ಗ್ರೇಟರ್ ಬೆಂಗಳೂರು ಆಡಳಿತ: ಬೆಂಗಳೂರಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ?

Greater Bengaluru Authority: ಬೆಂಗಳೂರಿನಲ್ಲಿ ಇಂದಿನಿಂದ (ಸೆಪ್ಟೆಂಬರ್ 02)ರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಾಗಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ. ಹಾಗಾದರೆ ಈ ಹೊಸ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯ ಪರಿಕಲ್ಪನೆ ಏನು ಹಾಗೂ ಇದನ್ನು ಯಾವ ಕಾರಣಕ್ಕೆ ರಚನೆ ಮಾಡಲಾಗಿದೆ. ಇದರ ಜವಾಬ್ದಾರಿ ಏನು ಎನ್ನುವ ಬಗ್ಗೆ ಜಿಬಿಎ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.

ಬೆಂಗಳೂರಿನಲ್ಲಿ ಬಹು ಸಂಖ್ಯೆಯ ನಾಗರಿಕ ಏಜೆನ್ಸಿಗಳಿದ್ದು (ಬಿಬಿಎಂಪಿ, ಜಲಮಂಡಳಿ, ಮೆಟ್ರೊ & ಬೆಸ್ಕಾಂ) ಅವುಗಳ ನಡುವೆ ಸಮನ್ವಯದ ಕೊರತೆಯ ಕಾರಣದಿಂದಾಗಿ ಬೆಂಗಳೂರಿನಲ್ಲಿ ಆಡಳಿತ ಅವ್ಯವಸ್ಥೆಯನ್ನು ಸರಿಪಡಿಸುವಂತಹ ಯಾವುದೇ ಸಂಸ್ಥೆಯನ್ನು ಸ್ಥಾಪಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020 ರಲ್ಲಿ ಯಾವುದೇ ಅವಕಾಶಗಳು ಇಲ್ಲದಿರುವುದನ್ನು ಗಮನಿಸಿದ ಸರ್ಕಾರವು ಗ್ರೇಟರ್‌ ಬೆಂಗಳೂರು ಆಡಳಿತ ಅಧಿನಿಯಮ, 2024 ಅನ್ನು ದಿನಾಂಕ: 15-05-2025 ರಿಂದ ಜಾರಿಗೊಳಿಸಿರುತ್ತದೆ.

Greater Bengaluru Administration What changes will happen in Bengaluru

ಈ ಅಧಿನಿಯಮವು ಗ್ರೇಟರ್‌ ಬೆಂಗಳೂರು ಪ್ರದೇಶದ ಅಭಿವೃದ್ಧಿಯ ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನು ಸ್ಥಾಪಿಸಲು; ಪರಿಣಾಮಕಾರಿ, ಸಹಭಾಗಿತ್ವದ ಮತ್ತು ಸ್ಪಂದನಶೀಲ ಆಡಳಿತಕ್ಕಾಗಿ ಗ್ರೇಟರ್‌ ಬೆಂಗಳೂರು ಪ್ರದೇಶದಲ್ಲಿ 7 ಕ್ಕಿಂತ ಹೆಚ್ಚಿಲ್ಲದಂತೆ ನಗರ ಪಾಲಿಕೆಗಳನ್ನು ಸ್ಥಾಪಿಸಲು; ಹಾಗೂ ಸಮುದಾಯ ಪಾಲ್ಗೊಳ್ಳುವಿಕೆಯನ್ನು ನಗರಾಡಳಿತದ ಮೂಲ ಘಟಕವಾದ ವಾರ್ಡ್‌ಸಮಿತಿಗಳಲ್ಲಿ ಸುಗಮಗೊಳಿಸಿ ಸಶಕ್ತಗೊಳಿಸಲು ಅವಕಾಶ ಕಲ್ಪಿಸುತ್ತದೆ.

• ಸರ್ಕಾರವು ನಿವೃತ್ತ ಮುಖ್ಯ ಕಾರ್ಯದರ್ಶಿಯ ಬಿ.ಎಸ್.‌ ಪಾಟೀಲ್‌, ಐ.ಎ.ಎಸ್.‌, ಇವರ ಅಧ್ಯಕ್ಷತೆಯಲ್ಲಿ ಜುಲೈ 2023 ರಲ್ಲಿ ಬ್ರಾಂಡ್‌ ಬೆಂಗಳೂರು ಸಮಿತಿಯನ್ನು ರಚಿಸಿದ್ದು, ಸಮಿತಿಯು ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕದ ಕರಡನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ಕರಡನ್ನು ಅಲ್ಪ ಮಟ್ಟಿನ ಪರಿಷ್ಕರಣದೊಂದಿಗೆ ಕರ್ನಾಟಕ ವಿಧಾನ ಸಭೆಯ ಮುಂದೆ 2024 ರ ಜುಲೈ ಅಧಿವೇಶನದ ಸಂದರ್ಭದಲ್ಲಿ ಮಂಡಿಸಿದಾಗ ಹಲವು ಸದಸ್ಯರ ಕೋರಿಕೆಯ ಮೇರೆಗೆ ಜಂಟಿ ಪರಿಶೀಲನಾ ಸಮಿತಿಗೆ ಸಲ್ಲಿಸಲಾಗಿದೆ.

ಶಾಸಕ ರಿಜ್ವಾನ್‌ ಅರ್ಷದ್ ಅವರ ಅಧ್ಯಕ್ಷತೆಯ ಜಂಟಿ ಪರಿಶೀಲನಾ ಸಮಿತಿಯು ಆರು ತಿಂಗಳ ಅವಧಿಯಲ್ಲಿ 15ಕ್ಕೂ ಹೆಚ್ಚು ಬಾರಿ ಸಭೆಗಳನ್ನು ನಡೆಸಿ, 05 ಸಾರ್ವಜನಿಕ ಅಭಿಪ್ರಾಯ ಸಂಗ್ರಹಣಾ ಸಭೆಗಳೊಂದಿಗೆ ತನ್ನ ವರದಿ ಮತ್ತು ಪರಿಷ್ಕೃತ ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ, 2024 ಅನ್ನು ಸನ್ಮಾನ್ಯ ಸಭಾಧ್ಯಕ್ಷರಿಗೆ ಸಲ್ಲಿಸಿತ್ತು.

ಕರ್ನಾಟಕ ವಿಧಾನ ಮಂಡಲವು ದಿನಾಂಕ: 13-03-2025 ರಂದು ಕೆಲವು ತಿದ್ದುಪಡಿಗಳೊಂದಿಗೆ ಇದನ್ನು ಅಂಗೀಕರಿಸಿದ್ದು, ದಿನಾಂಕ: 23-04-2025 ರಂದು ಗೌರವಾನ್ವಿತ ರಾಜ್ಯಪಾಲರು ಗ್ರೇಟರ್‌ ಬೆಂಗಳೂರು ಆಡಳಿತ ಅಧಿನಿಯಮ, 2024 ಕ್ಕೆ ಅನುಮತಿಯನ್ನು ನೀಡಿರುತ್ತಾರೆ. ದಿನಾಂಕ: 24-04-2025 ರಂದು ಈ ಅಧಿನಿಯಮವನ್ನು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.

ದಿನಾಂಕ: 15-05-2025 ರಂದು ಈ ಅಧಿನಿಯಮವನ್ನು ಜಾರಿಗೊಳಿಸಲಾಗಿದೆ. ಅಧಿನಿಯಮದ ಕಲಂ 9 ರ ಅನುಸಾರ ಅಧಿನಿಯಮವು ಜಾರಿಗೊಂಡ 120 ದಿನಗಳ ಒಳಗಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನು ರಚಿಸಬೇಕಿರುತ್ತದೆ. ಅದರಂತೆ ದಿನಾಂಕ: 26-08-2025ರ ಅಧಿಸೂಚನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನು ರಚಿಸಿ ಆದೇಶಿಸಲಾಗಿದೆ. ಈ ಪ್ರಾಧಿಕಾರವು ಕನಿಷ್ಠ 3 ತಿಂಗಳಿಗೆ ಒಮ್ಮೆ ಸಭೆ ಸೇರುತ್ತದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಪ್ರಮುಖ ಜವಾಬ್ದಾರಿಗಳೆಂದರೆ

* ಗ್ರೇಟರ್‌ ಬೆಂಗಳೂರು ಪ್ರದೇಶದಲ್ಲಿನ ಎಲ್ಲಾ ಸಾರ್ವಜನಿಕ ಪ್ರಾಧಿಕಾರಗಳ (Parastatals) ಸಮನ್ವಯ ಮತ್ತು ಮೇಲ್ವಿಚಾರಣೆ.

* ಎಲ್ಲಾ 05 ನಗರ ಪಾಲಿಕೆಗಳಿಗಾಗಿ ಕಾಮನ್‌ ಕೇಡರ್‌ ನಿರ್ವಹಿಸುವುದು.

* ಗ್ರೇಟರ್‌ ಬೆಂಗಳೂರು ಪ್ರದೇಶಕ್ಕೆ ಯೋಜನಾ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುವುದು.

* ಗ್ರೇಟರ್‌ ಬೆಂಗಳೂರು ಪ್ರದೇಶದಲ್ಲಿ ಪ್ರಮುಖ ಯೋಜನೆಗಳನ್ನು ರೂಪಿಸುವುದು ಮತ್ತು ಕಾರ್ಯಗತಗೊಳಿಸುವುದು ಎಂದು ಸರ್ಕಾರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+