ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ಕಾಮಗಾರಿ ಯಾವಾಗ ಪೂರ್ಣ, ಸತ್ಯ ಯಾವುದು?

By Nayana
|
Google Oneindia Kannada News

ಬೆಂಗಳೂರು, ಜು.3: ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ 2021ಕ್ಕೆ ಪೂರ್ಣವಾಗಬೇಕಿತ್ತು, ಆದರೆ ಎರಡನೇ ಹಂತಕ್ಕೆ ಇತ್ತೀಚೆಗೆ ಕರೆದ ಟೆಂಡರ್‌ ಪ್ರಕಾರ 2022ಕ್ಕೆ ಮೆಟ್ರೋ ಕಾಮಗಾರಿ ಪೂರ್ಣವಾಗಲಿದೆ ಎಂದು ವಿಧಾನ ಮಂಡಲದ ಅಧಿವೇಶನದಲ್ಲಿ ರಾಜ್ಯಪಾಲ ವಜುಭಾಯಿವಾಲಾ ತಿಳಿಸಿದ್ದಾರೆ.

2 ನೇ ಹಂತ ಯೋಜನೆಯ ಭಾಗವಾದ ಗೊಟ್ಟಿಗೆರೆ-ನಾಗವಾರ ಮಾರ್ಗಕ್ಕೆ ಕರೆದ ಎರಡು ಪ್ಯಾಕೇಜ್‌ ಟೆಂಡರ್‌ನಲ್ಲಿ ಕಾಮಗಾರಿಯ ಗಡುವು 2022 ಏಪ್ರಿಲ್‌ ಎಂದು ನೀಡಲಾಗಿದೆ. ಯೋಜನೆಯಲ್ಲಿ ಇನ್ನೂ 17 ಕಿ.ಮೀ ಮಾರ್ಗಕ್ಕೆ ಟೆಂಡರ್‌ ಆಹ್ವಾನಿಸಬೇಕಿದೆ. ಬೇರೆ ಮಾರ್ಗಗಳ ಕಾಮಗಾರಿಯಲ್ಲಿ ಗಡುವು ಮೀರಿರುವುದರಿಂದ ಮಾರ್ಗ ನಿರ್ಮಾಣ ತಡವಾಗಿದೆ. ಹೀಗಾಗಿ ಗಡುವಿಗಿಂತ ಬೇಗನೆ ಮುಗಿಯುವುದು ಅನುಮಾನವಾಗಿದೆ.

ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ

21.25ಕಿ.ಮೀ ಉದ್ದದ ಗೊಟ್ಟಿಗೆರೆ-ನಾಗವಾರ ಮಾರ್ಗಕ್ಕೆ ಹಿಂದೆಯೇ ಟೆಂಡರ್‌ ಕರೆದಿದ್ದರೂ ಅಂದಾಜಿಗಿಂತ ಅಧಿಕ ಮೊತ್ತ ಉಲ್ಲೇಖಿಸಿದ್ದರಿಂದ ಟೆಂಡರ್‌ ರದ್ದಾಗಿತ್ತು. ಮೆಟ್ರೋದ ಇತ್ತೀಚಿನ ಟೆಂಡರ್‌ ದಾಖಲೆ ಪ್ರಕಾರ 2 ನೇ ಹಂತದ ಯೋಜನೆಯಲ್ಲಿ 72.095 ಕಿ.ಮೀ ಉದ್ದದ ಮಾರ್ಗ ನಿರ್ಮಾಣವಾಗಲಿದೆ.

Governor says metro completes in 2021: But is it true?

ಒಂದನೇ ಹಂತದ 42.3ಕಿ.ಮೀ ಹಾಗೂ 72 ಕಿ.ಮೀ ಸೇರಿದರೆ ಒಟ್ಟು ಮಾರ್ಗದ ಉದ್ದ 114.395 ಕಿ.ಮೀ ಆಗುತ್ತದೆ. ಹೀಗಾಗಿ 118 ಕಿ.ಮೀ ಮಾರ್ಗದ ಪ್ರಸ್ತಾಪವೇ ಇಲ್ಲಿ ಬರುವುದಿಲ್ಲ.

ಇತ್ತೀಚೆಗೆ ಈ ಮಾರ್ಗದ ಸುರಂಗದ ಉದ್ದ ಕಡಿತಗೊಳಿಸಿದಿ ಎರಡು ಪ್ಯಾಕೇಜ್‌ಗಳಲ್ಲಿ ಹೊಸ ಟೆಂಡರ್‌ ಕರೆಯಲಾಗಿದೆ. 2.88 ಕಿ.ಮೀ ಉದ್ದದ ಶಿವಾಜಿನಗರ- ಟ್ಯಾನರಿ ರಸ್ತೆ ಸುರಂಗ ಮಾರ್ಗಕ್ಕೆ ಕರೆದ ಟೆಂಡರ್‌ ಪ್ರಕ್ರಿಯೆ 2018ರ ಸೆಪ್ಟೆಂಬರ್‌ಗೆ ಮುಗಿಯಲಿದೆ.

English summary
Governor VR Vala has said his speech in joint session of Karnataka assembly that second phase of Namma Metro work by 2021. But according to BMRCL plan the work will be completed in 2022. Here is the story about why Namma Metro is getting late.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X