• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಿಯಕರನಿಗೆ ತನ್ನ ಪ್ರೀತಿಯನ್ನು ಸಾಬೀತು ಪಡಿಸಲು ಯುವತಿ ಮಾಡಿದ್ದೇನು?

|

ಬೆಂಗಳೂರು, ನವೆಂಬರ್ 2: ಒಂದೊಮ್ಮೆ ಪ್ರೀತಿ ಇಲ್ಲಿಗೆ ಸಾಕು ಎಂದು ಮನಸ್ಸಿನಲ್ಲಿ ಬಂದಾಕ್ಷಣ ಪ್ರಿಯಕರ ಅಥವಾ ಪ್ರಿಯತಮೆ ದೂರವಾಗುವುದು ಒಳಿತು. ಆದರೆ ಅದರ ಬದಲು ಚಾಲೆಂಜ್ ಮಾಡುವುದು, ಬೇರೆಯವರ ಪ್ರಾಣದ ಜತೆಗೆ ಆಟ ಆಡುವುದು ಮಾತ್ರ ಬೇಡ.

ಪ್ರಿಯಕರ ಮಾಡಿದ ಚಾಲೆಂಜ್‌ಗೆ ಯುವತಿ ಮೃತಪಟ್ಟಿರುವ ಬೆಂಗಳೂರಲ್ಲಿ ನಡೆದಿದೆ. ತನ್ನ ಪ್ರೀತಿ ಸಾಬೀತು ಮಾಡಲು ಹೋಗಿ ಯುವತಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ. ದಿವ್ಯಾ ಹಾಗೂ ಹರೀಶರದ್ದು ಒಂದೆರೆಡು ವರ್ಷಗಳ ಪ್ರೇಮವಿರಬಹುದು.

ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗ ಕಾಲು ಜಾರಿ ಬಿದ್ದು ಯುವಕ ಸಾವು

ಹರೀಶ್ ಗೆ ಇದೀಗ ದಿವ್ಯಾ ಬೇಡವೆನಿಸಿದೆ ಆತ ಇನ್ನೊಬಳ್ಳನ್ನು ಇಷ್ಟ ಪಡುತ್ತಿದ್ದ ಹಾಗಾಗಿ ಈ ವಿಚಾರವನ್ನು ಪ್ರಶ್ನಿಸಿದ ದಿವ್ಯಾಗೆ ಹರೀಶ್ ಚಾಲೆಂಜ್ ಒಂದನ್ನು ನೀಡಿದ್ದಾನೆ, ನಿನ್ನ ಪ್ರೀತಿಯ ಮೇಲೆ ನನಗೆ ಅನುಮಾನವಿದೆ ಪ್ರೀತಿ ಇರುವುದನ್ನು ಸಾಬೀತು ಪಡಿಸಿದರೆ ನಾನು ನಿನ್ನನ್ನು ನಂಬುತ್ತೇನೆ , ನಿನ್ನ ಪ್ರೀತಿಯ ಮೇಲೆ ನಂಬಿಕೆ ಇಲ್ಲದ ಕಾರಣ ನಾನು ಬೇರೊಬ್ಬ ಯುವತಿ ಜೊತೆ ಸ್ನೇಹ ಬೆಳೆಸಿದ್ದೇನೆ ಎಂದಿದ್ದ.

ಮ್ಯಾನ್ ಹೋಲ್‌ ಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವು

ಹಾಗಾಗಿ ಯುವತಿ ತನ್ನ ಪ್ರೀತಿ ನಿಜವಾದದ್ದು ಎಂದು ತೋರಿಸಬೇಕು ಅವನಿಗೆ ತನ್ನ ಮೇಲೆ ನಂಬಿಕೆ ಬರುವಂತೆ ಮಾಡಬೇಕು, ಹೇಗೆ ನಡೆದುಕೊಂಡರೆ ನಿನಗೆ ನನ್ನ ಪ್ರೀತಿಯ ಮೇಲೆ ನಂಬಿಕೆ ಬರುತ್ತದೆ ಎಂದು ಆಕೆ ಕೇಳಿದಾಗ ವಿಷಯ ಕುಡಿದು ಪ್ರೀತಿಯನ್ನು ಸಾಬೀತುಪಡಿಉ ಎಂದಿದ್ದಾನೆ, ಆಕೆ ತಕ್ಷಣವೇ ವಿಷ ಕುಡಿದು ಮನೆಗೆ ಹೋಗಿದ್ದಾಳೆ, ನಂತರ ವಾಂತಿ ಹೆಚ್ಚಾಗಿದೆ ಪೋಷಕರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಪೊಲೀಸರು ಇದೀಗ ಹರೀಶ್‌ನ ಹುಡುಕಾಟದಲ್ಲಿದ್ದಾರೆ.

English summary
A 20-year-old BCom student committed suicide by consuming poison on Tuesday night, after the youth she was in love with allegedly dared her to die.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X