• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೆಟ್ರೋ ಬಾಡಿಗೆ ಬೈಕ್ ಗೆ ಹೆಚ್ಚಿದ ಬೇಡಿಕೆ: ರಾತ್ರಿ ಬಾಡಿಗೆ ಪಡೆಯುವವರೇ ಹೆಚ್ಚು

|

ಬೆಂಗಳೂರು, ಫೆಬ್ರವರಿ 27 : ನಮ್ಮ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ತಮ್ಮ ಮನೆಗಳಿಗೆ ತೆರಳಲು ಅನುಕೂಲವಾಗುವಂತೆ ಮೆಟ್ರೋ ಬೈಕ್ ಗಳನ್ನು ಈಗಾಗಲೇ ಬಳಕೆಗೆ ನೀಡಲಾಗಿದೆ. ಬಾಡಿಗೆ ಬೈಕ್ ಸೇವೆ ಆರಂಭವಾದ ಒಂದೇ ವಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದೇ ವಾರದಲ್ಲಿ ಸುಮಾರು 1,500 ರೈಡ್ ಗಳು ನಡೆದಿವೆ.

ಇದರಿಂದ ಪ್ರೇರಿತವಾಗಿರುವ ಮೆಟ್ರೋ ಬೈಕ್ ಸಂಸ್ಥೆಯು ಶೀಘ್ರದಲ್ಲೇ ಓಟಿಪಿ ಬೈಕ್ ಸೇವೆ ಆರಂಭಿಸಲು ಸಿದ್ಧವಾಗಿದೆ. ಮೆಟ್ರೋ ಬೈಕ್ ಸಂಸ್ಥೆ ಮೆಟ್ರೋ ಸಂಪರ್ಕ ಬಸ್ ಗಳ ಕೊರತೆ ನೀಗಿಸಲು ಫೆಬ್ರವರಿ 16 ರಿಂದ ನಗರದ ಸುಮಾರು 10-12 ಮೆಟ್ರೋ ನಿಲ್ದಾಣಗಳಲ್ಲಿ ಅಂದಾಜು ಸುಮಾರು ಒಂದು ಸಾವಿರ ಬೈಕುಗಳ ಮೆಟ್ರೋ ಬೈಕ್ ಸೇವೆ ಆರಂಭಿಸಿತ್ತು. ಪ್ರತಿ ಕಿ.ಮೀಗೆ 5 ರೂ ಬಾಡಿಗೆ ಪಡೆಯುತ್ತಿದೆ.

ನಮ್ಮ ಮೆಟ್ರೋ 36 ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಬಾಡಿಗೆ ಬೈಕ್

ಮೆಟ್ರೋ ಬೈಕ್ ಸೇವೆ ಬಯಸುವ ಗ್ರಾಹಕರು ಮೆಟ್ರೋ ಬೈಕ್ ಅಪ್ಲಿಕೇಷನ್ ಡೌನ್ ಲೋಡ ಮಾಡಿಕೊಂಡು ಸೇವೆ ಪಡೆಯಬಹುದು. ಸಾಫ್ಟ್ ವೇರ್ ಕಂಪನಿ ಉದ್ಯೋಗಿಗಳು ವಿವಿಧ ಕಂಪನಿಗಳ ನೌಕರರು ಈ ಸೇವೆಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಮೆಟ್ರೋ ನಿಲ್ದಾಣದಲ್ಲಿ ಕನಿಷ್ಠ 20 ರಿಂದ 25 ಬೈಕ್ ಗಳಿವೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 60 ರಿಂದ 65 ಬೈಕ್ ಗಳು, ಮೆಜೆಸ್ಟಿಕ್ ನಲ್ಲಿ30 ರಿಂದ 35 ಬೈಕ್ ಗಳು ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಬೈಕ್ ಸೇವೆ ನೀಡಲಾಗಿದೆ.

Good response for Metro bikes at Metro station

15 ದಿನ, ತಿಂಗಳಿಗೂ ಹಣ ಪಾವತಿ: ದಿನ ದಿನವೂ ಬಾಡಿಗೆ ಪಾವತಿಸಲು ಸಾಧ್ಯವಿಲ್ಲ, ತಿಂಗಳು ಅಥವಾ 15 ದಿನ ಇಲ್ಲವೇ 10 ದಿನಕ್ಕೆ ಮಾತ್ರ ಬೈಕ್ ನ್ನು ಬಾಡಿಗೆಗೆ ಪಡೆಯಲು ಕೂಡ ಅವಕಾಶವಿದೆ. ಗ್ರಾಹಕರು ತಮಗೆ ಎಷ್ಟು ದಿನಕ್ಕೆ ಬೈಕ್ ಬೇಕು ಎಂದು ನಿರ್ಧರಿಸಬೇಕು. ಅದಕ್ಕೂ ಮುಂಚೆ ಎಷ್ಟು ಕಿ.ಮೀ, ಎಷ್ಟು ದಿನ ಬಳಸುತ್ತೇವೆ ಎಂಬುದನ್ನು ಲೆಕ್ಕಾಚಾರ ಮಾಡಿ ಹಣ ಪಾವತಿಸಬಹುದಾಗಿದೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Namma metro got good response for Metro bikes. Now you can take a bike from your nearest station to home for night and drop it back in the morning.The primary objective of this initiative is to provide a solution to the first and last mile of commute problems.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more