ಬೆಂಗಳೂರಿನ ಆಸ್ತಿದಾರರಿಗೆ ಗುಡ್‌ನ್ಯೂಸ್: ವಲಯ ಮಟ್ಟದ ಇ - ಖಾತಾ ಮೇಳಕ್ಕೆ ಡಿ.ಕೆ ಶಿವಕುಮಾರ್ ಚಾಲನೆ!

E-Khata Mela: ಬೆಂಗಳೂರಿನ ಆಸ್ತಿದಾರರಿಗೆ ಇ - ಖಾತಾ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಗುಡ್‌ನ್ಯೂಸ್ ನೀಡಿದೆ. ಇ ಖಾತಾ ಪಡೆದುಕೊಳ್ಳುವುದಕ್ಕೆ ಆಸ್ತಿದಾರರು ಸಂಕಷ್ಟ ಎದುರಿಸುತ್ತಿದ್ದರು. ಇದನ್ನು ತಪ್ಪಿಸುವುದಕ್ಕೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಹೊಸ ಯೋಜನೆಯನ್ನು ರೂಪಿಸಿದೆ. ರಾಜ್ಯದಲ್ಲಿ ಇ ಖಾತಾ ನೀಡುವುದಕ್ಕೆ ಪ್ರಾರಂಭಿಸಿ ಬರೋಬ್ಬರಿ 1 ವರ್ಷ ಆಗುತ್ತಿದೆ. ಆದರೆ ಇಂದಿಗೂ ಇ ಖಾತಾದಲ್ಲಿನ ಗೊಂದಲಗಳು ಮುಂದುವರಿದಿದೆ. ಅಲ್ಲದೇ ಬೆಂಗಳೂರಿನಲ್ಲಿ 25 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದರೂ 5,34,674 ಸ್ವತ್ತುಗಳಿಗೆ ಇಲ್ಲಿಯ ವರೆಗೆ ಇ ಖಾತಾ ಸೌಲಭ್ಯ ಸಿಕ್ಕಿದೆ.

ಬಿಬಿಎಂಪಿ ಯಲಹಂಕ ವಲಯದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರ ನಗರ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ವಲಯ ಮಟ್ಟದ ಬೃಹತ್ ಇ-ಖಾತಾ ಮೇಳ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಚಾಲನೆ ನೀಡಿದರು.

Good news for property owners in Bengaluru D K Shivakumar launches zonal level e-Khata Mela

* ಬಿಬಿಎಂಪಿ‌ ವ್ಯಾಪ್ತಿಯಲ್ಲಿ‌ ಬರುವ 25 ಲಕ್ಷ ಸ್ವತ್ತುಗಳ ಪೈಕಿ ಈಗಾಗಲೇ 5,34,674 ಸ್ವತ್ತುಗಳಿಗೆ ಖಾತಾದಾರರು ಅಂತಿಮ ಇ-ಖಾತಾವನ್ನು ಪಡೆದಿದ್ದು, ಬಿಬಿಎಂಪಿ e-Khata ವ್ಯವಸ್ಥೆಗೆ ಭಾರತ ಸರ್ಕಾರದಿಂದ 2024-25 ನೇ ಸಾಲಿನ "ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ" ಸಂದಿದೆ.

* ಯಲಹಂಕ ವಲಯದಲ್ಲಿನ ಒಟ್ಟು 2,28,146 ಸ್ವತ್ತು ಗಳ ಪೈಕಿ ಇಲ್ಲಿಯವರೆಗೆ 71,055 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ.

* ಬ್ಯಾಟರಾಯನಪುರ ವಿಭಾಗದಲ್ಲಿನ ಒಟ್ಟು 1,81,135 ಸ್ವತ್ತುಗಳ ಪೈಕಿ 51,289 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ.

* ಇ-ಖಾತಾ ಮೇಳದ‌ ಸೌಲಭ್ಯವನ್ನು ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ, ಯಲಹಂಕ ವಲಯದ ಸಹಕಾರ ನಗರ ಆಟದ ಮೈದಾನದಲ್ಲಿ ಈ ಮೇಳವನ್ನು ನಾಳೆಯೂ ಮುಂದುವರೆಸಲಾಗುತ್ತದೆ. ಇ-ಖಾತಾ ಪಡೆಯಬೇಕಿರುವ ಸಾರ್ವಜನಿಕರು ತಮ್ಮ ಅಗತ್ಯ ದಾಖಲೆಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಎಂದು ಹೇಳಲಾಗಿದೆ.

* ಬಿಬಿಎಂಪಿ ಎಲ್ಲಾ ವಾರ್ಡ್‌ಗಳ ಕಂದಾಯ ಅಧಿಕಾರಿಗಳ ಕಚೇರಿ, ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಇ-ಖಾತಾ ಪಡೆಯಬಹುದು.

* ಜನಸೇವಕರ ಸೇವೆ‌ ಪಡೆದು ಇ-ಖಾತಾ ಅರ್ಜಿ ಸಲ್ಲಿಸಲು 080-49203888 ಗೆ ಕರೆ ಮಾಡಿದರೆ, ತಮ್ಮ ಮನೆಗೆ ಜನ ಸೇವಕರು ಬಂದು ಇ-ಖಾತಾಗೆ ಅರ್ಜಿ ಸಲ್ಲಿಸಲಿದ್ದಾರೆ.

ಈ ವೇಳೆ ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ ರೇವಣ್ಣ, ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಯಲಹಂಕ ವಲಯ ಆಯುಕ್ತರಾದ ಕರೀಗೌಡ, ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+