Get Updates
Get notified of breaking news, exclusive insights, and must-see stories!

ಬೆಂಗಳೂರು: ಸರಗಳ್ಳರಿಗೆ ಭಾನುವಾರವೂ ರಜೆ ಇಲ್ಲ!

ಬೆಂಗಳೂರು, ಸೆಪ್ಟೆಂಬರ್. 20: ರಾಜಧಾನಿಯಲ್ಲಿ ಸರಗಳ್ಳರ ಹಾವಳಿಗೆ ಬ್ರೇಕ್ ಬಿದ್ದಿಲ್ಲ. ಸೆಪ್ಟೆಂಬರ್ 20, ಭಾನುವಾರ ಮುಂಜಾನೆ ಸರಗಳ್ಳರು ಕೈ ಚಳಕ ತೋರಿಸಿದ್ದಾರೆ.

ಚಂದ್ರಾ ಲೇಔಟ್ ನಲ್ಲಿ ಮನೆ ಮುಂದೆ ನಿಂತಿದ್ದ ಸರಸ್ವತಿ ಎಂಬುವರ ಸರ ಅಪಹರಣ ಮಾಡಲಾಗಿದೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು 60 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದಾರೆ.[ಬೆಂಗಳೂರು: ವಿದ್ಯಾರಣ್ಯಪುರದಲ್ಲಿ 2 ಕಡೆ ಸರಗಳ್ಳತನ]

Gold chain snatching incidents continues in Bengaluru

ಸೆಪ್ಟೆಂಬರ್ 16 ರಂದು ಬಾಲಾಜಿ ಲೇಔಟ್ ನ ಎರಡು ಕಡೆ ಸರಗಳ್ಳತನ ಪ್ರಕರಣ ದಾಖಲಾಗಿತ್ತು. ಅದಕ್ಕೂ ಮುನ್ನ ಸೆಪ್ಟೆಂಬರ್ 9 ಮತ್ತು 10 ರಂದು ನಗರದ ವಿವಿಧೆಡೆ ಕೈಚಳಕ ತೋರಿಸಿದ್ದ ಕಳ್ಳರು ಎರಡೇ ದಿನದಲ್ಲಿ 10 ಕಡೆ ಸರಗಳ್ಳತನ ಮಾಡಿದ್ದರು.

ಸರಗಳ್ಳತನ ತಡೆ ಮತ್ತು ಅಪರಾಧಿಗಳನ್ನು ಹಿಡಿಯಲು ಪೊಲೀಸ್ ಇಲಾಖೆ ವಿಶೇಷ ತಂಡ ರಚನೆಮಾಡಿದ್ದರೂ ಪ್ರಯೋಜನವಾಗಿಲ್ಲ. ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೂಲಕ, ಬ್ಯಾನರ್ ಗಳ ಮೂಲಕವೂ ಸಹ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.[ಬೆಂಗಳೂರು: 2 ದಿನದಲ್ಲಿ 10 ಕಡೆ ಸರಗಳ್ಳರ ಕೈ ಚಳಕ]

ದೇವಾಲಯ ಸರಣಿ ಕಳ್ಳತನ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿವಿಧೆಡೆ ಮೂರು ದೇವಾಲಯಗಳನ್ನು ಕಳ್ಳತನ ಮಾಡಲಾಗಿದೆ. ಶನಿವಾರ ರಾತ್ರಿ ನಡೆದ ಪ್ರಕರಣ ಭಾನುವಾರ ಬೆಳಕಿಗೆ ಬಂದಿದೆ. ಕನಕಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ದೇವಾಲಯದ ಉತ್ಸವ ಮೂರ್ತಿ, ಕಾಣಿಕೆ ಹುಂಡಿ ಸೇರಿದಂತೆ ಆಭರಣಗಳನ್ನು ದೋಚಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+