Get Updates
Get notified of breaking news, exclusive insights, and must-see stories!

Greater Bengaluru: ಗ್ರೇಟರ್‌ ಬೆಂಗಳೂರಿನಿಂದ 9 ಹೊಸ ಟ್ಯಾಕ್ಸ್‌, ರಿಯಲ್ ಎಸ್ಟೇಟ್‌ಗೆ ಅನುಕೂಲ: ಏನಿದು ಆರೋಪ?

ಬೆಂಗಳೂರಿನ ಆಡಳಿತ ವಿಸ್ತರಣೆಗೆ ಗ್ರೇಟರ್ ಬೆಂಗಳೂರು (Greater Bengaluru) ಪ್ರಾಧಿಕಾರ ರಚನೆ ಹಾಗೂ ಬಿಬಿಎಂಪಿಯನ್ನು ವಿಂಗಡಿಸಿ ಏಳು ನಗರ ಪಾಲಿಕೆಗಳನ್ನಾಗಿ ಮಾಡಲು ಉದ್ದೇಶಿಸಿರುವ "ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ-2025 ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಬೆಂಗಳೂರಿನ ಅಭಿವೃದ್ಧಿಯ ದೃಷ್ಟಿಯಿಂದ ಗ್ರೇಟರ್‌ ಬೆಂಗಳೂರು ಮಸೂದೆ ತರಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದರೆ, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಬೆಂಗಳೂರನ್ನು ಹಾಳು ಮಾಡಲು ಇದನ್ನು ತರಲಾಗುತ್ತಿವೆ ಎಂದು ಆರೋಪ ಹೊರಿಸಿದ್ದಾರೆ. ಅಲ್ಲದೆ ಗ್ರೇಟರ್‌ ಬೆಂಗಳೂರಿನಿಂದ ಏನೆಲ್ಲ ದುಷ್ಪರಿಣಾಮ ಆಗುತ್ತೆ ಎಂದು ಬಿಜೆಪಿ ನಾಯಕರು ಕಾರಣವೂ ನೀಡಿದ್ದಾರೆ.

ಕಾಂಗ್ರೆಸ್‌ ಸರ್ಕಾರವು ಈ ಗ್ರೇಟರ್‌ ಬೆಂಗಳೂರನ್ನು ಭವಿಷ್ಯ ದೃಷ್ಟಿಯಿಂದ ತರಲಾಗುತ್ತಿದೆ ಎಂದು ಹೇಳಿಕೊಂಡಿದೆ. ಅಲ್ಲದೆ, ಬೆಳೆಯುತ್ತಿರುವ ಬೆಂಗಳೂರಿಗೆ ಪೂರಕವಾಗಿ ಅಭಿವೃದ್ಧಿ ಹಾಗೂ ಸುಗಮ ಆಡಳಿತಕ್ಕಾಗಿ ಪಾಲಿಕೆಯನ್ನು ಹಲವು ಭಾಗಗಳಾಗಿ ವಿಂಗಡಿಸಲಾಗುತ್ತಿದೆ. ಇದರಿಂದ ಈಗಿನಂತೆ ಬಿಬಿಎಂಪಿಗೆ ಒಬ್ಬ ಮೇಯರ್‌ ಬದಲಾಗಿ, ಏಳು ಪಾಲಿಕೆಗಳನ್ನು ಮಾಡಿ, ಏಳು ಮೇಯರ್‌ಗಳಿಗೆ ಉಸ್ತುವಾರಿ ನೀಡುವುದು ಇದರ ಉದ್ದೇಶ ಎಂದು ಹೇಳಿದೆ. ಆದರೆ, ಮತ್ತೊಂದೆಡೆ ಇದರಿಂದ ಬೆಂಗಳೂರಿಗೆ ಏನೆಲ್ಲ ಲಾಭ? ಏನೆಲ್ಲ ನಷ್ಟ? ಎಂದೂ ಬಿಜೆಪಿ ನಾಯಕರು ಹಲವು ಆರೋಪಗಳನ್ನು ಮಾಡಿದ್ದಾರೆ.

Greater Bengaluru Authority BJP MP PC Mohan Opposes City Expansion New Taxes Property Real Estate

ಬಿಜೆಪಿ ಸಂಸದ ಪಿ.ಸಿ.ಮೋಹನ್‌ ಕೂಡ ಗ್ರೇಟರ್‌ ಬೆಂಗಳೂರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ಬೆಂಗಳೂರನ್ನು 708 ಚದರ ಕಿಲೋ ಮೀಟರ್‌ ವ್ಯಾಪ್ತಿಯಿಂದ 1,400 ಚದರ ಕಿ.ಮೀ.ಗೆ ವಿಸ್ತರಿಸಲು ಮುಂದಾಗಿದೆ. ಅಲ್ಲದೆ ಬೆಂಗಳೂರನ್ನು ಏಳು ನಿಗಮಗಳಾಗಿ ವಿಭಜನೆ ಮಾಡುವ ಜೊತೆಗೆ, 9 ಹೊಸ ತೆರಿಗೆಗಳನ್ನು ವಿಧಿಸಲು ಮುಂದಾಗಿದ್ದಾರೆ. ಜೊತೆಗೆ ರಿಯಲ್ ಎಸ್ಟೇಟ್ ಬೆಲೆಗಳನ್ನು ಹೆಚ್ಚಿಸಲು ಮತ್ತು ರಾಜಕೀಯವಾಗಿ ಪ್ರಸ್ತುತವಾಗಿರಲು, ಅಧಿಕಾರವನ್ನು ಪಡೆದುಕೊಳ್ಳಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಮೂಲತಃ ಇದು ಆಡಳಿತದ ಬಗ್ಗೆ ಕಡಿಮೆ ಗಮನ ಕೊಟ್ಟಿದ್ದು, ಹಣ ಗಳಿಸುವ ಬಗ್ಗೆ ಹೆಚ್ಚು ಆಸಕ್ತಿ ತೋರಿದೆ ಎಂದು ಆರೋಪಿಸಿದ್ದಾರೆ.

ಅನ್ಯಭಾಷಿಕರು ಮೇಯರ್‌ ಆಗ್ತಾರೆ: ವಿಪಕ್ಷ ನಾಯಕ ಆರ್‌.ಅಶೋಕ್‌ ಕೂಡ ಇದನ್ನು ಬಲವಾಗಿ ವಿರೋಧಿಸಿದ್ದಾರೆ. ವಿಧೇಯಕವು ಬೆಂಗಳೂರು ಪಾಲಿಗೆ ಮರಣ ಶಾಸನವಾಗಿದ್ದು, ಬೆಂಗಳೂರು ವಿಭಾಗ ಮಾಡಿದರೆ ಪ್ರಯೋಜನ ಇಲ್ಲ. ಈಗ ಬಿಬಿಎಂಪಿಯನ್ನು ವಿಭಜಿಸಿ ಹೆಚ್ಚಿನ ನಿಗಮಗಳನ್ನು ರಚಿಸಿದರೆ, ಕೆಲವು ನಿಗಮಗಳ ವ್ಯಾಪ್ತಿಯಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತೆ. ಇದು ಮೇಯರ್ ಚುನಾವಣೆಯಲ್ಲಿ ಕನ್ನಡಿಗರನ್ನು ಕಡೆಗಣಿಸಬಹುದು. ಏಳು ಪಾಲಿಕೆ ಮಾಡುವುದರಿಂದ ಕನ್ನಡೇತರರು ಮೇಯರ್‌ ಆಗಲಿದ್ದಾರೆ. ಹಾಗಾಗಿ ಇದಕ್ಕೆ ನಮ್ಮ ವಿರೋಧವಿದೆ ಎಂದು ಅಶೋಕ್‌ ಹೇಳಿದ್ದಾರೆ.

Greater Bengaluru Authority BJP MP PC Mohan Opposes City Expansion New Taxes Property Real Estate

ಬ್ರಿಟಿಷರ ಕಾಲದಲ್ಲಿ ಬೆಂಗಳೂರು ದಂಡು ಪ್ರದೇಶ ಮತ್ತು ನಗರ ಎರಡು ಭಾಗಗಳಲ್ಲಿ ಗುರುತಿಸಿಕೊಂಡಿತ್ತು. ದಂಡು ಪ್ರದೇಶದಲ್ಲಿ ಬ್ರಿಟಿಷರು ವಾಸವಾಗಿದ್ರೆ, ಪಶ್ಚಿಮ ಭಾಗದಲ್ಲಿ ಕೂಲಿ ಕಾರ್ಮಿಕರು ವಾಸವಾಗಿದ್ರು. ದಂಡು ಪ್ರದೇಶದಲ್ಲಿ ಐಟಿ-ಬಿಟಿಗಳ ಉಗಮವಾದರೆ ಪಶ್ಚಿಮ ಭಾಗದಲ್ಲಿ ಕೂಲಿ ಕಾರ್ಮಿಕರಿಗೆ ಬಿನ್ನಿ ಮಿಲ್, ರಾಜಾ ಮಿಲ್, ಕಿರ್ಲೋಸ್ಕರ್ ಸೇರಿದಂತೆ ಮೊದಲಾದ ಕಂಪನಿಗಳು ಬಂದವು. ಆದರೆ ನಗರ ಪ್ರದೇಶ ಈಗಲೂ ಬಡತನದಿಂದ ಕೂಡಿದೆ ಎಂದು ಎಂದು ಗ್ರೇಟರ್ ಬೆಂಗಳೂರು ಬಿಲ್ ಬಗ್ಗೆ ಮಾತಾಡಿದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದಾರೆ.

ಗ್ರೇಟರ್‌ ಬೆಂಗಳೂರು ಮಾಡಲು ಹೊರಟಿರುವ ಡಿಕೆ ಶಿವಕುಮಾರ್‌ ಅವರಿಗೆ ಧನ್ಯವಾದ ಎಂದೂ ಮುನಿರತ್ನ ವ್ಯಂಗ್ಯವಾಡಿದ್ದಾರೆ. ಗ್ರೇಟರ್‌ ಬೆಂಗಳೂರು ಮಾಡಿದ ಡಿಕೆ ಶಿವಕುಮಾರ್‌ ಗ್ರೇಟ್‌ ಎಂದೂ ಟಾಂಗ್‌ ಕೊಟ್ಟಿದ್ದಾರೆ. ಅವರು ಬೆಂಗಳೂರನ್ನು ಬಹಳ ಹತ್ತಿರದಿಂದ ನೋಡಿದವರು. ಹಾಗಾಗಿ, ಬೆಂಗಳೂರನ್ನು ಇನ್ನೇನೋ ಮಾಡಲು ಅವರು ಹೊರಟಿದ್ದಾರೆ. ಗ್ರೇಟರ್ ಬೆಂಗಳೂರು ಬಿಲ್ ತಂದಿರುವ ಬೆಂಗಳೂರು ಉಸ್ತುವಾರಿ ಸಚಿವರು ತುಂಬಾ ಗ್ರೇಟ್. ನಾವು ಇತಿಹಾಸದಲ್ಲಿ ದಿ ಗ್ರೇಟ್ ಅಲೆಗ್ಸಾಂಡರ್‌, ಗ್ರೇಟ್ ಬ್ರಿಟನ್ ಹೆಸರನ್ನು ಕೇಳಿದ್ದೀವಿ. ಈಗ ಅಂತದ್ದೇ ಹೆಸರು ದಿ ಗ್ರೇಟ್‌ ಡಿಕೆ ಶಿವಕುಮಾರ್‌ ಅವರ ಗ್ರೇಟ್‌ ಬೆಂಗಳೂರು ಎಂದು ವ್ಯಂಗ್ಯವಾಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಚುನಾಯಿತ ಸಂಸ್ಥೆ ಇಲ್ಲದೆ, ಮುಖ್ಯ ಆಯುಕ್ತರೇ ಬಿಬಿಎಂಪಿಯ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ಅದನ್ನು ವಿಭಜಿಸುವುದೇಕೆ? ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಪ್ರಶ್ನಿಸಿದ್ದಾರೆ. ಇನ್ನೂ ಬಿಬಿಎಂಪಿ ಆಡಳಿತ ವಿಕೇಂದ್ರೀಕರಣ ಮಾಡಬೇಕಾದರೆ ಮೊದಲು ಬಿಬಿಎಂಪಿಗೆ ಚುನಾವಣೆ ನಡೆಸಬೇಕು. ನಗರವನ್ನು ಯಾರು ಉತ್ತಮವಾಗಿ ಮುನ್ನಡೆಸುತ್ತಾರೋ ಅವರಿಗೆ ಅವಕಾಶ ಕೊಡಿ ಎಂದು ಹೇಳಿದ್ದಾರೆ.

ಬೆಳೆಯುವ ಬೆಂಗಳೂರನ್ನು ತಡೆಯಲು ಸಾಧ್ಯವೇ ಇಲ್ಲ

ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಮಂಡನೆಯ ಬಳಿಕದ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲ ಶಾಸಕರನ್ನು ಡಿಸಿಎಂ ಡಿಕೆ ಶಿವಕುಮಾರ್‌ ಅಭಿನಂದಿಸಿದ್ದಾರೆ. ಎಲ್ಲರೂ ತಮ್ಮದೇ ಆದ ಅಭಿಪ್ರಾಯ ತಿಳಿಸಿದ್ದಾರೆ. ಈಗಿರುವ ವ್ಯವಸ್ಥೆಯಲ್ಲಿಯೇ ಬೆಂಗಳೂರು ನಗರವನ್ನು ಮುನ್ನಡೆಸುವುದು ಅಸಾಧ್ಯ ಎಂದು ಅವರು ಆತ್ಮಸಾಕ್ಷಿ ಮೂಲಕ ಒಪ್ಪಿದ್ದಾರೆ ಎಂದು ಹೇಳಿದ್ದಾರೆ.

ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು ಆಡಳಿತಕ್ಕೆ ದೊಡ್ಡ ಸಮಸ್ಯೆ ಎಂಬ ಅರಿವು ಅವರಿಗಿದೆ. ಬೆಂಗಳೂರು ನಗರ ಕೆಂಪೇಗೌಡರು ಕಟ್ಟಿಸಿದ ಗೋಪುರ ಮೀರಿ ಬೆಳೆದಿದೆ. ಈಗಲೂ ಅದನ್ನು ನಿಲ್ಲಿಸಲು ಆಗುವುದಿಲ್ಲ, ಮುಂದೆಯೂ ಆಗುವುದಿಲ್ಲ. ಈಗ ಯಲಹಂಕ, ಕೆಂಗೇರಿ ಉಪನಗರಗಳು ಪಾಲಿಕೆ ವ್ಯಾಪ್ತಿಗೆ ಸೇರಿವೆ. ಹೀಗೆ ಬೆಳೆದಿರುವ ಬೆಂಗಳೂರಿನ ಆಡಳಿತವನ್ನು ನಾವು ವಿಕೇಂದ್ರೀಕರಣ ಮಾಡಲು ಮುಂದಾಗಿದ್ದೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿಗೆ ಅಧಿಕಾರ ಮತ್ತು ಆಡಳಿತದ ವಿಕೇಂದ್ರೀಕರಣದ ಅಗತ್ಯವಿದೆ. ಕೆಲವು ವಿರೋಧ ಪಕ್ಷದ ಸದಸ್ಯರು ಹೇಳುತ್ತಿರುವಂತೆ ನಾವು ಬೆಂಗಳೂರನ್ನು ಯಾವುದೇ ರೀತಿ ನಾಶ ಮಾಡುತ್ತಿಲ್ಲ. ಬದಲಾಗಿ ನಾವು ಬೆಂಗಳೂರನ್ನು ಬಲಗೊಳಿಸುತ್ತಿದ್ದೇವೆ. ಬೆಂಗಳೂರನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತೇವೆ. ಬೆಂಗಳೂರಿಗೆ ಹೊಸ ದಿಕ್ಕನ್ನು ಕೊಡಲು ಈ ಮಸೂದೆ ತಂದಿದ್ದೇವೆ ಎಂದೂ ಹೇಳಿದ್ದಾರೆ. ಒಟ್ಟಾರೆ ಕಾಂಗ್ರೆಸ್‌ ಸರ್ಕಾರದ ಈ ನಿರ್ಣಯವನ್ನು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಬಲವಾಗಿ ವಿರೋಧಿಸುತ್ತಲೇ ಇದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+