ಮಕ್ಕಳ ಆಂಗ್ಲ ಜ್ಞಾನ ಹೆಚ್ಚಿಸುವ 'ಸ್ಪೆಲ್ಲಿಂಗ್ ಬೀ' ಸ್ಪರ್ಧೆ
ಬೆಂಗಳೂರು, ಜ. 25 : ಸಹಸ್ರ ದೀಪಿಕಾ ಶಾಲೆಯ 6 ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ 'ಸ್ಪೆಲ್ಲಿಂಗ್ ಬೀ' ಸ್ಪರ್ಧೆಯಲ್ಲಿ 23 ಸರ್ಕಾರಿ ಶಾಕೆಗಳಿಂದ 92 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
9 ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ಕೃಷ್ಣ ಅಯ್ಯರ್ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಮೊದಲ ಸ್ಥಾನ ಪಡೆದರು. ಸಂಧ್ಯಾ ಮತ್ತು ಬಿಂದು ಶ್ರೀ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಬಹುಮಾನವಾಗಿ ಲ್ಯಾಪ್ ಟಾಪ್ ಮತ್ತು ಟ್ರೋಫಿ ವಿತರಿಸಲಾಯಿತು.[ಪದವಿ ಓದಲು ಆರ್ಥಿಕ ಸಹಾಯ ಬೇಕೆ? ಈ ಪರೀಕ್ಷೆ ಬರೆಯಿರಿ]

ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಭಾಗವಹಿಸಿದ ಎಲ್ಲ ಮಕ್ಕಳಿಗೆ ಶಾಲಾ ಪಠ್ಯದಲ್ಲಿರುವ 500 ಶಬ್ದಗಳ ನಿಘಂಟು ವಿತರಿಸಲಾಯಿತು. ಕನ್ನಡ ಪ್ರೀತಿಯೊಂದಿಗೆ ಇಂಗ್ಲಿಷ್ ಕಲಿಕೆ ಹೆಚ್ಚಬೇಕು ಎಂಬ ಉದ್ದೇಶದಿಂದ ನಿಘಂಟು ನೀಡಲಾಯಿತು ಎಂದು ಆಯೋಜಕರು ತಿಳಿಸಿದರು.

ಕಳೆದ ವರ್ಷ 14 ಶಾಲೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. ಈ ಬಾರಿ ಅವುಗಳ ಸಂಖ್ಯೆ 23 ಕ್ಕೆ ಏರಿದೆ. ಆಧುನಿಕ ಸಮಾಜದಲ್ಲಿ ಮತ್ತು ಉದ್ಯೋಗ ಗಳಿಕೆಗೆ ಇಂಗ್ಲಿಷ್ ಅಗತ್ಯವಾಗಿದ್ದು ಸರ್ಕಾರಿ ಶಾಲೆಗಳಲ್ಲಿನ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಇಂಥ ಪ್ರಯತ್ನಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೈಕೋರ್ಟ್ ನ್ಯಾಯಾಧೀಶ ರಾಮ್ ಮೋಹನ್ ರೆಡ್ಡಿ ಹೇಳಿದರು.
ಭಾಷೆ ಬಳಕೆ, ಉಚ್ಚಾರಕ್ಕೆ ಒಂದು ಸ್ಪಷ್ಟ ಸ್ವರೂಪ ನೀಡುವಲ್ಲಿ ಇವು ಸಹಕಾರಿ. ಆಂಗ್ಲ ಭಾಷೆಯನ್ನು ಅದರ ಉಚ್ಚಾರದಿಂದಲೇ ಅರ್ಥೈಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.












Click it and Unblock the Notifications