗೆ ಚಾಲನೆ ನೀಡಿಡಲಾಗಿದೆ. ಇದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಶನಿವಾರ ದೆಹಲಿ ಪೊಲೀಸರಿಂದ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿರುವ ದಿಶಾ ರವಿ ಇದೀಗ ರಾಜಕೀಯ ಚರ್ಚೆ ವಿಷಯವಾಗಿದೆ. ಬಿಜೆಪಿಯ ಮುಖಂಡರು ದಿಶಾ ರವಿಯ ವಯಸ್ಸು ಉಲ್ಲೇಖಿಸಿ ಉಗ್ರ ಕಸಬ್ ಗೆ ಹೋಲಿಸಿದ್ದಾರೆ. ಇನ್ನೊಂದಡೆ ದಿಶಾ ರವಿ ಪರ ಕಾಂಗ್ರೆಸ್ ನಾಯಕರು ಧ್ವನಿಯೆತ್ತಿದ್ದಾರೆ.

English summary
Greta Thunberg toolkit case:Fake Accounts has been Created in the Name of climate activist Disha Ravi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X