ಚಿಕ್ಕಪೇಟೆಯಲ್ಲಿ ಕೇಜಿಗಟ್ಟಲೇ ಚಿನ್ನ ಕೊಳ್ಳೆ

ಬೆಂಗಳೂರು, ಆ.4: ಚಿಕ್ಕಪೇಟೆ ಸಮೀಪದ ಆರ್‌.ಟಿ.ಸ್ಟ್ರೀಟ್‌ನ ಸುಪ್ರೀಂ ಡೀಲಕ್ಸ್ ವಸತಿ ಗೃಹವೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು, ಕೊಠಡಿಯ ಭದ್ರತಾ ಕಪಾಟಿನಲ್ಲಿದ್ದ 1.25 ಕೋಟಿ ರೂ.ಮೌಲ್ಯದ 4 ಕೆ.ಜಿ 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಮುಂಬೈ ಮೂಲದ ಹುಕುಂಸಿಂಗ್ ಹಾಗೂ ಸುನಿಲ್‌ಸಿಂಗ್ ಎಂಬುವರು ಸುಪ್ರೀಂ ಡೀಲಕ್ಸ್ ವಸತಿ ಗೃಹದ ನೆಲ ಮಹಡಿಯಲ್ಲಿ ಚಿನ್ನಾಭರಣ ಮಳಿಗೆ ನಡೆಸುತ್ತಿದ್ದಾರೆ. ಹುಕುಂಸಿಂಗ್ ಹೆಸರಿನಲ್ಲಿ ಒಂದು ವರ್ಷದ ಅವಧಿಗೆ ಚಿನ್ನಾಭರಣಗಳನ್ನು ಇಡಲು ಸುಪ್ರೀಂ ಲಾಡ್ಜ್‌ನ ನಾಲ್ಕನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 41ನ್ನು ಬಾಡಿಗೆಗೆ ತೆಗೆದುಕೊಂಡಿದ್ದರು.

gold bars

ಸಿಂಗ್ ಸಹೋದರರು ಬೆಂಗಳೂರಿನ ವಿವಿಧ ವ್ಯಾಪಾರಿಗಳಿಂದ ಬೇಡಿಕೆ ಬಂದ ಚಿನ್ನಾಭರಣಗಳನ್ನು ಮುಂಬಯಿಯಲ್ಲಿ ತಯಾರಿಸಿ ತರುತ್ತಿದ್ದರು. ಅಂಗಡಿ ವ್ಯವಹಾರ ನೋಡಿಕೊಳ್ಳಲು ವಿಜಯ್‌ಕುಮಾರ್ ಎಂಬಾತನನ್ನು ಸಿಂಗ್ ಸಹೋದರರು ಕೆಲಸಕ್ಕೆ ಇಟ್ಟುಕೊಂಡಿದ್ದರು. ಶನಿವಾರ ಹುಕುಂಸಿಂಗ್ ಮುಂಬಯಿಗೆ ಹೋಗಿದ್ದು, ಸುನಿಲ್‌ಸಿಂಗ್ ಮತ್ತು ವಿಜಯಕುಮಾರ್ ಬೇರೆ ಅಂಗಡಿಗಳಿಗೆ ಒಡವೆ ವಿತರಿಸಲು ಹೋಗಿದ್ದಾಗ ದುಷ್ಕರ್ಮಿಗಳು ಲಾಕರ್‌ ತೆರೆದು ಕಳ್ಳತನ ಮಾಡಿದ್ದಾರೆ.

6 ತಿಂಗಳ ಹಿಂದೆ ಕೀ ಕಳೆದು ಹೋಗಿತ್ತು: ಲಾಡ್ಜ್ ಕೊಠಡಿಯ 2 ಕೀಲಿಗಳ ಪೈಕಿ ಒಂದು ಕೀಲಿ 6 ತಿಂಗಳ ಹಿಂದೆಯೇ ಕಳೆದು ಹೋಗಿತ್ತು. ಇದರ ಬಗ್ಗೆ ಹುಕುಂಸಿಂಗ್ ಹಾಗೂ ಸುನಿಲ್‌ಸಿಂಗ್ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಕೀ ಸಿಕ್ಕವರೇ ಕೃತ್ಯ ಎಸಗಿರಬಹುದು. ಲಾಕರ್ ಕೀ ಕೂಡಾ ಡ್ರಾಯರ್‌ನಲ್ಲೇ ಇರಿಸುವ ವಿಚಾರ ತಿಳಿದವರು ಕೃತ್ಯ ಎಸಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದೇ ಸಿಸಿ ಕ್ಯಾಮೆರಾ:ವಸತಿ ಗೃಹದ ಪ್ರವೇಶ ದ್ವಾರದಲ್ಲೇ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಉಳಿದಂತೆ ಬೇರೆ ಯಾವುದೇ ಮಹಡಿಯಲ್ಲಿ ಸಿಸಿ ಕ್ಯಾಮೆರಾ ಇಲ್ಲ. ಆದರೆ, ಲಾಡ್ಜ್‌ಗೆ ಪ್ರವೇಶಿಸುವ ಪ್ರತಿಯೊಬ್ಬರೂ ಪ್ರವೇಶ ದ್ವಾರದ ಮೂಲಕವೇ ಹಾದು ಹೋಗಬೇಕಿರುವುದರಿಂದ ಕಳ್ಳರ ಚಹರೆ ಸಿಸಿ ಕ್ಯಾಮೆರಾದಲ್ಲಿ ಚಹರೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+