Bengaluru Airport: ವಿಮಾನ ನಿಲ್ದಾಣ ಮಾರ್ಗದ ಸಂಚರಿಸುವ ವಾಹನ ಸವಾರರಿಗೆ ಗುಡ್ ನ್ಯೂಸ್
Bengaluru Airport: ರಾಜ್ಯ ರಾಜಧಾನಿ ಬೆಂಗಳೂರು ಕೂಡ ಟ್ರಾಫಿಕ್ ನಗರ ಅಂತಲೇ ಹೆಸರುವಾಸಿಯಾಗಿದೆ. ಅದಲ್ಲೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ರಸ್ತೆಯಲ್ಲಿ ವಾಹನ ದಟ್ಟಣೆ ತುಸು ಹೆಚ್ಚಾಗಿಯೇ ಇರುತ್ತದೆ. ಇನ್ನು ಇದಕ್ಕೆ ಫುಲ್ ಸ್ಟಾಪ್ ಇಟ್ಟು ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಗುಡ್ ನ್ಯೂಸ್ ನೀಡಲು ಬಿಬಿಎಂಪಿ ಮುಂದಾಗಿದೆ.
ದಿನದಿಂದ ದಿನಕ್ಕೆ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೂ ಅಷ್ಟೇ ಪ್ರಮಾಣದಲ್ಲಿ ಟ್ರಾಫಿಕ್ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಇದೀಗ ಬಿಬಿಎಂಪಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ದ ಏರ್‌ಪೋರ್ಟ್ ರಸ್ತೆಯಲ್ಲಿ ಸಂಚರಿಸುವವರಿಗೆ ಗುಡ್‌ನ್ಯೂಸ್ ಕೊಡಲು ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಟ್ರಾಫಿಕ್ ಉಂಟಾಗುವ ರಸ್ತೆಗಳ ಪೈಕಿ ವಿಮಾನ ನಿಲ್ದಾಣ ಮಾರ್ಗದ ರಸ್ತೆ ಸಹ ಒಂದಾಗಿದೆ. ಆದ್ದರಿಂದ ಬಿಬಿಎಂಪಿ ಈ ಮಾರ್ಗದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲು ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ರಸ್ತೆಯಲ್ಲಿ ಪ್ರತಿನಿತ್ಯವು ಲಕ್ಷಾಂತರ ವಾಹನಗಳು ಸಂಚಾರ ಮಾಡುತ್ತವೆ. ಹೆಣ್ಣೂರು, ಬಾಗಲೂರು ಮಾರ್ಗದಲ್ಲಿ ಹೆಚ್ಚು ಟ್ರಾಫಿಕ್ ಉಂಟಾಗುತ್ತಲೇ ಇದೆ.
ಆದ್ದರಿಂದ ಟ್ರಾಪಿಕ್ ನಿಯಂತ್ರಣ ಮಾಡುವ ದೃಷ್ಟಿಯಿಂದ ಬಿಬಿಎಂಪಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ನಿರ್ಧರಿಸಿದೆ. ಹೆಣ್ಣೂರು ಜಂಕ್ಷನ್‌ನಿಂದ ಬಾಗಲೂರುವರೆಗೂ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ. ಈ ಕಾರಿಡಾರ್ ಆದರೆ ಚಿಕ್ಕಗುಬ್ಬಿ, ಕೊತ್ನೂರು, ಹೆಣ್ಣೂರು, ಬಾಗಲೂರು, ಔಟರ್ ರಿಂಗ್ ರೋಡ್, ಬೈರತಿ ಭಾಗಗಳಲ್ಲಿ ಸಂಚಾರ ದಟ್ಟಣೆ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತಾಗಲಿದೆ.
ಅಷ್ಟೇ ಅಲ್ಲದೆ, ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮಾರ್ಗಕ್ಕೂ ತುಂಬಾ ಅನುಕೂಲ ಆಗಲಿದೆ. ಇನ್ನು ಬಿಬಿಎಂಪಿ ಎಲಿವೇಟೆಡ್ ಕಾರಿಡಾರ್ ಪ್ರಸ್ತಾವನೆ ಇಟ್ಟಿದ್ದು, ಇದು ಯಾವಾಗ ಮುಕ್ತಾಯವಾಗುತ್ತದೆಯೋ ಎಂದು ಕಾದುನೋಡಬೇಕಿದೆ ಅಷ್ಟೇ. ಇದೀಗ ಬಹುತೇಕ ಮನೆಗಳ ಸದರೆಲ್ಲರ ಬಳಿ ವಾಹನಗಳನ್ನು ಕಾಣಬಹುದಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಬಹುತೇಕ ಮನೆಗಳಲ್ಲಿ ಪ್ರತಿ ಸದಸ್ಯರೂ ವಾಹನಗಳನ್ನು ಹೊಂದಿದ್ದಾರೆ.
ಹೀಗೆ ನಗರದಲ್ಲಿ ದಿನದಿದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಮನೆಯ ಪ್ರತಿ ಸದಸ್ಯನ ಬಳಿ ವಾಹನ ಇದೆ ಎಂದರೆ ಅವರು ಸಮಯ ಉಳಿಸಲು ದ್ವಿಚಕ್ರ ವಾಹನಗಳಲ್ಲಿಯೇ ತಮ್ಮ ಕಚೇರಿಗಳಿಗೆ ಹೋಗುವವರಿದ್ದಾರೆ. ಮೆಟ್ರೋ ಮಾರ್ಗದಲ್ಲಿರುವವರು ಮಾತ್ರ ವಾಹನಗಳನ್ನು ಅವಲಂಬನೆ ಮಾಡುವುದು ಕಡಿಮೆ. ಅಂತಹವರು ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಮೆಟ್ರೋವನ್ನು ಅವಲಂಬೆ ಮಾಡಿರುತ್ತಾರೆ.












Click it and Unblock the Notifications