ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: 121ಟನ್ ಇಂಗಾಲ ಸಂಗ್ರಹಿಸುವ ಮರಗಳಿಗೆ ಕುತ್ತು: ವರದಿ

ಬೆಂಗಳೂರಿನಲ್ಲಿ ಅಭಿವೃದ್ಧಿಯ ಹೆಸರಿನಡಿ ಮರಗಳಿಗೆ ಕೊಡಲಿ ಹಾಕುವ ಪ್ರಕ್ರಿಯೆ ಮುಂದುವರಿಯುತ್ತಿದೆ. ಮಲ್ಲೇಶ್ವರಂ ವ್ಯಾಪ್ತಿಯ ಸ್ಯಾಂಕಿ ಟ್ಯಾಂಕ್ ಬಂಡ್ ರಸ್ತೆ ಅಗಲೀಕರಣ ಮತ್ತು ಮಲ್ಸೇತುವೆ ಯೋಜನೆಗಾಗಿ ಟನ್‌ಗಟ್ಟಲೇ ಇಂಗಾಲ ಸೇವಿಸಿ (ಸಂಗ್ರಹಿಸುವ) ಉತ್ತಮ ಗಾಳಿ ಒದಗಿಸುತ್

|
Google Oneindia Kannada News

ಬೆಂಗಳೂರು, ಫೆಬ್ರುವರಿ 03: ಬೆಂಗಳೂರಿನಲ್ಲಿ ಅಭಿವೃದ್ಧಿಯ ಹೆಸರಿನಡಿ ಮರಗಳಿಗೆ ಕೊಡಲಿ ಹಾಕುವ ಪ್ರಕ್ರಿಯೆ ಮುಂದುವರಿಯುತ್ತಿದೆ. ಮಲ್ಲೇಶ್ವರಂ ವ್ಯಾಪ್ತಿಯ ಸ್ಯಾಂಕಿ ಟ್ಯಾಂಕ್ ಬಂಡ್ ರಸ್ತೆ ಅಗಲೀಕರಣ ಮತ್ತು ಮಲ್ಸೇತುವೆ ಯೋಜನೆಗಾಗಿ ಟನ್‌ಗಟ್ಟಲೇ ಇಂಗಾಲ ಸೇವಿಸಿ (ಸಂಗ್ರಹಿಸುವ) ಉತ್ತಮ ಗಾಳಿ ಒದಗಿಸುತ್ತಿರುವ ಮರಗಳಿಗೆ ಕೊಡಲಿ ಬೀಳಲಿದೆ.

ಸಾಕಷ್ಟು ವಿರೋಧದ ನಡುವೆಯು ರಾಜ್ಯ ಸರ್ಕಾರ/ ಬಿಬಿಎಂಪಿ ಯೋಜನೆ ಅನುಷ್ಠಾನದ ಹಠ ಹಿಡಿದಿದೆ. ರಸ್ತೆ ಅಗಲೀಕರಣ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ 80ಕ್ಕೂ ಹೆಚ್ಚು ಮರಗಗಳು, 400 ಸಸಿಗಳನ್ನು ಕಡಿಯಲು ಉದ್ದೇಶಿಸಲಾಗಿದೆ. ಸ್ಯಾಂಕಿ ರಸ್ತೆಯಲ್ಲಿನ ಬೆಳೆದು ನಿಂತ ಬಹುವರ್ಷಗಳ ಮರಗಳು ವಾರ್ಷಿಕವಾಗಿ 121 ಟನ್ ಇಂಗಾಲದ (ಸಂಗ್ರಹಣೆ) ಸೇವಿಸುತ್ತವೆ. ಈ ಮೂಲಕ ಹೆಚ್ಚು ಸಂಚಾರ ದಟ್ಟಣೆ, ವಾಹನಗಳಿಂದ ಕೂಡಿರುವ ಸಿಲಿಕಾನ್ ಸಿಟಿಗೆ ಉತ್ತಮ ಗಾಳಿ ಒದಗಿಸುವಲ್ಲಿ ಈ ಮರಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.

ಮಲ್ಲೇಶ್ವರಂ ಡಿಗ್ರಿ ಕಾಲೇಜಿನ ಅಭಿವೃದ್ಧಿಗೆ 3.5 ಕೋಟಿ ರೂ: ಅಶ್ವತ್ಥ ನಾರಾಯಣ ಮಲ್ಲೇಶ್ವರಂ ಡಿಗ್ರಿ ಕಾಲೇಜಿನ ಅಭಿವೃದ್ಧಿಗೆ 3.5 ಕೋಟಿ ರೂ: ಅಶ್ವತ್ಥ ನಾರಾಯಣ

ಇತ್ತೀಚೆಗೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಹಾಗೂ ನಗರ ಮೂಲದ ವೃಕ್ಷ ಫೌಂಡೇಶನ್‌ ವತಿಯಿಂದ ಸಂಶೋಧಕರು ಮರಗಳ ಕುರಿತು ಸಂಶೋಧನೆ ನಡೆಸಿ ವರದಿ ತಯಾರಿಸಿದ್ದಾರೆ. ಈ ವರದಿಯಲ್ಲಿ ಮರಗಳ ಪಾತ್ರ, ಮರಗಳ ಜಾತಿ ಗಣತಿ ಅಂಶಗಳು ಬಹಿರಂಗವಾಗಿದೆ. ಗುರುವಾರ ವರದಿ ಬಿಡುಗಡೆ ಆಗಿದೆ.

Government is all set to ax trees that store 121 tonnes of carbon annually

ಉದ್ದೇಶಿತ ಮೇಲ್ಸೇತುವೆ ವಿರುದ್ಧ ಮಲ್ಲೇಶ್ವರಂ ನಾಗರಿಕರು, ಪರಿಸರವಾದಿಗಳು ತೀವ್ರ ವಿರೋಧ ಕೇಳಿ ಬಂದಿದೆ. ವರದಿಯ ಪ್ರಕಾರ, ಸ್ಯಾಂಕಿ ಟ್ಯಾಂಕ್ ಬಂಡ್‌ರಸ್ತೆಯ ಯೋಜನೆಗಾಗಿ ಕೊಡಲಿ ಬೀಳಲಿರುವ 400 ಸಸಿಗಳು ಪೇಪರ್ ಮಲ್ಬೆರಿ ಜಾತಿಗೆ ಸೇರಿದ ಸಸಿಗಳಾಗಿವೆ. ಇದು ಸದಾಶಿವನಗರ ಮತ್ತು ಮಲ್ಲೇಶ್ವರಂನಲ್ಲಿ ಹೇರಳವಾಗಿ ಕಂಡುಬರುತ್ತದೆ.

ಈ ಭಾಗದ ಎಲ್ಲ ಮರಗಳು ಒಟ್ಟಾರೆಯಾಗಿ ವಾರ್ಷಿಕವಾಗಿ 121 ಟನ್ ಇಂಗಾಲವನ್ನು ಹೀರಿಕೊಳ್ಳುತ್ತವೆ. ನಿತ್ಯ ಈ ಭಾಗದಲ್ಲಿ ಸಂಚರಿಸುವ ಒಂದು ವಾಹನವು ವರ್ಷಕ್ಕೆ 4.6 ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುತ್ತದೆ ಎಂದು ವರದಿ ಹೇಳುತ್ತದೆ.

1.5 ಕಿ.ಮೀ.ನಲ್ಲಿ ಮರಗಳ ಸಂಖ್ಯೆ ಗಣತಿ

ಇಷ್ಟೊಂದು ಪ್ರಮಾಣದಲ್ಲಿ (121 ಟನ್) ಇಂಗಾಲವನ್ನು ಸಂಗ್ರಹಿ ಹಸಿರುಮನೆ ಅನಿಲ ಹೊರಸೂಸುವ ಮರಗಳು ಜಾಗತಿಕ ತಾಪಮಾನದ ಪರಿಣಾಮವನ್ನು ಕಡಿಮೆ ಮಾಡುವ ಉಚಿತ ಸೇವೆ ನಮಗಾಗಿ ಒದಗಿಸುತ್ತವೆ ಎಂದು ಅಜೀಂ ಪ್ರೇಮ್‌ಜಿ ವಿವಿ ಪ್ರೊಫೆಸರ್ ಹಾಗೂ ಸಂಶೋಧನಾ ತಂಡದ ಸದಸ್ಯೆ ಹರಿಣಿ ನಾಗೇಂದ್ರ ಅವರು ತಿಳಿಸಿದರು.

Government is all set to ax trees that store 121 tonnes of carbon annually

ಬಳ್ಳಾರಿ ರಸ್ತೆಯ ಕಾವೇರಿ ಅಂಡರ್‌ಪಾಸ್ ಜಂಕ್ಷನ್‌ನಿಂದ ಮಲ್ಲೇಶ್ವರಂ 18ನೇ ಕ್ರಾಸ್ ಸ್ಯಾಂಕಿ ಟ್ಯಾಂಕ್ ಜಂಕ್ಷನ್‌ನ ಮಧ್ಯದ 1.5 ಕಿ.ಮೀ.ಮರಗಳ ನೈಜ ಸಂಖ್ಯೆ, ಜಾತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಿಬಿಎಂಪಿಯ ಸಿದ್ದಪಡಿಸಿದ ಯೋಜನೆಯ ಡಿಪಿಆರ್ ವ್ಯಾಪ್ತಿಗೆ 70 ಕ್ಕೂ ಹೆಚ್ಚು ಬೆಳೆದುನಿಂತ ಮರಗಳು ಬರುತ್ತವೆ. ಆದರೆ 400 ಪೇಪರ್ ಮಲ್ಬೆರಿ ಸಸಿಗಳು ಡಿಪಿಆರ್ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ವೃಕ್ಷ ಫೌಂಡೇಶನ್‌ನ ವಿಜಯ್ ನಿಶಾಂತ್ ಹೇಳಿದರು.

ಇನ್ನೂ ಮರಗಳು ಸಾಕಷ್ಟು ಹೂವು ಮತ್ತು ಹಣ್ಣುಗಳನ್ನು ನೀಡುವ ಮರಗಳಾಗಿದ್ದು, ಪಕ್ಷಿಗಳು ಮತ್ತು ಪ್ರಾಣಿಗಳ ಆವಾಸ ಸ್ಥಾನವಾಗಿವೆ. ಶತಮಾನಗಳಷ್ಟು ಹಳೆಯದಾದ ಕೆಲವು ಮರಗಳು ಇಲ್ಲಿವೆ ಎಂದು ಮರಗಳ ಮಹತ್ವ ತಿಳಿಸಿದರು.

English summary
Bengaluru: Government is all set to ax trees that store 121 tonnes of carbon annually, says Azim Premji Univerisyt and Vriksha Foundation report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X