ಕಲಾರ್ಣವ ಸಂಗೀತ ಹಬ್ಬದಲ್ಲಿ ವಿಜಯ್ ಪ್ರಕಾಶ್, ರಘು ದೀಕ್ಷಿತ್
ಗಾಯಕರಾದ ವಿಜಯ್ ಪ್ರಕಾಶ್, ರಘು ದೀಕ್ಷಿತ್, ಮೋಹನ್ ಅಳ್ವರಿಗೆ ಕಲಾರ್ಣವ ಗೌರವ, ವಿದ್ವಾಂಸ ಎಚ್.ಎಸ್.ವೇಣುಗೋಪಾಲ್ ಅವರ ನೇತೃತ್ವದ ಸಂಗೀತ ವಿದ್ಯಾಲಯ ಗೋಕುಲಂನಿಂದ ಕಲಾರ್ಣವ ಹೆಸರಿನಲ್ಲಿ ದಿನವಿಡೀ ಸಂಗೀತ ಹಬ್ಬ
ಬೆಂಗಳೂರು, ಜೂನ್ 02 : 'ಗೋಕುಲಂ' 2007 ರಿಂದ 'ಕಲಾರ್ಣವ' ಎಂಬ ಒಂದು ದಿನ ಸಂಗೀತ ಕಾರ್ಯಕ್ರಮವನ್ನು ಜೂನ್ ತಿಂಗಳಿನಲ್ಲಿ ಆಯೋಜಿಸುತ್ತಾ ಬಂದಿದೆ.
ಈ ಬಾರಿ 'ಕಲಾರ್ಣವ 2017' ಕಾರ್ಯಕ್ರಮವನ್ನು ಜೂನ್ 4ರಂದು ಕುಮಾರಸ್ವಾಮಿ ಲೇಔಟ್ ನಲ್ಲಿರುವ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಜೂನ್ 4ರ ಭಾನುವಾರ ಬೆಳಗ್ಗೆ 9.30ರಿಂದ ರಾತ್ರಿ 9.30ರ ತನಕ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಈ ಸಂದರ್ಭದಲ್ಲಿ 'ವಿದ್ಯಾರ್ಣವ' ಪ್ರಶಸ್ತಿಯನ್ನು ಮೋಹನ್ ಆಳ್ವಾ ಅವರಿಗೆ ಮತ್ತು 'ಕಲಾರ್ಣವ' ಪ್ರಶಸ್ತಿಯನ್ನು ಗಾಯಕ ವಿಜಯ್ ಪ್ರಕಾಶ್ ಮತ್ತು ರಘು ದೀಕ್ಷಿತ್ ಅವರಿಗೆ ಪ್ರಧಾನ ಮಾಡಲಾಗುತ್ತದೆ.

ಕಾರ್ಯಕ್ರಮದ ವಿವರ...
* ಬೆಳಗ್ಗೆ 9.30 ರಿಂದ 10.15 : 'ಆವಾಹನ' (ಗೋಕುಲಂ ಶಾಲೆಯ ವಿದ್ಯಾರ್ಥಿಗಳಿಂದ)
* 10.30 ರಿಂದ 12.15 : ಪ್ರಶಸ್ತಿ ಪ್ರಧಾನ ಸಮಾರಂಭ
ಮುಖ್ಯ ಅತಿಥಿಗಳು : ರಮೇಶ್ ಅರವಿಂದ್ ನಟ, ನಿರ್ದೇಶಕ, ಡಾ.ಶ್ರೀಧರ್ ಖ್ಯಾತ ಭರತನಾಟ್ಯ ಕಲಾವಿದ ಮತ್ತು ನಟ. ಶತಾವಧಾನಿ ಡಾ.ಆರ್ ಗಣೇಶ್.
• 12.30 ರಿಂದ 1.30 : 'ಬೆಳ್ಳಿ ತೆರೆಯ ಹೊನ್ನಿನ ಹಾಡು' (ಘಂಟಸಾಲಾ ಹಾಡುಗಳ ಒಂದು ನೆನೆಪು)
ಶತಾವಧಾನಿ ಆರ್.ಗಣೇಶ್, ಶ್ರೀ ಬಾಲಸುಬ್ರಮಣ್ಯ ಶರ್ಮಾ, ಶ್ರೀಮತಿ ಮಂಗಳಾ ರವಿ, ಶ್ರೀ ಶ್ರೀನಿವಾಸ ಆಚಾರ್, ಶ್ರೀ ಪ್ರವೀಣ್ ಡಿ.ರಾವ್, ಶ್ರೀ ಮಧುಸೂದನ, ಶ್ರೀಮತಿ ಶೃತಿ ಕಾಮತ್, ಶ್ರೀ ಮಹೇಶ ಸ್ವಾಮಿ.
• 2.30 ರಿಂದ 3.30 : 'ವಸಂತೋತ್ಸವ' ಶ್ರೀಮತಿ ಪದ್ಮಿನಿ ಶ್ರೀಧರ್ ಅವರಿಂದ. 'ಸಂಸ್ಕಾರ ರಾಮಾಯಣ' ನೃತ್ಯ ರೂಪಕ. (ನೃತ್ಯ ನಿರ್ದೇಶನ : ಗುರು ಶ್ರೀಮತಿ ಜ್ಯೋತಿ ಪಟ್ಟಾಭಿರಾಮನ್, ಸಾಧನ ಸಂಗಮ ನೃತ್ಯ ಶಾಲೆ).
* 3.45 ರಿಂದ 4.15 : 'ಹರಟೆ' ವಿತ್ ಶ್ರೀ ವಿನಾಯಕ ಜೋಶಿ
* 4.30 ರಿಂದ 5.30 : 'ದಕ್ಷಿಣೋತ್ತರ ಸಮ್ಮಿಲನ' (ಕರ್ನಾಟಿಕ್ ರಾಘಗಳಲ್ಲಿ ಹಿಂದೂಸ್ತಾನಿ)
ಶ್ರೀ ಎಸ್.ಶಂಕರ್, ಶ್ರೀ ಸಿ.ಎನ್.ಚಂದ್ರಶೇಖರ್, ಶ್ರೀ ಎನ್.ವಾಸುದೇವ್, ಶ್ರೀ ಜಗದೀಶ್ ಕುರ್ತಕೋಟಿ.
• 5.45 ರಿಂದ 6.45 'ಬಾನಿಕ' ಶ್ರೀಮತಿ ನಿರುಪಮಾ ರಾಜೇಂದ್ರ
* 7 ರಿಂದ 7.15 ಕರ್ನಾಟಿಕ್ ಸ್ಯಾಟ್ ಹಾಡುಗಾರಿಕೆ ಕುಮಾರಿ ವಾರಿಜಶ್ರೀ ಅವರಿಂದ
* 7.30ರಿಂದ 9.30 ಶ್ರೀ ಆರ್.ಕುಮಾರೇಶ್, ಡಾ.ಜಯಂತಿ ಕುಮಾರೇಶ್, ಶ್ರೀ ಅನಂತ ಆರ್.ಕೃಷ್ಣ, ಶ್ರೀ ಪ್ರಮಥ್ ಕಿರಣ್

ಕಲಾರ್ಣವ : 'ಗೋಕುಲಮ್' ನ ಇತಿಹಾಸದಲ್ಲಿ ಒಂದು ಪ್ರಮುಖ ಹೆಜ್ಜೆ 'ಕಲಾರ್ಣವ'. 2007ರಲ್ಲಿ ಪ್ರಥಮಬಾರಿಗೆ ಆಯೋಜಿಸಲಾದ ಲಲಿತಕಲೆಗಳ ಒಂದು ದಿನದ ಈ ಹಬ್ಬಕ್ಕೆ ಅಪಾರ ಜನ ಮನ್ನಣೆ ದೊರೆಯಿತು.
ಸಹೃದಯರ ಆಶಯದಂತೆ ಪ್ರತಿ ವರ್ಷ ಜೂನ್ ನ ಮೊದಲ ಭಾನುವಾರ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಸಂದರ್ಭದಲ್ಲಿ 'ವಿದ್ಯಾರ್ಣವ' ಮತ್ತು 'ಕಲಾರ್ಣವ' ಎಂಬ ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಶ್ರೇಷ್ಠ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಇದರ ಉದ್ದೇಶ.












Click it and Unblock the Notifications