ನೊಂದಣಿಯಾಗದ ಮದರಸ, ಮಠ, ಚರ್ಚ್ಗಳಿಗೆ ಶಾಕ್!
ಬೆಂಗಳೂರು, ಮಾರ್ಚ್ 20: ರಾಜ್ಯದ ಹಲವು ಭಾಗಗಳಲ್ಲಿ ಚರ್ಚುಗಳು, ಮಠಗಳು, ಮದರಸಗಳು ಮತ್ತು ಎನ್‌ಜಿಒಗಳು ಸರಿಯಾಗಿ ನೊಂದಣಿಯಾಗದೆಯೇ ಕಾರ್ಯನಿರ್ವಹಿಸುತ್ತಿವೆ. ಈ ಬಗ್ಗೆ ಆಗ್ಗಾಗೆ ದೂರುಗಳು ಕೂಡ ಕೇಳಿ ಬರುತ್ತಿವೆ. ಹೀಗಾಗಿ ಕ್ರಮ ಕೈಗೊಂಡಿರುವ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬೆಂಗಳೂರು ದಕ್ಷಿಣ (ಕೆಂಗೇರಿ) ತಾಲೂಕು ವ್ಯಾಪ್ತಿಯಲ್ಲಿ ದಾಖಲೆಗಳಿಲ್ಲದೆ, ನೊಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್, ಮಠ, ಎನ್ಜಿಓಗಳಿಗೂ ನೋಂದಣಿಗೆ ಗಡುವು ನೀಡಲಾಗಿದೆ. ನೊಂದಣಿ ಆಗದಿದ್ದರೇ ಇವುಗಳಿಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ.

ನೊಂದಣಿಯಾಗದೇ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್ ಮಠ, ಎನ್ಜಿಓಗಳು ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ 2015 ಕಲಂ 41ರ ಅನ್ವಯ ಕಡ್ಡಾಯವಾಗಿ ಮುಂದಿನ ತಿಂಗಳ ಏಪ್ರಿಲ್ 20ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.
ಆದೇಶದಲ್ಲಿ ಇರುವುದೇನು?
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೆಂಗಳೂರು ದಕ್ಷಿಣ (ಕೆಂಗೇರಿ) ತಾಲ್ಲೂಕು ವ್ಯಾಪ್ತಿಯಲ್ಲಿ ಯಾವುದೇ ಸ್ವಯಂ ಸೇವಾ ಸಂಸ್ಥೆಗಳು (NGO ) ಹಾಗೂ ಮಠಗಳು, ಮದರಸ ಹಾಗೂ ಚರ್ಚ್‌ಗಳಲ್ಲಿ ಮಕ್ಕಳನ್ನು ದಾಖಲಿಸಿ ಮಕ್ಕಳ ಪಾಲನಾ ಸಂಸ್ಥೆಗಳನ್ನು ಸರ್ಕಾರದ ನೋಂದಣಿ ಇಲ್ಲದೇ ನಡೆಸುತ್ತಿದ್ದರೆ ಹಾಗೂ ಹೊಸ ಮಕ್ಕಳ ಪಾಲನಾ ಸಂಸ್ಥೆಯನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವವರು ಬಾಲನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015 ಕಲಂ 41 ರನ್ವಯ ಕಡ್ಡಾಯವಾಗಿ ಏಪ್ರಿಲ್ 20ರೊಳಗೆ ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 27/17, 2ನೇ ಮಹಡಿ, ಅಕ್ಷಯ ಸ್ಟೇರ್, 80 ಅಡಿ ವರ್ತುಲ ರಸ್ತೆ, ಪಾಪರೆಡ್ಡಿಪಾಳ್ಯ, ನಾಗರಭಾವಿ-2 ನೇ ಹಂತ ಬೆಂಗಳೂರು ದಕ್ಷಿಣ (ಕೆಂಗೇರಿ) ಕಛೇರಿ ಇ-ಮೇಲ್ [email protected], ದೂರವಾಣಿ ಸಂಖ್ಯೆ 080-23442233, ಕಚೇರಿಯನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಂಗಳೂರು ನಗರ ಜಿಲ್ಲೆ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.












Click it and Unblock the Notifications