ಪರಿಸರ ದಿನಾಚರಣೆ : ಅದಮ್ಯ ಚೇತನದಿಂದ ಹಸಿರು ಜಾಥಾ
ಬೆಂಗಳೂರು, ಜೂನ್ 06 : ವಿಶ್ವ ಪರಿಸರ ದಿನದ ಅಂಗವಾಗಿ ಅದಮ್ಯ ಚೇತನ ಸಂಸ್ಥೆ ವತಿಯಿಂದ ಭಾನುವಾರ 'ಹಸಿರು ಜಾಥಾ' ನಡೆಯಿತು. ಬೆಂಗಳೂರು ನಗರದಲ್ಲಿ ಗಿಡಗಳನ್ನು ಬೆಳೆಸಲು ಸಂಸ್ಥೆ ಪ್ರತಿ ಭಾನವಾರವನ್ನು 'ಹಸಿರು ಭಾನುವಾರವಾಗಿ' ಆಚರಣೆ ಮಾಡುವ ಸಂಕಲ್ಪ ಮಾಡಿತು.
ಲಾಲ್ ಬಾಗ್ ಬಳಿ ಕೇಂದ್ರ ಸಚಿವ ಅನಂತ್ ಕುಮಾರ್ ಅವರು 'ಹಸಿರು ಜಾಥಾ'ಕ್ಕೆ ಚಾಲನೆ ನೀಡಿದರು. ಕೆಜಿ ನಗರ, ವಿಜಯನಗರ, ಆರ್‌ಪಿಸಿ ಲೇಔಟ್, ಚಂದ್ರಾ ಲೇಔಟ್, ಗಿರಿನಗರ, ವೀರಭದ್ರನಗರ, ಅರಕೆರೆ, ಹುಳಿಮಾವು, ಬೆಂಗಳೂರು ಡೈರಿ ಮತ್ತು ಬಸವನಗುಡಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಜಾಥಾ ಸಂಚಾರ ನಡೆಸಿತು. [ಸಾವಯವ ಕೃಷಿಯಿಂದ ಮಾತ್ರ ಆರೋಗ್ಯ ಭಾಗ್ಯ: ಡಾ. ಅಶ್ವಥ್]

ನೂರಾರು ಜನರು, ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಎಲೆಕ್ಟ್ರಿಕ್ ಕಾರು, ಬೈಕ್‌ಗಳಿಗೆ ಜಾಥಾದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಲಾಗಿತ್ತು. [ಇಂದು ಮಾತ್ರವಲ್ಲ ಪ್ರತಿದಿನ ಪರಿಸರ ಉಳಿಸಿ]
ಸುಮಾರು 20 ಸಾವಿರ ಗಿಡಗಳನ್ನು ವಿವಿಧ ಬಡಾವಣೆಗಳಲ್ಲಿ ಹಂಚಿಕೆ ಮಾಡಲಾಯಿತು. ಈ ಗಿಡಗಳನ್ನು ಬೆಳೆಸಿ, ಪೋಷಿಸಿ ಹಸಿರು ಬೆಂಗಳೂರು ಅಭಿಯಾನವನ್ನು ಯಶಸ್ವಿಗೊಳಿಸುವ ಶಪಥವನ್ನು ಜಾಥಾದಲ್ಲಿ ಪಾಲ್ಗೊಂಡಿದ್ದ ನೂರಾರು ಜನರು ಕೈಗೊಂಡರು.
ಅರಕೆರೆಯಲ್ಲಿರುವ ಎಸ್‌ಓಎಸ್ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿದ ಅನಂತ್ ಕುಮಾರ್ ಅವರು ಮಕ್ಕಳೊಂದಿಗೆ ಮರಗಿಡಗಳನ್ನು ಉಳಿಸಿ, ಬೆಳೆಸುವ ಕುರಿತು ಸಂವಾದ ನಡೆಸಿದರು. ಕಳೆದ ವರ್ಷ ಚಾಲನೆ ನೀಡಿದ 'ಹಸಿರು ಬೆಂಗಳೂರು' ಅಭಿಯಾನದ ಬಗ್ಗೆ ಅನಂತ್ ಕುಮಾರ್ ಮಾತನಾಡಿದರು. [ಸಾಲುಮರದ ತಿಮ್ಮಕ್ಕರೊಂದಿಗೆ ಪರಿಸರ ದಿನಾಚರಣೆ]
ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡ, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ಬೆಂಗಳೂರು ಅಭಿಯಾನ ಕೈಗೊಳ್ಳಲು ತಮಗೆ ಸ್ಫೂರ್ತಿ ಎಂದು ಹೇಳಿದರು.
ಹಸಿರು ಭಾನುವಾರ : ಹಸಿರು ಬೆಂಗಳೂರು ಅಭಿಯಾನವನ್ನು ಯಶಸ್ವಿಗೊಳಿಸಲು ಅದಮ್ಯ ಚೇತನ 2016ರ ಪ್ರತಿ ಭಾನುವಾರವನ್ನು ಹಸಿರು ಭಾನುವಾರವಾಗಿ ಆಚರಣೆ ಮಾಡುವ ಸಂಕಲ್ಪ ಮಾಡಿತು. ಬೆಂಗಳೂರಿನ ಪ್ರತಿಯೊಬ್ಬರು ಈ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಅನಂತ್ ಕುಮಾರ್ ಮನವಿ ಮಾಡಿದರು.
-
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್












Click it and Unblock the Notifications