ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೂಡ್ಸ್ ಶೆಡ್ ರಸ್ತೆ ಸಂಚಾರಕ್ಕೆ ಮುಕ್ತ, ಸವಾರರ ಸುತ್ತಾಟಕ್ಕೆ ತೆರೆ

|
Google Oneindia Kannada News

ಬೆಂಗಳೂರು, ಜುಲೈ 08: ಬೆಂಗಳೂರಿನ ಹೃದಯ ಭಾಗದಲ್ಲಿರುವ ಗೂಡ್ಸ್ ಶೆಡ್ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದು ವಾಹನ ಸವಾರರ ಸಂಚಾರಕ್ಕೆ ಮುಕ್ತವಾಗಿದೆ. ಡಾ. ಟಿ. ಸಿ. ಎಂ ರಾಯನ್ ರಸ್ತೆಗೆ ಸಂಪರ್ಕವನ್ನು ಕಲ್ಪಿಸುವ ರಸ್ತೆಯಿದಾಗಿದ್ದು ವೈಟ್ ಟಾಪಿಂಗ್ ಕಾಮಗಾರಿಯಿಂದ ಜನ ಬೇಸತ್ತು ಹೋಗಿದ್ದರು. ಇದೀಗ ಕಾಮಗಾರಿ ಪೂರ್ಣವಾಗಿ ಜನರ ಸಂಚಾರಕ್ಕೆ ಅನುಕೂಲವಾಗಿದೆ.

2021ರ ಆಗಸ್ಟ್‌ನಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ವೈಟ್ ಟಾಪಿಂಗ್ ಮಾದರಿಯಲ್ಲಿ ರಸ್ತೆಯನ್ನು ಅಭಿವೃದ್ದಿಗೊಳಿಸುವುದಾಗಿ ಬಿಬಿಎಂಪಿ ತಿಳಿಸಿತ್ತು. 1.31 ಕಿಮೀ ದೂರದ ಗೂಡ್ಸ್ ರಸ್ತೆಗೆ 12 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿ ಮೂರು ತಿಂಗಳಲ್ಲಿ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗಿ ಬರೋಬ್ಬರಿ ಹತ್ತು ತಿಂಗಳ ಬಳಿಕ ಜನರ ಬಳಕೆಗೆ ಅಣಿಯಾಗಿದೆ.

ಗೂಡ್ಸ್ ಶೆಡ್ ರಸ್ತೆಯ ಬೇಲಿ ಮಠದ ರಸ್ತೆಯಿಂದ ಶಾಂತಲಾ ವೃತ್ತದವರೆಗೂ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಪಾದಚಾರಿ ಮಾರ್ಗ ಸೇರಿ ಕೆಲವೆಡೆ ಸಿವಿಲ್ ಕೆಲಸಗಳು ಬಾಕಿಯಿದ್ದು 10- 12 ದಿನಗಳಲ್ಲಿ ಕಾಮಕಾರಿಯನ್ನು ಪೂರ್ಣಗೊಳಿಸುವುದಾಗಿ ಬಿಬಿಎಂಪಿ ಯೋಜನ ವಿಭಾಗದ ಮುಖ್ಯ ಇಂಜಿನಿಯರ್ ಲೋಕೇಶ್ ತಿಳಿಸಿದ್ದಾರೆ.

ಬಂಡೆ ಮತ್ತು ಒಳಚರಂಡಿ ಕಾಮಗಾರಿಯಿಂದ ವಿಳಂಬ

ಬಂಡೆ ಮತ್ತು ಒಳಚರಂಡಿ ಕಾಮಗಾರಿಯಿಂದ ವಿಳಂಬ

ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಅಂಬೇಡ್ಕರ್ ಡೌನ್ ರ್ಯಾಂಪ್ ನಿಂದ ಬೇಲಿ ಮಠದ ಅಡ್ಡರಸ್ತೆಯಲ್ಲಿ ಕಾಟನ್ ಪೇಟೆ ಸಂಪರ್ಕದ ಮೊದಲ ಹಂತದ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಕಾಮಗಾರಿ ಪ್ರಾರಂಭದ ಬಳಿಕ ಹೆಚ್ಚುವರಿ ಒಳಚರಂಡಿ ಮತ್ತು ನೀರಿನ ಕೊಳವೆಗಳನ್ನು ಅಳವಡಿಸಬೇಕಾಯಿತು. ಆದರೆ ಈ ಮಾರ್ಗದಲ್ಲಿ ಬಂಡೆ ಸಿಕ್ಕಿತ್ತು. ಬಡೆಯನ್ನು ಹೊಡೆದು ಕಾಮಗಾರಿಯನ್ನು ಮುಂದುವರೆಸಬೇಕಾಯಿತು. ಇದರ ಜೊತೆ ರಾಜರ ಕಾಲದಲ್ಲಿ ನಿರ್ಮಿಸಲಾಗಿದ್ದ ಒಳಚರಂಡಿ ಪೈಪುಗಳನ್ನು ಮರು ನಿರ್ಮಾಣ ಮಾಡಬೇಕಾಗಿದ್ದ ಕಾರಣ ಕಾಮಗಾರಿ ವಿಳಂಬವಾಗಿದೆ. ಇದರ ಜೊತೆಗೆ ಮಳೆಯ ಬಿಟ್ಟು ಬಿಡದೇ ಕಾಡಿದ್ದರಿಂದ ಕಾಮಗಾರಿ ತಡವಾಗಿದೆ.

ಐದು ಕಿಮೀ. ಸಂಚಾರ ಸಮಸ್ಯೆಯಾಗಿತ್ತು

ಐದು ಕಿಮೀ. ಸಂಚಾರ ಸಮಸ್ಯೆಯಾಗಿತ್ತು

ವೈಟ್ ಟಾಪಿಂಗ್ ಕಾಮಗಾರಿಯಿಂದಾಗಿ ಗೂಡ್ಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಭಂದವನ್ನು ಹೇರಲಾಗಿತ್ತು. ಇದರಿಂದಾಗಿ ಮೈಸೂರು ಸರ್ಕಲ್ ನಿಂದ ಬಾಡಿ ಬಿಲ್ಡರ್ ಜಂಕ್ಷನ್, ಸರ್ವಿಸ್ ರಸ್ತೆಯ ಮೂಲ ಸಿರ್ಸಿ ಜಂಕ್ಷನ್, ಬಿನ್ನಿ ಮಿಲ್ ಸರ್ಕಲ್‌ನಿಂದ ಎಡ ತಿರುವು ಪಡೆದು ಜೆಜೆ ನಗರ ಜಂಕ್ಷನ್, ಬಿನ್ನಿಮಿಲ್ ಟ್ಯಾಂಕ್ ರಸ್ತೆ, ಬಾಳೆಕಾಯಿ ಮಂಡಿ , ಟ್ಯಾಂಕ್ ರಸ್ತೆ, ಹಳೇ ಮೈಸೂರು ರಸ್ತೆ, ಓಕಳಿಪು ಜಂಕ್ಷನ್ ಮಾರ್ಗವಾಗಿ ಮೆಜೆಸ್ಟಿಕ್ ಅನ್ನು ತಲುಪಬೇಕಿತ್ತು. ಗೂಡ್ಸ್ ಶೆಡ್ ರಸ್ತೆ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಅನವಶ್ಯಕ ಸುತ್ತಾಟಕ್ಕೆ ಕಡಿವಾಣ ಬಿದ್ದಿದೆ.

ಕಾಮಗಾರಿಗೆ ಸಂಬಂಧಿಸಿದ ವಿವರ

ಕಾಮಗಾರಿಗೆ ಸಂಬಂಧಿಸಿದ ವಿವರ

ಗೂಡ್ಸ್ ಶೆಡ್ ರಸ್ತೆ ಕೇವಲ 1.31 ಕಿಮೀ ಉದ್ದದ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಅಡೆತಡೆಗಳ ನಡುವೆ ಪೂರ್ಣಗೊಂಡಿದೆ. ಈ ಕಾಮಗಾರಿಯು 2021ರ ಆಗಸ್ಟ್‌ನಲ್ಲಿ ಪ್ರಾರಂಭವಾಗಿತ್ತು. 11.88 ಕೋಟಿ ವೆಚ್ಚದಲ್ಲಿ ಯೋಜನೆ ಹಾಕಿಕೊಂಡಿದ್ದು ಮೂರು ತಿಂಗಳಿಗೆ ಆದರೂ 10 ತಿಂಗಳಿಗೆ ಕಾಮಗಾರಿ ಪೂರ್ಣಗೊಂಡಿದೆ.

ವಾಹನ ಸವಾರರು ಖುಷಿ

ವಾಹನ ಸವಾರರು ಖುಷಿ

ಗೂಡ್ಸ್ ಶೆಡ್ ರಸ್ತೆ ಕಾಮಗಾರಿಯು ಪೂರ್ಣವಾಗಿದ್ದು ವ್ಯಾಪಾರಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ""ಈ ರಸ್ತೆಯಲ್ಲಿ 10 ವರ್ಷದಿಂದ ಹೋಟೆಲ್ ನಡೆಸುತ್ತಿದ್ದೇನೆ. ಕಾಮಗಾರಿ ಪ್ರಾರಂಭವಾದ ಮೇಲೆ ವ್ಯಾಪಾರ ಪೂರ್ತಿ ಕಡಿಮೆಯಾಗಿತ್ತು. ಸ್ಥಳೀಯರು ಬಿಟ್ಟರೇ ಬೇರೆಯಾರು ಬರುತ್ತಿರಲಿಲ್ಲ. ಮೊದಲೆಲ್ಲಾ ವಾಹನ ಸವಾರರು ಬಂದು ಊಟವನ್ನು ಮಾಡುತ್ತಿದ್ದರು ಕಾಮಗಾರಿ ಪೂರ್ಣಗೊಂಡಿರುವುದರಿಂದ ಮೊದಲ ರೀತಿಯಲ್ಲೇ ವ್ಯಾಪಾರ ನಡೆಯುವ ನಿರೀಕ್ಷೆಯಿದೆ'' ಎಂದು ಮಹೇಶ್ ಎಂಬುವವರು ತಿಳಿಸಿದ್ದಾರೆ.

ಇನ್ನು ವಾಹನ ಸಾವಾರರಾದ ನಾಗೇಶ್ ಎಂಬುವವರು ""ನಾವು ಸುತ್ತಿ ಬಳಸಿ ಮೆಜೆಸ್ಟಿಕ್‌ಗೆ ಹೋಗಬೇಕಾಗಿತ್ತು. ಸಮಯ, ಪೆಟ್ರೋಲ್, ಟ್ರಾಫಿಕ್ ಕಿರಿಕಿರಿಯು ಹೆಚ್ಚಾಗಿತ್ತು. ಗೂಡ್ಸ್ ಶೆಡ್ ರಸ್ತೆಯ ಓಪನ್ ಆಗಿರುವುದರಿಂದ ಸಂತಸವಾಗಿದೆ'' ಎಂದು ತಿಳಿಸಿದ್ದಾರೆ.

Recommended Video

Kamran Akmal ಮನೆಯಿಂದ ಕುರಿ ಕದ್ದ ದುಷ್ಕರ್ಮಿಗಳು | *Cricket | Oneindia Kanada

English summary
The white topping of Goods Shed Road in the heart of Bengaluru has been completed and is open for motorists. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X