ಬೆಂಗಳೂರು: ಓಯೋ ರೂಂನಲ್ಲಿ ನಡೆಯಿತು ಪ್ರಿಯಕರನಿಂದಲೇ ಪ್ರಿಯತಮೆಯ ಬರ್ಬರ ಹತ್ಯೆ
Murder Case: ರಿತೇಶ್ ಅಗರ್ವಾಲ್ ಮಾಲಿಕತ್ವದ ಓಯೊ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತದೆ. ಇನ್ನು ಇದೀಗ ಬೆಂಗಳೂರಿನ ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿನ ಓಯೊ ರೂಂನಲ್ಲಿ ಪ್ರಿಯಕರ ತನ್ನ ಪ್ರಿಯತಮೆಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಹಾಗಾದ್ರೆ ಪೊಲೀಸ್ ಮೂಲಗಳ ಪ್ರಕಾರ ಇದಕ್ಕೆ ಕಾರಣ ಏನೆಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅನೈತಿಕ ಸಂಬಂಧ ಹೊಂದಿರುವ ಶಂಕೆಯಿಂದ ಟೆಕ್ಕಿ ಪ್ರಿಯಕರ ತನ್ನ ಪ್ರಿಯತಮೆಯನ್ನ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಳೆದ ಜೂನ್ 6 ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಹರಿಣಿ (36) ಕೊಲೆಯಾದ ಪ್ರಿಯತಮೆ, ಟೆಕ್ಕಿ ಯಶಸ್ (25) ಕೊಲೆ ಆರೋಪಿ. ಇಬ್ಬರೂ ಕೆಂಗೇರಿ ನಿವಾಸಿಗಳಾಗಿದ್ದು, ಪ್ರಿಯತಮೆ ಅನೈತಿಕ ಸಂಬಂಧ ಹೊಂದಿದ ಶಂಕೆಯಿಂದ ಟೆಕ್ಕಿ ಯಶಸ್ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಸದ್ಯ ಪ್ರಕರಣ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎನ್ನಲಾಗಿದೆ.
ಓಯೋ ದರ್ಬಳಕೆ: ಓಯೊ ಅಂದ್ರೆ ಸಾಕು ಬಹುತೇಕ ಮಂದಿ ನಾಚಿ ನೀರಾಗುತ್ತಾರೆ. ಯಾಕೆಂದ್ರೆ ಇಲ್ಲಿಗೆ ಬರೀ ಪ್ರೇಮಿಗಳಷ್ಟೇ ಬರುತ್ತಾರೆ ಎನ್ನುವುದು ಅವರ ತಲೆಯಲ್ಲಿ ಫಿಕ್ಸ್ ಆಗಿಬಿಟ್ಟಿರುತ್ತದೆ. ಹೌದು ಈ ಆಲೋಚನೆ ಸರಿಯೇ.. ಯಾರೋ ಕೆಲ ಪ್ರೇಮಿಗಳು ಓಯೋ ರೂಂಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಉದಾಹರಣೆಗಳಿದ್ದು, ಇದರಿಂದ ಈ ಆಲೋಚನೆ ಬರುವುದು ಸಹಜ.
ಮತ್ತೊಂದೆಡೆ ನೋಡೋದಾದ್ರೆ ಕಡಿಮೆ ದರದಲ್ಲಿ ರೂಂಗಳು ಸಿಗುವುದು ಇಲ್ಲೇ. ಇಲ್ಲಿ ಬೇರೇ ಬೇರೆ ಊರುಗಳಿಂದ ಬರುವಂತಹವರಿಗೆ ತಂಗಲು ತುಂಬಾ ಸಹಾಯಕ ಆಗಿರುವ ಉದಾಹರಣೆಗಳು ಕೂಡ ಇವೆ.
ಇತ್ತೀಚಿನ ದಿನಗಳಲ್ಲಿ ಏನು ಆಗ್ಬಿಟ್ಟಿದೆ ಅಂದ್ರೆ, ತಂಬಾ ಜನರು ಯಾವುದೇ ವಸ್ತು, ವ್ಯಕ್ತಿಯಲ್ಲಿ ಒಂದೇ ಒಂದು ಋಣಾತ್ಮಾಕ ಅಂಕ ಕಂಡರೂ ಅದನ್ನು ಕೆಟ್ಟ ರೀತಿಯಲ್ಲೇ ನೋಡುತ್ತಾರೆ. ಆದರೆ, ಅವರೊಳಗಿನ ಒಳ್ಳೆಯ ಲಕ್ಷಣಗಳನ್ನು ಗುರುತಿಸುವವರು ಕಡಿಮೆಯಾಗಿಬಿಟ್ಟಿದ್ದಾರೆ.
ಬೆಂಗಳೂರಿನ ರೂಂ ಬಾಡಿಗೆ ವಿಚಾರಕ್ಕೆ ಬಂದರೆ, ಒಂದು ದಿನ ಸ್ಟೇ ಮಾಡಲು ಬಹುತೇಕ ಕಡೆಗಳಲ್ಲಿ ದರ ದುಪ್ಪಾಟ್ಟಾಗಿರುತ್ತದೆ. ಅದರಲ್ಲೂ ಬುಕ್ ಮಾಡುವ ಅವಕಾಶವೂ ಇರುವುದಿಲ್ಲ. ಒಯೋ ವಿಚಾರಕ್ಕೆ ಬಂದರೆ ಆಗಲ್ಲ. ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ತುಂಬಾ ಸುಲಭವಾಗಿದ್ದು, ಬೇರೆ ಊರುಗಳಿಂದ ಬಂದವರಿಗೆ ತುಂಬಾ ಸಹಾಯ ಆದಂತಾಗಲಿದೆ. ಈ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ.
ಬರೀ ಬೆಂಗಳೂರು ಅಷ್ಟೇ ಅಲ್ಲದೆ, ನಗರ ಪ್ರದೇಶಗಳಲ್ಲಿ ಓಯೋ ಕೊಠಡಿಗಳನ್ನು 24 ಗಂಟೆಗಳ ಆಧಾರದ ಮೇಲೆ ಬಾಡಿಗೆಗೆ ನೀಡಲಾಗುತ್ತದೆ. ಆದರೆ, ಎಲ್ಲರಿಗೂ 24 ಗಂಟೆಗಳ ಕೊಠಡಿಗಳು ಅಗತ್ಯವಿರುವುದಿಲ್ಲ. ಕೆಲವರಿಗೆ 10 ಗಂಟೆ, ಇನ್ನೂ ಕೆಲವರಿಗೆ 1 ಗಂಟೆ ಸಾಕಾಗಿರುತ್ತದೆ. ತಮ್ಮ ಅಗತ್ಯಕ್ಕೆ ತಕ್ಕಂತೆ ಕೊಠಡಿಗಳನ್ನು ಪಡೆದು ಆ ಕೊಠಡಿಗಳಿಗೆ ಕಡಿಮೆ ಬಾಡಿಗೆ ನೀಡಿದ್ರೆ ಅಂತಹ ಸೌಲಭ್ಯವನ್ನು ಗ್ರಾಹಕರು ಬಯಸುತ್ತಾರೆ. ಅಂತಹವರಿಗಾಗಿ ಓಯೋ ಹೊಸ ಆಯ್ಕೆಯೊಂದನ್ನ ತಂದಿದ್ದು, ತಾತ್ಕಾಲಿಕ ವಾಸ್ತವ್ಯಕ್ಕಾಗಿ ಓಯೋ ಕೊಠಡಿಗಳೆಂಬ ಆಯ್ಕೆಯಡಿಯಲ್ಲಿ ಬುಕ್ ಮಾಡಬಹುದು. ಈ ಆಯ್ಕೆಯಡಿಯಲ್ಲಿ ಓಯೋ ಕೊಠಡಿಯನ್ನು ಒಂದು ಗಂಟೆ ಕಾಲ ಸಹ ಬುಕ್ ಮಾಡಬಹುದು.












Click it and Unblock the Notifications