ಗ್ರೇಟರ್ ಬೆಂಗಳೂರು ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ ಫಿಕ್ಸ್ , ಮಹತ್ವದ ಅಪ್ಡೇಟ್ಸ್
ಬೆಂಗಳೂರು (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಕರ್ನಾಟಕದ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗುತ್ತಿದೆ. ಬೆಂಗಳೂರು ಸ್ಥಳೀಯ ಪಾಲಿಕೆ ಸೇರಿದಂತೆ ಕರ್ನಾಟಕದ ವಿವಿಧ ಪಾಲಿಕೆಗಳ ಚುನಾವಣೆ ಬಾಕಿ ಇದೆ. ಬೆಂಗಳೂರು ಪಾಲಿಕೆಯ ಚುನಾವಣೆಯು ಬರೋಬ್ಬರಿ 5 ವರ್ಷಗಳಿಂದ ನಡೆದಿಲ್ಲ. ಇದೀಗ ಈ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ ಕೊನೆಗೂ ಕೂಡಿ ಬಂದಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಸದ್ದಿಲ್ಲದೆ ಸಿದ್ಧತೆ ಶುರು ಮಾಡಿಕೊಂಡಿದೆ. ಈ ಬಗ್ಗೆ ಕರ್ನಾಟಕದ ಸಚಿವರೊಬ್ಬರು ಮಾಹಿತಿ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಕಾಂಗ್ರೆಸ್ ಶಾಸಕರೊಂದಿಗೆ ಸಭೆ ನಡೆಸುತ್ತಿದೆ. ಈ ಮೂಲಕ ಬೆಂಗಳೂರು ಚುನಾವಣೆಗೆ ಕಾಲ ಸಮೀಪಿಸಿದೆ ಎಂದೇ ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಅವರು, ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನಾನು ಸಹ ಸುರ್ಜೇವಾಲಾ ಅವರನ್ನು ಭೇಟಿ ಮಾಡ್ತೇನೆ, ಕಳೆದ ಬಾರಿ ಭೇಟಿ ಸಾಧ್ಯವಾಗಲಿಲ್ಲ. ಕೆಲವು ಮಂತ್ರಿಗಳ ಜತೆ ಸುರ್ಜೇವಾಲಾ ಅವರು ಚರ್ಚೆ ನಡೆಸ್ತಿದ್ದಾರೆ. ಶಾಸಕರ ಜತೆಗೆ ಈಗಾಗಲೇ ಚರ್ಚೆ ನಡೆಸಿದ್ದಾರೆ. ಅವರ ಕ್ಷೇತ್ರಗಳ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೇ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಶಾಸಕರ ಜತೆ ಮಾತಾಡಿದ್ದಾರೆ. ಈ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸುಳಿವನ್ನು ನೀಡಿದ್ದಾರೆ. ಇದರ ಹಿಂದೆ ಏನು ಉದ್ದೇಶ ಇದೆಯೋ ಗೊತ್ತಿಲ್ಲ. ಸುರ್ಜೇವಾಲಾ ಅವರು ಸಚಿವರ ಮೌಲ್ಯಮಾಪನ ನಡೆಸ್ತಿರುವ ಬಗ್ಗೆ ಗೊತ್ತಿಲ್ಲ. ಆಥರ ಏನೂ ನಮ್ಮಗ್ಯಾರಿಗೂ ತಿಳಿಸಿಲ್ಲ, ಹಾಗಿದ್ದಿದ್ರೆ ನಮ್ಮಿಂದ ಇಲಾಖೆ ಪ್ರಗತಿ ಬಗ್ಗೆ ವರದಿ ಕೇಳ್ತಿದ್ದರು ಎಂದೂ ಹೇಳಿದ್ದಾರೆ.
ನಮ್ಮಿಂದ ಯಾವುದೇ ವರದಿ ಕೇಳಿಲ್ಲ. ಸಚಿವರ ಮೌಲ್ಯಮಾಪನ ನಡೆಸ್ತಿದ್ದಾರೆ ಅಂತ ನನಗೆ ಅನಿಸಲ್ಲ ಹಿಂದೆ ಎಸ್ ಎಂ ಕೃಷ್ಣ ಅವಧಿಯಲ್ಲಿ ಸಚಿವರ ಮೌಲ್ಯಮಾಪನ ನಡೆಸಲಾಗಿತ್ತು. ನಮ್ಮ ಜತೆ ಎಲ್ಲ ಆಗ ಚರ್ಚೆ ನಡೆಸಿದ್ದರು. ಸಚಿವರ ಮೌಲ್ಯಮಾಪನ ವಿಚಾರ ಇಲ್ಲ ಎಂದು ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ಸಿಗಂದೂರು ಸೇತುವೆ ಶಿಷ್ಟಾಚಾರ ವಿಚಾರ: ಕೇಂದ್ರದ ಸರ್ಕಾರದ ನಡೆಗೆ ಜಿ. ಪರಮೇಶ್ವರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಶಿಷ್ಟಾಚಾರ ಪಾಲಿಸಿಲ್ಲ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿಲ್ಲ. ಕೇಂದ್ರ ಸಚಿವ ನಿತಿನ್ ಗಡ್ಕರಿ ಆಹ್ವಾನ ಕೊಟ್ಟಿಲ್ಲ. ಇದು ಸರಿಯಲ್ಲ ಸಿಎಂ ಅವರು ಕಾರ್ಯಕ್ರಮ ಎರಡು ದಿನ ಮುಂದೂಡಿ ಅಂದರೂ ಗಡ್ಕರಿ ಅವರು ಕೇಳಲಿಲ್ಲ. ಎರಡು ದಿನ ಕಾರ್ಯಕ್ರಮ ಮುಂದೂಡಿದ್ದರೆ ಏನು ತೊಂದರೆ ಆಗ್ತಿತ್ತೋ ಗೊತ್ತಿಲ್ಲ ನನಗೆ. ಗಡ್ಕರಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ, ಅವರು ಒಳ್ಳೆಯ ಕೆಲಸಗಾರ, ಕ್ರಿಯಾಶೀಲ ಸಚಿವರು ಅನ್ನೋದನ್ನು ಕೇಳಿದ್ದೀವಿ ಎಂದಿದ್ದಾರೆ.
ಆದರೆ ಯೋಜನೆಯೊಂದರ ಉದ್ಘಾಟನೆ ಒಂದೆರಡು ದಿನ ಮುಂದೂಡುವ ಬಗ್ಗೆ ಅರ್ಥ ಮಾಡಿಕೊಳ್ಳದಿದ್ದರೆ ಏನು ಹೇಳೋಕ್ಕಾಗುತ್ತೆ. ಯಾವುದೇ ಯೋಜನೆ ಇದ್ದರೂ ರಾಜ್ಯದಲ್ಲಿ ಕೇಂದ್ರ ಸರ್ಕಾರ ರಾಜ್ಯದ ವಿಶ್ವಾಸ ತಗೋಬೇಕು, ಇದೇ ಒಕ್ಕೂಟ ವ್ಯವಸ್ಥೆ ಸೇತುವೆಗೆ ಹೆಸರಿಡೋದಾಗಲೀ, ಶಿಷ್ಟಾಚಾರ ಪಾಲನೆ ಆಗಲೀ ಗೊಂದಲ ಮಾಡಬಾರದು. ಕ್ರೆಡಿಟ್ ತಗೊಳ್ಳೋದು ಬೇರೆ ವಿಚಾರ, ಆದ್ರೆ ಶಿಷ್ಟಾಚಾರವಾದ್ರೂ ಪಾಲಿಸಬೇಕಿತ್ತು ಅಲ್ವಾ ಎಂದು ಅವರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications